ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nandagokula Serial: ಜೂನ್ 4 ರಿಂದ ಕಲರ್ಸ್ ಕನ್ನಡದಲ್ಲಿ ಶುರುವಾಗುತ್ತಿದೆ ಹೊಸ ಧಾರಾವಾಹಿ

ಜಾಹ್ನವಿ ಫಿಲ್ಮ್ ಎಂಫೈರ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರೋ ಶ್ರವಂತ್ ಹಾಗೂ ಪತ್ನಿ ರಾಧಿಕಾ ಹೊಸ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ತಂದೆ ನಂದನ್‌ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂರು ಗಂಡು ಮಕ್ಕಳನ್ನು ತನ್ನಿಷ್ಟದಂತೆ ಬೆಳೆಸುವ ಪರಿಯ ಕಥೆ ಇದಾಗಿದೆ.

Nandagokula Serial

ಅಂದು ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ (Nandagokula) ಧಾರಾವಾಹಿ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತ್ತು. ಇಂದು ರಾಕಿಂಗ್ ಸ್ಟಾರ್ ಆಗಿ ಬೆಳೆದಿರುವ ಯಶ್​ ಹಾಗೂ ರಾಧಿಕಾ ಪಂಡಿತ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಈ ಧಾರಾವಾಹಿ ಸೂಪರ್​ ಹಿಟ್ ಆಗಿತ್ತು. ಈಗ​ ನಂದಗೋಕುಲ ಎಂಬ ಇದೇ ಟೈಟಲ್​ನಲ್ಲಿ ಹೊಸ ಕತೆ ಮೂಡಿ ಬರುತ್ತಿದೆ. ರಾಮಾಚಾರಿ, ದೃಷ್ಟಿಬೊಟ್ಟು, ನೂರು ಜನ್ಮಕ್ಕೂ ಅಂತಹ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಶ್ರವಂತ್ ಅವರ ಗರಡಿಯಿಂದ ಕಲರ್ಸ್ ಕನ್ನಡದಲ್ಲಿ ಈ ಹೊಸ ಧಾರಾವಾಹಿ ಬರುತ್ತಿದೆ.

ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ತಂದೆಯ ಕತೆಯೇ ನಂದಗೋಕುಲ ಆಗಿದೆ. ಮುಂದಿನ ತಿಂಗಳು.. ಅಂದ್ರೆ ಜೂನ್ 4, ಬುಧವಾರದಿಂದ ರಾತ್ರಿ 9ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಂದಗೋಕುಲ ಸೀರಿಯಲ್‌ ಪ್ರಸಾರವಾಗಲಿದೆ. ಬಹು ತಾರಾಗಣದ ಈ ಧಾರಾವಾಹಿಯಲ್ಲಿ ಝೀ ಕನ್ನಡದ ಗಟ್ಟಿಮೇಳದ ಧಾರಾವಾಹಿ ವಿಕ್ರಾಂತ್ ಪಾತ್ರಧಾರಿ ಅಭಿ ದಾಸ್ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಅರವಿಂದ್‌, ರವಿ ಚೇತನ್, ವಿಜಯಚಂದ್ರ, ಯಶವಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಲನಚಿತ್ರಗಳಲ್ಲಿ ಮಿಂಚುತ್ತಿದ್ದ ಅರವಿಂದ್ ರಾವ್, ರವಿ ಚೇತನ್ ನಂದ ಗೋಕುಲ ಧಾರಾವಾಹಿ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.



ಜಾಹ್ನವಿ ಫಿಲ್ಮ್ ಎಂಫೈರ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರೋ ಶ್ರವಂತ್​ ಹಾಗೂ ಪತ್ನಿ ರಾಧಿಕಾ ಹೊಸ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ತಂದೆ ನಂದನ್‌ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂರು ಗಂಡು ಮಕ್ಕಳನ್ನು ತನ್ನಿಷ್ಟದಂತೆ ಬೆಳೆಸುವ ಪರಿಯ ಕಥೆ ಇದಾಗಿದೆ. ತಾನು ಹಾಕಿದ ಗೆರೆಯನ್ನು ನನ್ನ ಕುಟುಂಬದಲ್ಲಿ ಯಾರು ದಾಟುವುದಿಲ್ಲ, ಮುಂದೆ ಬರುವ ಸೊಸೆಯಂದಿರು ಕೂಡ ದಾಟುವುದಿಲ್ಲ. ನನ್ನ ಕುಟುಂಬ ಈಗ ಹೇಗೆ ಇದೆಯೋ ಮುಂದೆಯೂ ಹಾಗೇ ಹೆಸರಿಗೆ ತಕ್ಕಂತೆ ನಂದಗೋಕುಲವಾಗಿರುತ್ತದೆ ಎಂದು ಊರಿನವರ ಮುಂದೆ ನಂದನ್‌ ಹೇಳುವುದನ್ನು ಪ್ರೊಮೋದಲ್ಲಿ ನೋಡಬಹುದು.

ಈ ಧಾರಾವಾಹಿಯನ್ನು ತಮಿಳಿನ ಪಾಂಡಿಯನ್ ಸ್ಟೋರ್ಸ್‌ 2 ನ ಆಫೀಯಲ್ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿ ತೆಲುಗಿಗೂ ರಿಮೇಕ್ ಆಗಿದ್ದು, ಇಲ್ಲು ಇಲ್ಲಲು ಪಿಲ್ಲಲು ಎಂಬ ಹೆಸರಿನೊಂದಿಗೆ ಪ್ರಸಾರವಾಗಿತ್ತು, ಇದೀಗ ಕನ್ನಡದಲ್ಲಿ ನಂದಗೋಕುಲ ಹೆಸರಿನಲ್ಲಿ ಪ್ರಸರವಾಗಲು ಸಜ್ಜಾಗಿದೆ.

Seetha Rama: ಸೀತಾ ಕೈ ಸೇರಿತು ಮಹತ್ವದ ಸಾಕ್ಷಿ: ಬಯಲಾಯಿತು ಭಾರ್ಗವಿ ಆಟ