ಝೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ (Prithwi Bhat) ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ದೊಡ್ಡ ಸುದ್ದಿ ಆಯಿತು. ಇವರಿಬ್ಬರು ಮನೆಯವರಿಗೆ ತಿಳಿಸದೆ ಹಸೆಮಣೆ ಏರಿದರು. ತಾನು ಪ್ರೀತಿಸಿ ಹುಡುಗನನ್ನು ಮನೆಯವರ ವಿರೋಧದ ನಡುವೆಯೂ ಮದುವೆ ಆದರು ಪೃಥ್ವಿ ಭಟ್. ಮಗಳ ವಿವಾಹದ ಬಳಿಕ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಶೀಕರಣ ಮಾಡಿ ನನ್ನ ಮಗಳ ಮದುವೆ ಮಾಡಿಸಿದ್ದಾರೆ ಎಂದು ಪೃಥ್ವಿಭಟ್ ಅವರ ತಂದೆ ಶಿವಪ್ರಸಾದ್ ಆರೋಪಿಸಿದ್ದರು. ದೇವಾಲಯದಲ್ಲಿ ಮಾರ್ಚ್ 27 ರಂದು ಅಭಿಷೇಕ್ ಅವರೊಂದಿಗೆ ಫೃಥ್ವಿ ಮದುವೆಯಾದರು.
ಝೀ ಕನ್ನಡದ ಸರಿಗಮಪ ಶೋನಲ್ಲಿ ಪೃಥ್ವಿ ಭಟ್ ಭಾಗವಹಿಸಿದ ವೇಳೆ ಅಭಿಷೇಕ್ ಜೊತೆ ಪ್ರೀತಿ ಹುಟ್ಟಿತ್ತು. ಅಭಿಷೇಕ್ ಝೀ ಕನ್ನಡದಲ್ಲಿ ಎಕ್ಸ್‌ಕ್ಯೂಟಿವ್ ಪ್ರಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದಿಷ್ಟು ವರ್ಷದ ಪ್ರೀತಿಯ ಬಳಿಕ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಮದುವೆ ಆಗುವುದಕ್ಕೆ ನಿರ್ಧರಿಸಿದ್ದರು.
ಆರಂಭದಲ್ಲಿ ಪೃಥ್ವಿ ಅವರು ನನಗೆ ನೀವು ಅಂದ್ರೆ ಇಷ್ಟ. ತಂದೆ-ತಾಯಿ ಒಪ್ಪಿದರೆ ಮದುವೆ ಆಗ್ತೀನಿ ಎಂದು ಅಭಿಷೇಕ್‌ಗೆ ಹೇಳಿದ್ದರಂತೆ. ಆದರೆ, ಯಾವಾಗ ತಂದೆ-ತಾಯಿ ಊರಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಗೊತ್ತಾಯಿತೋ ಆಗ ಅವರು ಹೆದರಿ ಈರೀತಿ ಮದುವೆ ಆಗಲು ರೆಡಿಯಾದರಂತೆ. ಈ ಎಲ್ಲ ವಿಚಾರವನ್ನು ಸ್ವತಃ ಪೃಥ್ವಿ ಭಟ್ ಮತ್ತು ಅಭಿಷೇಕ್ ಅವರು ಕೀರ್ತಿ ENT ಕ್ಲಿನಿಕ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.
Bhagya Lakshmi Serial: ಕಿಶನ್-ಪೂಜಾ ಮದುವೆ ನಿಲ್ಲಿಸಲು ಆದೀ ಮಾಸ್ಟರ್ ಪ್ಲ್ಯಾನ್: ಒಪ್ಪಿಕೊಂಡ ರಾಮ್ದಾಸ್?
‘‘ನನ್ನ ಮದುವೆಯ ಬಳಿಕ ವಶೀಕರಣ ಮಾಡಿಸಿದ್ದರು ಎಂಬ ಮಾತು ಕೇಳಿಬಂತು.. ಆದರೆ ಅದೆಲ್ಲ ಸುಳ್ಳು. ಹಾಗೆಯೆ ನಾಬಿಬ್ಬರೂ ಓಡಿ ಹೋಗಿ ಮದುವೆ ಆದ್ವಿ ಎನ್ನುತ್ತಾರೆ. ನಾವು ಓಡಿ ಹೋಗಲಿಲ್ಲ, ಕ್ಯಾಬ್ ಅಲ್ಲೇ ಹೋದ್ವಿ’’ ಎಂದು ತಮಾಷೆಯಾಗಿ ಹೇಳಿದ್ದಾರೆ. ‘‘ಮದುವೆ ಆಗೋಣ ಎಂದಾಗ ಪೃಥ್ವಿ ಭಟ್ ಒಪ್ಪಿದ್ದರು. ಬಳಿಕ ಮದುವೆಗೆ ಸಿದ್ಧತೆ ನಡೀತು. ನಮ್ಮ ಆಪ್ತರು ಬೆಂಬಲಕ್ಕೆ ನಿಂತಿದ್ದರು. ಶಾಪಿಂಗ್ ಮಾಡಿ ಮಾರ್ಚ್ 27ರಂದು ಮದುವೆಗೆ ಡೇಟ್ ಫಿಕ್ಸ್ ಮಾಡಿದ್ದೆವು" ಎಂದು ಅಭಿ ಹೇಳಿದ್ದಾರೆ. "ಮರುದಿನ ನನ್ನನ್ನು ಊರಿಗೆ ಕರೆದುಕೊಂಡು ಹೋಗಲು ಪೋಷಕರು ಮುಂದಾಗಿದ್ದರು. ಕರೆದುಕೊಂಡು ಹೋಗಿ ಬೇರೆಯವರ ಜೊತೆ ಮದುವೆ ಮಾಡಿಬಿಡ್ತಾರಾ? ಎನ್ನುವ ಭಯ ಇತ್ತು. ಮದುವೆ ಆಗುವುದು ಸೇಫ್ ಎನಿಸಿತು. ಹಾಗಾಗಿ ಒಪ್ಪಿಕೊಂಡೆ" ಎಂದು ಪೃಥ್ವಿ ಹೇಳಿದ್ದಾರೆ.