ಬಿಗ್ ಬಾಸ್ ತೆಲುಗು (Bigg Boss Telugu) 9ನೇ ಸೀಸನ್ ಶುರುವಾಗಿ ಒಂದು ವಾರ ಕೂಡ ಆಗಿಲ್ಲ, ಅದಾಗಲೇ ಮನೆಯಲ್ಲಿ ಬಿರುಗಾಳಿ ಎದ್ದಿದೆ. ಸಾಮಾನ್ಯರಾಗಿ ಮನೆಗೆ ಪ್ರವೇಶಿಸಿದವರೇ ದೊಡ್ಮನೆಯೊಳಗೆ ನಿಜವಾದ ಆಟವನ್ನು ಪ್ರಾರಂಭಿಸಿದ್ದಾರೆ. ಪ್ರತಿ ಸೀಸನ್‌ನಲ್ಲಿ, ಸೆಲೆಬ್ರಿಟಿಗಳು ಉತ್ಸುಕರಾಗುತ್ತಿದ್ದರು.. ಸಾಮಾನ್ಯರು ಮೌನವಾಗಿರುತ್ತಿದ್ದರು. ಆದರೆ ಈ ಸೀಸನ್‌ನಲ್ಲಿ ಎಲ್ಲವೂ ಉಲ್ಟಾ ಆಗಿದೆ. ಸೆಲೆಬ್ರಿಟಿ ರೇಂಜ್‌ನಲ್ಲಿ ಸಾಮಾನ್ಯರ ಜಗಳವೇ ಬಿಗ್ ಬಾಸ್ ಮನೆಯೊಳಗೆ ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಕೂಡ ಸ್ಪರ್ಧಿಯಾಗಿ ತೆಲುಗು ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಅಚ್ಚರಿ ಎಂದರೆ ಇವರು ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಅಬ್ಬರಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ತನ್ನ ಹೆಸರು ಬರುವಂತೆ ಮಾಡಿದ್ದಾರೆ.
ಬಿಗ್ ಬಾಸ್ ಸಂಜನಾ ಅವರನ್ನು ಕನ್ಫೆಷನ್ ರೂಮಿಗೆ ಕರೆದು, ಮನೆಯಲ್ಲಿರುವ ಜನರು ಹೇಗಿದ್ದಾರೆ, ನಿಮಗೆ ಹೇಗನಿಸುತ್ತಿದೆ? ಎಂದು ಕೇಳಿದ್ದಾರೆ. ಇದಕ್ಕೆ ಸಂಜನಾ ಹಿಂದು-ಮುಂದು ನೋಡದೆ ತನಗೆ ಅನಿಸಿದ್ದನ್ನು ನೇರವಾಗಿ ಹೇಳಿದ್ದಾರೆ. ಅವರು ಒಳಗೆ ಒಂದು ಮತ್ತು ಹೊರಗೆ ಒಂದು ಎಂಬಂತೆ ವರ್ತಿಸುತ್ತಿದ್ದಾರೆ. ಆದರೆ, ನಾನು ನಾನಾಗಿಯೇ ಇರುತ್ತೇನೆ.. ನನ್ನ ಮನಸ್ಸಿನಲ್ಲಿರುವುದನ್ನು ನಾನು ಮಾತನಾಡುತ್ತೇನೆ.. ಅದಕ್ಕಾಗಿಯೇ ನಾನು ಇಂದು ಹೆಚ್ಚಿನವರಿಂದ ನಾಮಿನೇಟ್ ಆಗಿದ್ದೇನೆ ಎಂದು ಸಂಜನಾ ಹೇಳಿದರು.
ಅಲ್ಲದೆ, ಮನೆಯಲ್ಲಿರುವ ಜನರು ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ ಎಂದು ನೀವು ಭಾವಿಸುತ್ತೀರಾ? ಕೇಳಿದಾಗ.. ಬಿಗ್ ಬಾಸ್, ತನಗೂ ಅದೇ ರೀತಿ ಅನಿಸುತ್ತದೆ ಎಂದು ಹೇಳಿದಳು. ಇಷ್ಟೊಂದು ಜನ ನನ್ನನ್ನು ನಾಮಿನೇಟ್ ಮಾಡಿದ್ದಕ್ಕೆ ನನಗೆ ಬೇಸರವಾಯಿತು. ನನಗೆ ಒಳಗೆ ಎಷ್ಟೇ ನೋವು ಇದ್ದರೂ ಅದನ್ನು ನಗುವಿನೊಂದಿಗೆ ತೋರಿಸಬೇಕು. ಅದೇ ನನ್ನ ಸವಾಲು ಎಂದರು.
