ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Raj: ಸೀರಿಯಲ್ ಜೊತೆಗೆ ಸಿನಿಮಾದಲ್ಲೂ ಕಿರಣ್ ರಾಜ್ ಬ್ಯುಸಿ: ಫೋಟೋ ಹಂಚಿಕೊಂಡ ಕರ್ಣ

ಕಿರಣ್ ರಾಜ್ ದೊಡ್ಡ ಗ್ಯಾಪ್ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಇದರಲ್ಲಿ ಇವರ ನಟನೆಗೆ ಅದ್ಭುತ ಪ್ರತಿಕ್ರಿಯೆ ಕೇಳಿಬರುತ್ತಿದೆ. ಜೊತೆಗೆ ಧಾರಾವಾಹಿಯ ಕೂಡ ಸತತವಾಗಿ ನಂಬರ್ ಒನ್ ಟಿಆರ್ಪಿಯಲ್ಲಿ ದಾಖಲೆ ನಿರ್ಮಿಸಿದೆ.

Kiran Raj movie and serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟ ಕಿರಣ್​ ರಾಜ್​ಗೆ (Kiran Raj) ದೊಡ್ಡ ಅಭಿಮಾನಿಗಳ ಬಳಗವಿದೆ. 2020 ಜನವರಿಯಲ್ಲಿ ಶುರುವಾದ ಈ ಧಾರಾವಾಹಿಯು 2023ರಲ್ಲಿ ಮುಕ್ತಾಯಗೊಂಡರೂ ಇಂದಿಗೂ ಹರ್ಷ ಪಾತ್ರ ಹಸಿರಾಗಿದೆ. ಇವರ ಸ್ಟೈಲ್, ಮಾತುಗಾರಿಕೆಗೆ ಅನೇಕ ಮಂದಿ ಫ್ಯಾನ್ಸ್ ಇದ್ದಾರೆ. ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ​​ ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಯಶಸ್ಸು ತಂದುಕೊಟ್ಟಿದ್ದು ಸೀರಿಯಲ್. ಹೀಗಿದ್ದರೂ ಇವರು ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿಲ್ಲ.

ಸದ್ಯ ಕಿರಣ್ ರಾಜ್ ದೊಡ್ಡ ಗ್ಯಾಪ್ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಇದರಲ್ಲಿ ಇವರ ನಟನೆಗೆ ಅದ್ಭುತ ಪ್ರತಿಕ್ರಿಯೆ ಕೇಳಿಬರುತ್ತಿದೆ. ಜೊತೆಗೆ ಧಾರಾವಾಹಿಯ ಕೂಡ ಸತತವಾಗಿ ನಂಬರ್ ಒನ್ ಟಿಆರ್​ಪಿಯಲ್ಲಿ ದಾಖಲೆ ನಿರ್ಮಿಸಿದೆ. ಕರ್ಣ ಧಾರಾವಾಹಿಯ ಜೊತೆಗೆ ಕಿರಣ್ ರಾಜ್ ಹೊಸ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ ರಾನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕಿರಣ್ ರಾಜ್ ಈಗ ‘ಜಾಕಿ 42’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸ್ಪಾಟ್ ಅನ್ನು ಕಿರಣ್ ಆಗಾಗಾ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತ ಇರುತ್ತಾರೆ. ಈಗ ಸಿನಿಮಾಆ ಸೆಟ್​ನಲ್ಲಿ ಕುದುರೆ ಮೇಲೆ ಏರಿ ಹೊಸ ಫೋಟೋ ಅಪ್ಲೋಡ್ ಮಾಡಿದ್ದಾರೆ.



ರಾನಿ ಸಿನಿಮಾವನ್ನು ನಿರ್ದೇಶಿಸಿದ್ದ ಗುರುತೇಜ್ ಶೆಟ್ಟಿ ಅವರೇ ಈ ಜಾಕಿ 42 ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೆಯೆ ಈ ಸಿನಿಮಾಗೆ ಉತ್ತಮ ಬರಹಗಾರರ ತಂಡ ಕೈಜೋಡಿಸಿದೆ. ಬ್ಲಿಂಕ್ ಸಿನಿಮಾದ ಮೂಲಕ ಎಲ್ಲರ ಗಮನಸೆಳೆದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ಜೊತೆಯಾಗಿದ್ದಾರೆ. ಕನ್ನಡತಿ ಧಾರಾವಾಹಿಗೆ ಚಿತ್ರಕಥೆ ಬರೆದಿದ್ದ ವಿಕಾಸ್ ನೇಗಿಲೋಣಿ ಕೂಡ ಸ್ಕ್ರಿಪ್ಟ್‌ ಬರಹಗಾರರ ಟೀಮ್‌ನಲ್ಲಿದ್ದಾರೆ.

ಕಿರಣ್ ರಾಜ್ ಅವರು ಈಗಾಗಲೇ ಭರ್ಜರಿ ಗಂಡು, ರಾನಿ, ಮೇಘ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಟಿಸಿದ್ದಾರೆ. ವಿಶೇಷ ಸ್ಕ್ರಿಪ್ಟ್​ಗಳನ್ನು ಆಯ್ಕೆ ಮಾಡುವ ಕಿರಣ್ ರಾಜ್, ಏಕಕಾಲಕ್ಕೆ ಸೀರಿಯಲ್ ಹಾಗೂ ಸಿನಿಮಾದಲ್ಲಿ ನಟಿಸುತ್ತಿದ್ದು, ಇವೆರಡನ್ನೂ ಉತ್ತಮ ರೀತಿಯಲ್ಲಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

Amruthadhare Serial: ಕಳಚಿಬಿತ್ತು ಶಕುಂತಲಾ ಮುಖವಾಡ: ಪ್ರೀತಿ ಹುಡುಕಿ ಹೊರಟ ಗೌತಮ್