ಜೀ ಕನ್ನಡದ (Zee Kannada) 'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ (Ranav Gowda) ಮತ್ತು ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ ಬಿ' ನಟಿ ರಾಧಾ ಭಗವತಿ (Radha Bhagavati) ನಿಶ್ಚಿತಾರ್ಥ ಮಾಡಿಕೊಂಡಿರೋದು ಗೊತ್ತೇ ಇದೆ. ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ದಿವಾನ್ ಹಾಗೂ ಮಲ್ಲಿ ಪಾತ್ರ ತುಂಬ ಫೇಮಸ್. ಜಯದೇವ್ ಹಾಗೂ ಮಲ್ಲಿ (Malli Role) ಪಾತ್ರಧಾರಿ ಈಗ ರಿಯಲ್ ಲೈಫ್‌ನಲ್ಲಿಯೂ ಎಂಗೇಜ್ ಆಗಿದ್ದಾರೆ. ಇವರ ಲವ್ ಸ್ಟೋರಿ ಶುರುವಾಗಿದ್ದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ರಾಧಾ ಭಗವತಿಯವರು ಈ ಬಗ್ಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಅವರು ಒಂಥರ ಮಗು ಥರ
ರಾಧಾ ಭಗವತಿ ಮಾತನಾಡಿ ʻರಾಣವ್ ಪಾತ್ರದಲ್ಲಿ ವಿಲನ್ ಹೌದು. ರಿಯಲ್ ಲೈಫ್ ತುಂಬಾ ಡಿಸೆಂಟ್. ಅವರು ತನ್ನ ಪಾಡಿಗೆ ಇರ್ತಾ ಇದ್ದರು. ನನ್ನನ್ನು ನೋಡಿಕೊಂಡಂಗೆ ಇತ್ತು. ಅಷ್ಟಾಗಿ ಯಾರ ಹತ್ತಿರ ಮಾತಾಡ್ತಾ ಇರಲಿಲ್ಲ. ತಿನ್ನೋಕೆ ಕೊಟ್ಟರಂತೂ ಭಾರಿ ಖುಷಿ ಪಡೋರು. ಆಟ ಆಡೋಕೆ ಸಿಕ್ಕರೆ ಅಲ್ಲೇ ಆಟ ಆಡ್ತಾ ಇರೋರು. ಅವರು ಒಂಥರ ಮಗು ಥರ. ನನಗೆ ಇದೆಲ್ಲ ಇಷ್ಟ ಆಯ್ತು. ಅದಾದ ಮೇಲೆ ಇಬ್ಬರು ಫ್ರೆಂಡ್ಸ್ ಆದ್ವಿ. ಅಲ್ಲಿ ತನಕ ನಾವು ಮಾತಾಡ್ತಾ ಇರಲಿಲ್ಲ.
ಇದನ್ನೂ ಓದಿ: Amruthadhaare Serial: ಜೈದೇವ್ ಕೈಯಲ್ಲಿ ಸಿಕ್ಕ ಲಕ್ಷ್ಮೀಕಾಂತನ ಕತೆ ಹರೋಹರ!
ಅವರಿಗೆ ಫಿಮೇಲ್ ಫ್ಯಾನ್ಸ್ ತುಂಬಾ ಜನ ಇದ್ದಾರೆ. ಸೆಟ್ ಅಲ್ಲಿ ಕೂಡ ಅವರಿಗೆ ಎಷ್ಟೋ ಜನ ಮೇಲೆ ಬಿದ್ದು ಮಾತಾಡಿಸೋಕು ಬರೋರು. ಆದರೆ ನಮ್ಮಿಬ್ಬರ ವೈಬ್ ಮ್ಯಾಚ್ ಆಗ್ತಾ ಇತ್ತು. ನಮ್ಮಿಬ್ಬರನ್ನ ನೋಡಿ ಇಬ್ಬರ ಮಧ್ಯೆ ಏನೋ ನಡೀತಾ ಇರಬೋದಾ ಅಂತ ಇದ್ದರು. ಆದರೆ ನಮ್ಮಿಬ್ಬರ ಮಧ್ಯೆ ಏನೂ ಇರಲಿಲ್ಲ. ನಾವು ಒಬ್ಬರನ್ನೊಬ್ಬರು ಇಷ್ಟ ಪಡ್ತಾಇದ್ವಿ. ಇಬ್ಬರೂ ಸೆಟ್‌ನಲ್ಲಿ ಹಲವು ಭಾರಿ ಮಿಸ್ ಮಾಡಿಕೊಂಡಿದ್ವಿʼ ಎಂದಿದ್ದಾರೆ.
