Bhagya Lakshmi Serial: ಕಿಶನ್-ಪೂಜಾ ಮದುವೆ ನಿಲ್ಲಿಸಲು ಆದೀ ಮಾಸ್ಟರ್ ಪ್ಲ್ಯಾನ್: ಒಪ್ಪಿಕೊಂಡ ರಾಮ್ದಾಸ್?
ಆದೀಶ್ವರ್ ಮನೆಗೆ ಬಂದು ತಂದೆ ರಾಮ್ದಾಸ್ ಜೊತೆ ಇಂಪಾರ್ಟೆಂಟ್ ವಿಷಯ ಮಾತನಾಡಬೇಕು ಎಂದು ರೂಮ್ಗೆ ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ಇವರಿಬ್ಬರ ನಡುವೆ ಏನೋ ಬಹುಮುಖ್ಯವಾದ ಮಾತುಕತೆ ಆಗಿದೆ. ಅದು ಏನು ಎಂಬುದು ರಿವೀಲ್ ಮಾಡಲಾಗಿಲ್ಲ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ನಾನಾ ತಿರುವುಗಳ ಮೂಲಕ ರೋಚಕ ಸೃಷ್ಟಿಸಿದೆ. ಸದ್ಯ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಕಾರ್ಯ ಭರ್ಜರಿಯಿಂದ ಸಾಗುತ್ತಿದೆ. ಅತ್ತ ಆದೀಶ್ವರ್ ಕಾಮತ್- ಮೀನಾಕ್ಷಿ ಹಾಗೂ ಕನ್ನಿಕಾ ಈ ಮದುವೆಯನ್ನು ಹೇಗಾದರು ಮಾಡಿ ನಿಲ್ಲಿಸಲೇ ಬೇಕೆಂದು ಯೋಜನೆ ಹೆಣೆದಿದ್ದಾರೆ. ಆದರೆ, ಇದರಲ್ಲಿ ಫೇಸ್ ಆಗುತ್ತಲೇ ಇದ್ದಾರೆ. ಮೊದಲಿಗೆ ಭಾಗ್ಯ ಮನೆಯವರಿಗೆ ತುಲಾಭಾರದ ಶಾಕ್ ನೀಡಿದ್ದರು. ಇದನ್ನು ಭಾಗ್ಯ ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಗೆಲುವು ಕಂಡಳು.
ತುಲಾಭಾರದ ಹೊರೆ ಭಾಗ್ಯ ಮನೆಯವರ ಮೇಲೆ ಹಾಕಿ ಈ ಮದುವೆಯನ್ನು ಅವರ ಕಡೆಯಿಂದಲೇ ಆಗುವುದಿಲ್ಲ ಎಂದು ಹೇಳಿಸುವುದು ಕನ್ನಿಕಾ-ಮೀನಾಕ್ಷಿ ಪ್ಲ್ಯಾನ್ ಆಗಿತ್ತು. ಆದರೆ, ಇದನ್ನು ಭಾಗ್ಯ ಸತ್ಯದ ಹಾದಿಯಲ್ಲಿ ನಡೆಸಿಕೊಟ್ಟಳು. ಇದು ಮೀನಾಕ್ಷಿಗೆ ಭಾರೀ ಅವಮಾನ ಆಗಿದೆ. ಇದರ ಮಧ್ಯೆ ಆದೀಶ್ವರ್ ಕಾಮತ್ ಪ್ರಾಜೆಕ್ಟ್ ವಿಚಾರವಾಗಿ ಭಾಗ್ಯ ಪತಿ ತಾಂಡವ್ನ ಭೇಟಿ ಆಗಿದ್ದಾನೆ. ಆದರೆ, ತಾಂಡವ್ ಭಾಗ್ಯಾಳ ಗಂಡ ಎಂಬ ವಿಚಾರ ಆದೀಗೆ ಗೊತ್ತಿಲ್ಲ.
ತಾಂಡವ್-ಆದೀ ಹೀಗೆ ಪ್ರಾಜೆಕ್ಟ್ ಬಗ್ಗೆ ಕೆಫೆಯಲ್ಲಿ ಮಾತನಾಡುತ್ತಿರುವಾಗ ಪರ್ಸನಲ್ ವಿಚಾರಗಳು ಕೂಡ ಚರ್ಚೆಯಾಗುತ್ತದೆ. ಈ ಸಂದರ್ಭ ತಾಂಡವ್ ಹೇಳಿದ ಒಂದು ಮಾತು ಆದೀಯ ಕಣ್ಣು ತೆರೆಸಿದೆ. ಏನೇ ಪ್ರಾಬ್ಲಂ ಬಂದ್ರು ಅದನ್ನು ಬಗೆಹರಿಸಲು ಮೊದಲಿಗೆ ಅದರ ರೂಟ್ಕಾಸ್ ಅನ್ನು ಹುಡುಕಬೇಕು.. ಅದನ್ನು ಹುಡುಕಿ ಆ ರೂಟ್ಕಾಸ್ ಅನ್ನು ರಿಮೂವ್ ಮಾಡಿದ್ರೆ ಎಲ್ಲ ಪ್ರಾಬ್ಲಂ ಸಾಲ್ವು ಆಗುತ್ತೆ ಎಂದಿದ್ದಾನೆ. ಸದ್ಯ ಆದೀ ಪೂಜಾ-ಕಿಶನ್ ಮದುವೆ ನಿಲ್ಲಿಸಲು ಈ ನಿಯಮವನ್ನು ಅನುಸರಿಸಲು ಮುಂದಾಗಿದ್ದಾನೆ. ಮೀನಾಕ್ಷಿ-ಕನ್ನಿಕಾ ಬಳಿಯೂ ಆದೀ ಇದನ್ನೆ ಹೇಳಿದ್ದಾರೆ.
ಬಳಿಕ ಆದೀಶ್ವರ್ ಮನೆಗೆ ಬಂದು ತಂದೆ ರಾಮ್ದಾಸ್ ಜೊತೆ ಇಂಪಾರ್ಟೆಂಟ್ ವಿಷಯ ಮಾತನಾಡಬೇಕು ಎಂದು ರೂಮ್ಗೆ ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ಇವರಿಬ್ಬರ ನಡುವೆ ಏನೋ ಬಹುಮುಖ್ಯವಾದ ಮಾತುಕತೆ ಆಗಿದೆ. ಅದು ಏನು ಎಂಬುದು ರಿವೀಲ್ ಮಾಡಲಾಗಿಲ್ಲ. ಆದರೆ, ನಾಳೆ ಭಾಗ್ಯ ಮನೆಯವರನ್ನು ಇಲ್ಲಿಗೆ ಬರಲು ಹೇಳು.. ಇಂಪಾರ್ಟೆಟ್ ವಿಷಯ ಮಾತನಾಡಲಿಕೆ ಇದೆ ಎಂದು ಕಾಲ್ ಮಾಡಿ ಹೇಳು ಎಂದು ರಾಮ್ದಾಸ್ ಆದೀ ಬಳಿ ಹೇಳಿದ್ದಾರೆ. ಇಲ್ಲಿ ಆದೀ ಮದುವೆ ನಿಲ್ಲಿಸಲು ಏನೋ ದೊಡ್ಡದಾಗಿ ಪ್ಲ್ಯಾನ್ ಮಾಡಿದಂತಿದೆ.
