ಝೀ ಕನ್ನಡ ವಾಹಿನಿಯ ಮೂಲಕ ಕರ್ನಾಟಕದ ಜನರ ಮನೆಮನಸ್ಸಿಗೆ ತಲುಪಿದ್ದ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ (Rakesh Poojary) ದಿಢೀರ್ ಸಾವು ಅವರ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಮೇ 12 ರ ಬೆಳಗ್ಗಿನ ಜಾವ ಸುಮಾರು 1.30ಕ್ಕೆ ಬಿಪಿ ಲೋ ಆಗಿ ಕುಸಿದು ಬಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾದರು. ಮನೆಗೆ ಆಧಾರವಾಗಿದ್ದ ಮಗ ರಾಕೇಶ್ನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಕುಟುಂಬವಿದೆ.
ರಾಕೇಶ್ ಅಂತಿಮ ದರ್ಶನಕ್ಕೆ ಅನೇಕ ಕಲಾವಿದರು ಬಂದಿದ್ದರು. ನಟಿ ನಯನ, ಸೂರ್ಯ ಕುಂದಾಪುರ, ದೀಕ್ಷಿತ್, ಪ್ರವೀಣ್, ದೀಪಿಕಾ, ವಾಣಿ, ಉಮೇಶ್ ಕಿನ್ಮಾರ, ಸೂರಜ್, ಜೀ ಮೆಂಟರ್ ವಿಜಯ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವರು ಗೆಳೆಯನ ಅಂತಿಮ ದರ್ಶನ ಪಡೆದುಕೊಂಡರು. ಆದರೆ, ಈ ವೇಳೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಲ್ಲೇ ಹತ್ತಿರದಲ್ಲಿದ್ದರೂ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಅಲ್ಲದೆ ರಾಕೇಶ್ ಕಾಂತಾರ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.
ಈ ಕಾರಣಕ್ಕೆ ರಿಷಭ್ ವಿರುದ್ಧ ಗಂಭೀರ ಆರೋಪ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ರಿಷಭ್ ಅವರು ಹತ್ತಿರದಲ್ಲೇ ಇದ್ದರೂ ರಾಕೇಶ್ ನನ್ನ ನೋಡಲು ಬರಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ನಿಧನದ 21 ದಿನಗಳ ಬಳಿಕ ರಾಕೇಶ್ ಪೂಜಾರಿ ಅವರ ಮನೆಗೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ. ಪತ್ನಿ ಪ್ರಗತಿ ಜೊತೆ ರಾಕೇಶ್ ಪೂಜಾರಿ ನಿವಾಸಕ್ಕೆ ತೆರಳಿದ ರಿಷಬ್ ಶೆಟ್ಟಿ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಉಡುಪಿ ಹೂಡೆಯಲ್ಲಿರುವ ರಾಕೇಶ್ ಪೂಜಾರಿ ಮನೆಗೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದು, ರಾಕೇಶ್ ತಂಗಿ ಹಾಗು ತಾಯಿಗೆ ಸಮಾಧಾನ ಹೇಳಿದ್ದಾರೆ. ಅಲ್ಲದೇ ರಾಕೇಶ್ ತಂಗಿ ಮದುವೆಗೂ ಆರ್ಥಿಕ ಸಹಾಯ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಿರ್ಮಾಣವಾಗುವ ರಾಕೇಶ್‌ನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಸದಾಕಾಲ ಕುಟುಂಬದೊಂದಿಗೆ ನಾನಿದ್ದೇನೆ ಎನ್ನುವ ಭರವಸೆಯನ್ನೂ ರಿಷಭ್ ಶೆಟ್ಟಿ ನೀಡಿದ್ದಾರೆ.
Bhagya Lakshmi Serial: ರಾಮ್ದಾಸ್ ಮನೆಗೆ ಬಂದ ಭಾಗ್ಯ-ಕುಸುಮಾ: ಆದೀಯನ್ನು ನೋಡಿ ಶಾಕ್