ನಂಗೂ ಫಿಲಿಂಗ್ಸ್ ಇತ್ತು
ʻಅವರು ಹಿಂದೆ ಮಾಡಿರೋ ಪಾತ್ರ ಕೂಡ ನೋಡಿದ್ದೆ ನಾನು. ಆದರೆ ಅವರ ಜೊತೆ ಮಾತನಾಡುವ ಸ್ವಲ್ಪ ಹೆದರಿದ್ದೆ. ಹೋಗ್ತಾ ಹೋಗ್ತಾ ನಾವು ಒಳ್ಳೆಯ ಸ್ನೇಹಿತರಾದೆವು. ಅವರ ಮೇಲೆ ನಂಗೂ ಫಿಲಿಂಗ್ಸ್ ಇತ್ತು. ನಂಗೂ ಇತ್ತು. ಆದರೆ ಇಬ್ಬರೂ ಹೇಳಿಕೊಂಡಿರಲಿಲ್ಲ. ಒಂದು ದಿನ ಅವರ ತಾಯಿಯಿಂದ ನನಗೆ ಕಾಲ್ ಬಂತು. ರಾಧಾ ಏನು ಮಾಡ್ತಾ ಇದ್ದೀಯಾ ಅಂದ್ರು. ನನ್ನ ಮಗ ನಿಮ್ಮನ್ನ ಲವ್ ಮಾಡ್ತಾ ಇದ್ದಾನೆ ಅಂದರು. ಅದು ಏನಾಗಿದೆ ಅಂದರು ಇವರು ಅಮ್ಮನ ಹತ್ತಿರ ಹೇಳಿದ್ದಾರೆ. ಅದಾದ ಮೇಲೆ ಇದರ ಬಗ್ಗೆ ಗೊತ್ತಿಲ್ಲ ಅಂದೆ. ಆಮೇಲೆ ಮಾರನೇ ದಿನನೇ ಜಾತಕ ನೋಡಿಕೊಂಡು ಬಂದರು. ಅದೆಲ್ಲ ಹೊಂದಿತ್ತುʼ ಎಂದಿದ್ದಾರೆ.
ಇದೆಲ್ಲ ಆದ್ಮೇಲೆ ರಾಣವ್ ಅವರೇ ಫೋನ್ ಮಾಡಿದರು. ಅವರಿಗೆ ನನ್ನ ಮೇಲೆ ಯಾವಾಗ ಫೀಲಿಂಗ್ ಇದೆ ಅಂತ ಗೊತ್ತಾಯ್ತೋ. ಆಗ ನಾನೇ ಮೊದಲು ಪ್ರಪೋಸ್ ಮಾಡಿದೆ." ಎಂದು ರಾಧಾ ಭಗವತಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: Radha Bhagavati: ರಿಯಲ್ ಆಗಿ ಎಂಗೇಜ್ ಆದ ಮಲ್ಲಿ- ಜೈದೇವ್! ಸರ್ಪ್ರೈಸ್ ಕೊಟ್ಟ ರಾಣವ್-ರಾಧಾ
ನಾನೇ ನನಗೆ ನೀವಂದರೆ ಇಷ್ಟ ಅಂತ ಹೇಳಿದ್ದೆ. ಆಗ ಅವರೇ ಈಗ ಬೇಡ ಅಂತ ಒಂದಷ್ಟು ದಿನ ತಳ್ಳಿದರು. ಯಾಕಂದ್ರೆ, ಪ್ರಪೋಸ್ ಮಾಡಿದ ತಕ್ಷಣ ಒಪ್ಪಿಕೊಳ್ಳಬಾರದಲ್ವಾ? ಸ್ವಲ್ಪ ದಿನ ಆದ್ಮೇಲೆ ಅವರು ಪ್ರಮೋಸ್ ಮಾಡಿದರು. ಆಗ ನಾನು ಸ್ವಲ್ಪ ದಿನ ತಳ್ಳಿದೆ. ಯಾಕಂದ್ರೆ ಅವರು ಹಾಗೇ ಮಾಡಿದ್ರಲ್ಲ." ಎಂದು ತಮ್ಮ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ.