ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಇಂದು ವಾರದ ಕತೆ ಕಿಚ್ಚನ ಜೊತೆ ಸೀಸನ್ನ ಮೊದಲ ಪಂಚಾಯಿತಿ ನಡೆಯಲಿದೆ. ಈಗಾಗಲೇ ಕಲರ್ಸ್ ಮೊದಲ ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಪರ್ಧಿಗಳ ನಡವಳಿಕೆಯಿಂದ ಸುದೀಪ್ ಗರಂ ಆಗಿದ್ದಾರೆ. ಗೇಮ್ ಪ್ಲ್ಯಾನ್, ಸ್ಟ್ರಾಟರ್ಜಿ ಏನೂ ಇಲ್ಲ ನಿಮ್ಮಲ್ಲಿ ಎಂದು ಕೋಪಗೊಂಡಿದ್ದಾರೆ. ಇದರ ಜೊತೆಗೆ ಇಂದು ಮತ್ತೊಂದು ಟ್ವಿಸ್ಟ್ ಇರಲಿದೆ. ಮೊದಲ ದಿನ ಎಲಿಮಿನೇಟ್ ಆಗಿದ್ದ ರಕ್ಷಿತಾ ಶೆಟ್ಟಿ ಇಂದು ಪುನಃ ಮನೆ ಸೇರಿದ್ದಾರೆ.
ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆದರು. ಮೊದಲ ದಿನವೇ ಬಿಗ್ ಬಾಸ್ನಲ್ಲಿ ಎಲಿಮಿನೇಷನ್ ಇರುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಇದ್ದರೂ ಇದೊಂದು ಗಿಮಿಕ್ ಆಗಿರಬಹುದೆಂದು ಅಂದುಕೊಂಡಿದ್ದರು. ಆದರೆ, ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ತಾಣಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎಂದು ಪ್ರಕಟಿಸುವ ಮೂಲಕ ಶಾಕ್ ನೀಡಿತ್ತು. ಇದನ್ನ ಕಂಡು ಅವರ ಫ್ಯಾನ್ಸ್ ಕೂಡ ಸಿಟ್ಟಾಗಿದ್ದರು.
ರಕ್ಷಿತಾಗೆ ಅವಮಾನ ಮಾಡಲಾಗಿದೆ.. ಈರೀತಿ ಎಲಿಮಿನೇಷನ್ ಮಾಡಕೂಡದು ಎಂದು ಹೇಳಿದ್ದರು. ಸೋಷಿಯಲ್ ಮೀಡಿಯಾದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಜಯಪ್ರಕಾಶ್ ಗೌಡ ಅವರು, ‘ಕರ್ದು ಅವಮಾನ ಮಾಡೋದು ಎಷ್ಟು ಸರಿ, ಇದು ನಿಮಗೆ ಸರಿ ಅನಿಸುತ್ತಿದೆಯೇ?’ ಎಂದು ಹೇಳಿದ್ದರು. ಇದೇರೀತಿಯ ಗಿಮಿಕ್ ಈ ಹಿಂದೆ ತಮಿಳು ಬಿಗ್ ಬಾಸ್ನಲ್ಲಿ ಕೂಡ ಮಾಡಲಾಗಿತ್ತು.
BBK 12: ವಾರದ ಕತೆಯಲ್ಲಿ ಕಿಚ್ಚ ಗರಂ: ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ ಸುದೀಪ್ ಮಾತು
ಕಳೆದ ವರ್ಷ ನಡೆದ ಬಿಗ್ ಬಾಸ್ ತಮಿಳು 8 ಶೋನಲ್ಲೂ ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದ ಆ ಶೋನಲ್ಲಿ ಒಟ್ಟು 19 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ತಮಿಳು ಶೋಗೆ ಕಾಲಿಟ್ಟಿದ್ದರು. ಅದರಲ್ಲಿ ನಟಿ ಸಚನಾ ನಮಿದಾಸ್ ಅವರನ್ನು ಕೂಡ ಒಬ್ಬರು. ಆದರೆ ಮನೆಯವರೆಲ್ಲಾ ಸೇರಿಕೊಂಡು ಸಚನಾರನ್ನು ಒಂದೇ ದಿನಕ್ಕೆ ಎಲಿಮಿನೇಟ್ ಮಾಡಿದ್ದರು. ಅದೇ ರೀತಿ ಇಲ್ಲಿ ರಕ್ಷಿತಾ ಶೆಟ್ಟಿ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಲಾಗಿತ್ತು.
ಸಚನಾ ಅವರನ್ನು ಎಲಿಮಿನೇಟ್ ಮಾಡಿದಮೇಲೆ 4 ದಿನ ಕಳೆಯುವುದರೊಳಗೆ ಪುನಃ ಅವರನ್ನು ಮನೆಯೊಳಗೆ ಕರೆಸಿಕೊಳ್ಳಲಾಗಿತ್ತು. ಇದೀಗ ರಕ್ಷಿತಾ ಶೆಟ್ಟಿ ಅವರನ್ನು ಕೂಡ ಅದೇ ರೀತಿ ಪುನಃ ಬಿಗ್ ಬಾಸ್ ಮನೆಯೊಳಗೆ ಕರೆಸಲಾಗಿದೆ. ಈ ಕುರಿತ ಕಲರ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಒಂದು ಪ್ರೋಮೋ ಬಿಟ್ಟಿದೆ. ಇದರಲ್ಲಿ ಸ್ಪರ್ಧಿಗಳ ವಿರುದ್ಧ ಗರಂ ಆದ ರಕ್ಷಿತಾ, ನಾನು ಹೋಗುವಾಗ ಎಲ್ಲರೂ ನನಗೆ ಸಮಾಧಾನ ಮಾಡಲು ಬಂದರು ಆದರೆ, ಒಬ್ಬರು ಕೂಡ ನನ್ನ ಕಡೆ ಸ್ಟ್ಯಾಂಡ್ ತೆಗೆದುಕೊಳ್ಳಲಿಲ್ಲ. ಅವರಿಗೆ ಹೇಗೆ ಗೊತ್ತು ನಾನು ಹೇಗೆ ಆಡುತ್ತೇನೆ, ಯಾವರೀತಿ ಆಡುತ್ತೇನೆ ಅಂತ ಎಂದು ಹೇಳಿದ್ದಾರೆ.