ಝೀ ಕನ್ನಡ ವಾಹಿನಿಯಲ್ಲಿ ಆರಂಭದಲ್ಲಿ ವಿವಾದಗಳ ಮೂಲಕ ಸುದ್ದಿಯಾಗಿದ್ದ ಕರ್ಣ ಧಾರಾವಾಹಿ (Karna Kannada Serial) ಈಗ ಶುರುವಾಗಿ ಧೂಳೆಬ್ಬಿಸುತ್ತಿದೆ. ಕಿರುತೆರೆ ಲೋಕದಲ್ಲಿ ಸತತ ಎಂಟನೇ ವಾರವೂ ನಂಬರ್ ಒನ್ ಧಾರಾವಾಹಿ ಆಗಿ ಕರ್ಣ ಇತಿಹಾಸ ನಿರ್ಮಿಸಿದ್ದಾನೆ. ಎಲ್ಲ ಅಡೆತಡೆಗಳನ್ನು ದಾಟಿ ಕರ್ಣ ಅದ್ಧೂರಿ ಪ್ರಸಾರ ಕಾಣುತ್ತಿದೆ. ಜನರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಇದ್ದಾರೆ. ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕರ್ಣ ಧಾರಾವಾಹಿಯಲ್ಲಿ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್ ಕೂಡ ಇದ್ದಾರೆ.
ಸದ್ಯ ಕರ್ಣ ಧಾರಾವಾಹಿಯಲ್ಲಿ ನಿಧಿಗೆ (ಭವ್ಯಾ ಗೌಡ) ಕರ್ಣನನ್ನು ಎಲ್ಲಿಲ್ಲದ ಪ್ರೀತಿ. ಅದನ್ನು ಕರ್ಣನ ಆಕೆ ಹೇಳಿದ್ದಾಳೆ ಕೂಡ. ಆದರೆ, ಕರ್ಣ ಈವರೆಗೆ ಇದಕ್ಕೆ ಉತ್ತರಿಸಿಲ್ಲ.. ಹಾಗಂತ ನಿಧಿಯನ್ನು ತಿರಸ್ಕರಿಯೂ ಇಲ್ಲ. ತನಗೆ ಕುಟುಂಬದ ಪ್ರೀತಿಯನ್ನು ಕೊಟ್ಟಿರೋ ನಿಧಿ ಕಂಡರೆ ಕರ್ಣನಿಗೂ ಇಷ್ಟ. ಆದರೆ, ಹೇಳಿಕೊಳ್ಳುವಂತಹ ಸಂದರ್ಭ ಇನ್ನೂ ಬಂದಿಲ್ಲ. ಇಬ್ಬರೂ ಜೊತೆಯಾಗಿ ಪ್ರತಿದಿನ ಒಂದಿಷ್ಟು ಸಮಯ ಕಳೆಯುತ್ತಿದ್ದಾರೆ.
ಮತ್ತೊಂದೆಡೆ ನಿಧಿ ಅಕ್ಕ ನಿತ್ಯಾ, ತೇಜಸ್ ಜೊತೆ ಮದುವೆ ಆಗಲು ರೆಡಿಯಾಗಿದ್ದಾಳೆ. ಕರ್ಣದ ಮುಂದಾಳತ್ವದಲ್ಲೇ ಈ ಮದುವೆ ನಡೆಯಲಿದೆ. ಈ ಹಿಂದೆ ಅನೇಕ ಸಂದರ್ಭದಲ್ಲಿ ಅಪಾಯದಿಂದ ತೇಜಸ್ ಅನ್ನು ಪಾರು ಮಾಡಿದ್ದ ಕರ್ಣ. ಎಂಗೇಜ್ಮೆಂಟ್ಗೆ ತೇಜಸ್ನ ಅಪ್ಪ-ಅಮ್ಮ ಬರದಿದ್ದಾಗ ತಪ್ಪನ್ನೆಲ್ಲ ತನ್ನ ಮೈಮೇಲೆ ಹಾಕಿ ಮ್ಯಾನೇಜ್ ಮಾಡಿದ್ದ. ಬಳಿಕ ತೇಜಸ್ನ ಅಪ್ಪ-ಅಮ್ಮನಿಗೆ ಈ ಮದುವೆ ಇಷ್ಟವಿಲ್ಲ ಅದಕ್ಕೆ ಅವರು ಬಂದಿಲ್ಲ ಎಂಬ ವಿಚಾರ ಗೊತ್ತಾಯಿತು.
ಇದರಿಂದ ನಿತ್ಯಾ ತುಂಬಾ ಬೇಜಾರು ಮಾಡಿಕೊಂಡಿದ್ದಳು. ನಾನು ಅತ್ತೆ-ಮಾವ ಜೊತೆ ಎಲ್ಲರೂ ಒಪ್ಪಿಕೊಂಡು ಕೂಡುಕುಟುಂಬದಲ್ಲಿ ಜೀವನ ನಡೆಸಲು ಸಾಧ್ಯ ಇಲ್ಲ ಎಂದು ನೊಂದಿದ್ದಳು. ಆದರೀಗ ಕತೆಯಲ್ಲಿ ಟ್ವಿಸ್ಟ್ ತರಲಾಗಿದೆ. ನಿತ್ಯಾ ಮನೆಗೆ ತೇಜಸ್ ಅಪ್ಪ-ಅಮ್ಮ ಎಂದು ಹೇಳಿಕೊಂಡು ಇಬ್ಬರು ಬಂದಿದ್ದಾರೆ. ನಿಜಕ್ಕೂ ಅವರು ತೇಜಸ್ ಪಾಲಕರೇ ಎಂಬ ಸಂಶಯ ಬಂದಿದೆ.
ಅತ್ತ ಕರ್ಣ ಹಾಗೂ ನಿಧಿ ಮದುವೆ ಆಗಬೇಕು ಅಂತ ವೀಕ್ಷಕರು ಬಯಸುತ್ತಿದ್ದಾರೆ. ಆದರೆ ತೇಜಸ್ ಹಾಗೂ ನಿತ್ಯಾ ಮದುವೆ ಆಗೋದು ಅನುಮಾನ ಎಂಬಂತಾಗಿದೆ. ಮದುವೆ ಮಂಟಪದಲ್ಲಿ ತೇಜಸ್ ಹಾಗೂ ನಿತ್ಯಾ ಮದುವೆ ನಿಲ್ಲೋದು ಗ್ಯಾರಂಟಿ ಎನ್ನಲಾಗಿದೆ. ಹಸೆಮಣೆ ಮೇಲೆ ಕೂತ ನಿತ್ಯಾಳನ್ನು ಕಾಪಾಡಲು ಕರ್ಣ ಅವಳನ್ನು ಮದುವೆ ಆಗೋ ಚಾನ್ಸ್ ಜಾಸ್ತಿ ಇದೆಯಂತೆ. ಕರ್ಣ ಹಾಗೂ ನಿತ್ಯಾ ನಡುವೆ ಪ್ರೀತಿ ಇಲ್ಲ. ಕರ್ಣನಿಗೆ ಹೊಂದಾಣಿಕೆ ಮಾಡಿಕೊಂಡು ಗೊತ್ತಿದೆ, ನಿತ್ಯಾಳನ್ನು ಮದುವೆ ಆದರೂ ಕೂಡ ಅವನು ಸಹಿಸಿಕೊಂಡು ಹೋಗಬಹುದು. ಈರೀತಿ ಕತೆ ಸಾಗಲಿದೆ ಎಂಬ ಮಾತು ಕಿರುತೆರೆ ವಲಯದಿಂದ ಕೇಳಿಬರುತ್ತಿದೆ.
Shrirasthu Shubhamasthu Serial: ದಿಢೀರ್ ಮುಕ್ತಾಯ ಕಂಡಿತು ಝೀ ಕನ್ನಡದ ಈ ಧಾರಾವಾಹಿ