ಜೀ ಕನ್ನಡದ (Zee Kannada) 'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ (Ranav Gowda) ಮತ್ತು ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ ಬಿ' ನಟಿ ರಾಧಾ ಭಗವತಿ (Radha Bhagavati) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ದಿವಾನ್ ಹಾಗೂ ಮಲ್ಲಿ ಪಾತ್ರ ತುಂಬ ಫೇಮಸ್. ಜಯದೇವ್ ಹಾಗೂ ಮಲ್ಲಿ (Malli Role) ಪಾತ್ರಧಾರಿ ಈಗ ರಿಯಲ್ ಲೈಫ್‌ನಲ್ಲಿಯೂ ಎಂಗೇಜ್ ಆಗಿದ್ದಾರೆ.
ಫೋಟೋ ಹಂಚಿಕೊಂಡ ಜೋಡಿ
‘ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸುವಾಗಲೇ ಇವರ ಮಧ್ಯೆ ಪ್ರೀತಿ ಮೂಡಿತ್ತು ಎಂದು ಹೇಳಲಾಗುತ್ತಾ ಇದೆ. ಸದ್ಯ ರಾಣವ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಹಾರ ಹಾಕಿ ನಿಂತ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ‘ಫೈನಲಿ’ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ರಾಧಾ ಭಗವತಿ ಅವರು ಅಮೃತಧಾರೆ ಧಾರಾವಾಹಿ ಬಿಟ್ಟು, ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: Rashmika Vijay Wedding: ಅದ್ಭುತ ವ್ಯಕ್ತಿ ಅತ್ತಿಗೆ; ವಿಜಯ್ ದೇವರಕೊಂಡ ಸಹೋದರನ ಸ್ಪೆಷಲ್ ಪೋಸ್ಟ್
ಅಮೃತಧಾರೆ ಧಾರಾವಾಹಿಯಲ್ಲಿ ಪೋಷಕ ಪಾತ್ರ ಬಿಟ್ಟು, ಅವರು ಹೀರೋಯಿನ್ ಆಗುವ ಅವಕಾಶವನ್ನು ಆಯ್ಕೆ ಮಾಡಿಕೊಂಡಿದ್ದರು. ರಾಣವ್ ಗೌಡ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಜೆಡಿ ಪಾತ್ರ ಮಾಡುತ್ತಿದ್ದಾರೆ.
ಇದರ ಜೊತೆಗೆ ಜೀ ಪವರ್ನ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ನಟಿ ಸುಜಾತಾ ಅಕ್ಷಯ್ ಸೇರಿ ಅನೇಕರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಜೆಡಿ ಹಾಗೂ ಮಲ್ಲಿ ಕೊನೆಗೂ ಒಂದಾದರು, ಈ ಜೋಡಿ ತುಂಬ ಚೆನ್ನಾಗಿದೆ, ಒಳ್ಳೆಯದಾಗಲಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ರಾಧಾ ಭಗವತಿ ಯಾರು?
ರಾಧಾ ಭಗವತಿ ಮೂಲತಃ ವಿಜಯಪುರದವರು. ಇವರ ತಾತ ರಂಗಭೂಮಿ ಕಲಾವಿದರು. ಜೊತೆಗೆ ಹರಿಕಥೆ ದಾಸರೂ ಕೂಡ ಹೌದು. ರಾಧಾ ತಾಯಿ ಜಾನಪದ ಹಾಡುಗಾರ್ತಿ. ಹೀಗಾಗಿ, ಇವರಿಗೆ ಕಲೆಯ ನಂಟಿದೆ. ಅಮೃತಧಾರೆಗೂ ಮುನ್ನ ರಾಧಾ ಭಗವತಿ, ಉಘೇ ಉಘೇ ಮಹಾದೇಶ್ವರ ಹಾಗೂ ರಾಮಾಚಾರಿ ಕಲರ್ಸ್‌ನಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನ ತಂಗಿ ಶೃತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ರಾಧಾ ವರು ನಟಿ ಮಾತ್ರವಲ್ಲ, ಹಿನ್ನೆಲೆ ಗಾಯಕಿ ಕೂಡ ಹೌದು. ಇನ್‌ಸ್ಟಾಗ್ರಾಮ್‌ನಲ್ಲೂ ಆಗಾಗ ಹಾಡುಗಳನ್ನು ಹಾಡುತ್ತಾ ರೀಲ್ಸ್ ಮಾಡುತ್ತಿರುತ್ತಾರೆ. ಅಣ್ಣಯ್ಯ ಸೀರಿಯಲ್‌ನ ವಿಕಾಸ್ ಉತ್ತಯ್ಯ ಜೊತೆಗೆ ಅಪಾಯವಿದೆ ಎಚ್ಚರಿಕೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Amruthadhare Serial: ಪಾರ್ಥ -ಸುನೀಲ್ ಮುಖಾಮುಖಿ; ಮುಂದೆ ಏನಾಗಬಹುದು?
ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಭಾರ್ಗವಿ ಎಲ್‌ಎಲ್‌ಬಿ' ಸೀರಿಯಲ್‌ನಲ್ಲಿ ರಾಧಾ ಲಾಯರ್ ಆಗಿ ಖಡಕ್ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ.