ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 11: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸದ್ದು ಮಾಡಿದ ಮೋಕ್ಷಿತಾ-ಗೌತಮಿ-ಮಂಜು ವಿಚಾರ: ನೀರಿಗೆ ತಳ್ಳಿದ್ದು ಯಾರನ್ನು?

ಮೋಕ್ಷಿತಾ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ ಸ್ಥಾನಕ್ಕೆ ಗೌತಮಿ ಜಾಧವ್ ಹೆಸರನ್ನು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಗ್ಯುದ್ಧ ನಡೆದಿದೆ. ನಂತರ ಗೌತಮಿ ಅವರನ್ನು ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಈ ವಾರ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಎರಡು ಗುಂಪುಗಳಾಗಿ ಆಡಿದ ಟಾಸ್ಕ್​ನಲ್ಲಿ ತ್ರಿವಿಕ್ರಮ್ ತಂಡ ಗೆದ್ದು ಬೀಗಿದೆ. ಈ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅತ್ತ ಕೊನೆಯ ಟಾಸ್ಕ್​ನಲ್ಲಿ ಗೆದ್ದ ರಜತ್ ಕಿಶನ್ ಟೀಂ ತಮ್ಮ ತಂಡದಲ್ಲಿ ನಾಮಿನೇಟ್ ಆಗಿರುವ ಓರ್ವ ಸ್ಪರ್ಧಿಯನ್ನು ಸೇವ್ ಮಾಡುವ ಅವಕಾಶ ಪಡೆದುಕೊಂಡಿದೆ. ಇದರ ನಡುವೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಟಾಸ್ಕ್ ನೀಡಿದ್ದು ಇದರಲ್ಲಿ ಮೋಕ್ಷಿತಾ ಹಾಗೂ ಗೌತಮಿ ನಡುವೆ ಬೆಂಕಿ ಹತ್ತಿಕೊಂಡಿದೆ.
ಪಕ್ಷಪಾತಿ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ - ಹೀಗೆ ನಾಲ್ಕು ಶೀರ್ಷಿಕೆಯ ಬೋರ್ಡ್​​ಗಳನ್ನು ಗಾರ್ಡನ್ ಏರಿಯಾದಲ್ಲಿ ಇಡಲಾಗಿದೆ. ಇದಕ್ಕೆ ಸೂಕ್ತ ಎನಿಸುವವರ ಹೆಸರನ್ನು ಸ್ಪರ್ಧಿಗಳು ಸೂಚಿಸಿ, ಅದಕ್ಕೆ ಸೂಕ್ತ ಕಾರಣಗಳನ್ನು ಕೊಟ್ಟು, ಅವರನ್ನು ಸ್ವಿಮ್ಮಿಂಗ್​​ ಪೂಲ್​​​ಗೆ ದೂಡಬೇಕೆಂದು ಬಿಗ್​ ಬಾಸ್​ ಸೂಚಿಸಿದ್ದಾರೆ. ಈ ಟಾಸ್ಕ್ ವೇಳೆ ಗೌತಮಿ-ಮೋಕ್ಷಿತಾ ಮಧ್ಯೆ ಮಾತಿನ ವಾರ್ ನಡೆದಿದೆ.
ಮೋಕ್ಷಿತಾ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ ಸ್ಥಾನಕ್ಕೆ ಗೌತಮಿ ಜಾಧವ್ ಹೆಸರನ್ನು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಗ್ಯುದ್ಧ ನಡೆದಿದೆ. ನಂತರ ಗೌತಮಿ ಅವರನ್ನು ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ. ನಮ್ಮ ಮೂರು ಜನರ (ಮೋಕ್ಷಿತಾ, ಗೌತಮಿ, ಮಂಜು) ಸ್ನೇಹವನ್ನು ಕಾಪಾಡಿತ್ತೀನಿ ಎಂದು ಹೇಳಿದ್ರಿ, ಮಂಜಣ್ಣನಿಗೆ ಬೇಜಾರ್​ ಆದ್ರೆ ನಿಮಗೆ ಫೀಲ್​ ಆಗುತ್ತೆ. ಆದ್ರೆ ಮೋಕ್ಷಿತಾಗೆ ಬೇಜಾರ್​ ಆದಾಗ ಅಲ್ಲಿ ಗೌತಮಿ ಇರುತ್ತಿರಲಿಲ್ಲ ಎಂದು ಮೋಕ್ಷಿ ಹೇಳಿದ್ದಾರೆ.
ಅತ್ತ ಮೋಕ್ಷಿತಾ ಮಾತಿಗೆ ಗೌತಮಿ ಜಾದವ್ ರಿಯಾಕ್ಟ್ ಮಾಡಿದ್ದಾರೆ. ಸ್ನೇಹವನ್ನ ನಾನು ಈಗಲೂ ನಿಭಾಯಿಸುತ್ತಿರುವೆ. ನಿಮ್ಮ ತರ ನಾನು ಯೋಚನೆ ಮಾಡೋಕೆ ಆಗೋದಿಲ್ಲ. ಆದರೆ, ನಿಮ್ಮ ಈ ಒಂದು ಅಭಿಪ್ರಾಯವನ್ನ ನಾನು ತೆಗೆದುಕೊಳ್ಳುತ್ತೇನೆ ಅಂತಲೇ ಗೌತಮಿ ಹೇಳಿದ್ದಾರೆ. ಈ ಒಂದು ಕಾರಣಕ್ಕೆ ಆಟದ ಪ್ರಕಾರ ಗೌತಮಿಯನ್ನ ಮೋಕ್ಷಿತಾ ಪೈ ಈಜುಕೊಳಕ್ಕೆ ತಳ್ಳಿದ್ದಾರೆ.
BBK 11: ಇನ್​ಸ್ಟಾ ಲೈವ್ ಬಂದು ಎಲ್ಲ ಮಾಹಿತಿ ಬಿಚ್ಚಿಟ್ಟ ಗೋಲ್ಡ್ ಸುರೇಶ್: ಹೊರಹೋಗಿದ್ದು ಯಾಕೆ ಗೊತ್ತೇ?