ಮರುದಿನ ಭಾಗ್ಯ ಮನೆಯವರು ಎಲ್ಲರೂ ರಾಮ್ದಾಸ್ ಮನೆಗೆ ಬರುತ್ತಾರೆ. ಈ ಸಂದರ್ಭ ರಾಮ್ದಾಸ್ ಕಡೆಯ ಲಾಯರ್ ಕೂಡ ಇರುತ್ತಾರೆ. ಈ ಸಂದರ್ಭ ಇಲ್ಲಿ ಎಲ್ಲರಿಗೂ ಶಾಕಿಂಗ್ ಆಗುವಂತಹ ಬೆಳವಣಿಗೆ ನಡೆಯುತ್ತದೆ. ರಾಮ್ದಾಸ್ ಕಾಮತ್ ತನ್ನೆಲ್ಲ ಆಸ್ತಿಯನ್ನು ವಿಲ್ ಮಾಡಿದ್ದಾರೆ. ಆದರೆ, ಈ ವಿಲ್ನಲ್ಲಿ ಕಿಶನ್ ಹೆಸರು ಇಲ್ಲ. ರಾಮ್ದಾಸ್ ತನ್ನ ಎಲ್ಲ ಆಸ್ತಿಯನ್ನು ಸಮನಾಗಿ ಆದೀಶ್ವರ್, ಕನ್ನಿಕಾ, ಮಹಿತಾ ಹಾಗೂ ಮೀನಾಕ್ಷಿಗೆ ಹಂಚಿದ್ದಾರೆ. ಜೊತೆಗೆ ನನ್ನ ಆಸ್ತಿಯಲ್ಲಿ ನನ್ನ ಮಗ ಕಿಶನ್ಗೆ ಮದುವೆಯ ಬಳಿಕ ಕಿಂಚಿತ್ತೂ ಪಾಲು ನೀಡಲಾಗುವುದಿಲ್ಲ ಎಂದು ಬರೆದಿದ್ದಾರೆ.
ಇದು ಭಾಗ್ಯ ಮನೆಯವರಿಗೆ ಸೇರಿದಂತೆ ಕಿಶನ್ಗೆ ಆಘಾತ ಉಂಟಾಗಿದೆ. ಸ್ವಂತ ಮಗನಿಗೆ ರಾಮ್ದಾಸ್ ಯಾಕೆ ಹೀಗೆ ಮಾಡಿದ್ದಾರೆ ಎಂದು ಕಳವಳಗೊಂಡಿದ್ದಾರೆ. ಆದರೆ, ಇದೆಲ್ಲ ಆದೀಶ್ವರ್ ಮಾಡಿರುವ ಪ್ಲ್ಯಾನ್. ಭಾಗ್ಯ ಮನೆಯವರು ಹಣಕ್ಕೋಸ್ಕರ, ಆಸ್ತಿಗೋಸ್ಕರ ಕಿಶನ್ನ ಮದುವೆ ಆಗುತ್ತಿದ್ದಾರೆ ಎಂದು ಪ್ರೂವ್ ಮಾಡಲು ನನಗೆ ಕೊನೆಯ ಅವಕಾಶ ಕೊಡಿ ಎಂದು ಆದೀ, ರಾಮ್ದಾಸ್ ಬಳಿ ಹೇಳಿದ್ದಾನೆ. ಇದಕ್ಕೆ ಒಕೆ ಎಂದ ರಾಮ್ದಾಸ್ ಈ ದಾರಿ ಹಿಡಿದಿದ್ದಾರೆ. ಕಿಶನ್ಗೆ ಚೂರು ಆಸ್ತಿ ಸಿಗುವುದಿಲ್ಲ ಎಂದು ಗೊತ್ತಾದ ಬಳಿಕ ಈ ಮದುವೆಯನ್ನು ಭಾಗ್ಯ ಮನೆಯವರು ಕ್ಯಾನ್ಸಲ್ ಮಾಡುತ್ತಾರೆ ಎಂದು ಆದೀಶ್ವರ್ ಅಂದು ಕೊಳ್ಳುತ್ತಾನೆ.
ಸದ್ಯ ಈ ಎಪಿಸೋಡ್ ಸಾಕಷ್ಟು ಕುತೂಹಲ ಕೆರಳಿಸಿದೆ. ರಾಮ್ದಾಸ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಕಿಶನ್ ಯಾವರೀತಿ ಪ್ರತಿಕ್ರಿಯಿಸುತ್ತಾನೆ?, ಜಗಳ ಆಡುತ್ತಾನ?, ಭಾಗ್ಯ ಮನೆಯವರು ಯಾವರೀತಿ ಇದನ್ನು ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
Rajesh Dhruva: ಕಿರುತೆರೆ ಲೋಕದ ಕರಾಳ ಸತ್ಯ ಬಿಚ್ಚಿಟ್ಟ ರಾಜೇಶ್ ಧ್ರುವ