ಸಂಜನಾ ಆಡಿದ ಮಾತು ಕೇಳಿ ಬಿಗ್ ಬಾಸ್ ಕೂಡ, ಇಲ್ಲಿರುವ ಎಲ್ಲರೂ ಸತ್ಯವನ್ನು ಮರೆಮಾಡಲು ಪ್ರಯತ್ನಿಸುತ್ತಾರೆ. ಆದರೆ ನೀವು ನಿರ್ಭಯವಾಗಿ ಮಾತನಾಡಿದ್ದೀರಿ ಎಂದು ಅಭಿನಂದಿಸಿದರು.. ಇದೇವೇಳೆ ಸಂಜನಾ ಅವರು, ನನ್ನ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ. ನೀವು ಚೆನ್ನಾಗಿದ್ದೀರಾ? ಬಿಗ್ ಬಾಸ್ ಎಂದು ಭಾವುಕರಾಗಿ ಕೇಳಿದ್ದಾರೆ. ಎಲ್ಲರೂ ಚೆನ್ನಾಗಿದ್ದಾರೆ. ಆಟದ ಮೇಲೆ ಗಮನ ಹರಿಸಬೇಕು ಎಂದು ಬಿಗ್ ಬಾಸ್ ಹೇಳಿದರು.
ನಂತರ ಬಿಗ್ ಬಾಸ್ ಸಂಜನಾ ಅವರಿಗೆ ವಿಶೇಷ ಪವರ್ ಒಂದನ್ನು ನೀಡಿದ್ದಾರೆ. ಮೊದಲ ನಾಯಕತ್ವಕ್ಕೆ ಸ್ಪರ್ಧಿಸಲು ಐದು ಜನರನ್ನು ಹೆಸರಿಸಿ. ನೀವು ಹೆಸರಿಸಿದ ಜನರಲ್ಲಿ ಒಬ್ಬರು ಕ್ಯಾಪ್ಟನ್ ಆಗಿರುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಆ ಪಟ್ಟಿಯಲ್ಲಿ ಇಬ್ಬರು ಮಾಲೀಕರು ಇರಬೇಕು ಎಂದು ಸಹ ಅವರು ಹೇಳಿದರು. ಸಂಜನಾ ಅವರು ಹರೀಶ್, ಡೆಮನ್ ಪವನ್, ಎಮ್ಯಾನುಯೆಲ್ ಮತ್ತು ಶ್ರಷ್ಟಿ ಎಂದು ಹೆಸರು ತೆಗೆದುಕೊಂಡಿದ್ದಾರೆ.
Anushree: ತಾಳಿ ಹಾಕಿಕೊಂಡೆ ನಿರೂಪಣೆಗೆ ಮರಳಿದ ಅನುಶ್ರೀ: ಅಭಿಮಾನಿಗಳು ಫಿದಾ
ಹೊರಗೆ ಬಂದು ಎಲ್ಲರ ಮುಂದೆ ಆ ಹೆಸರುಗಳನ್ನು ಘೋಷಿಸಿ ಎಂದು ಬಿಗ್ ಬಾಸ್ ಸಂಜನಾಗೆ ಹೇಳಿದ್ದಾರೆ. ಸಂಜನಾ ಹೊರಬಂದು ಐದು ಹೆಸರುಗಳನ್ನು ಹೆಸರಿಸಿದರು. ಆದರೆ, ಇದರಲ್ಲಿ ಬಿಗ್ ಬಾಸ್ ಏನೋ ಟ್ವಿಸ್ಟ್ ಕೊಟ್ಟಿರುವಂತಿದೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಸಂಜನಾ ಕೂಡ ಭಾಗವಹಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಸಂಜನಾ ಅವರೇ ಮೊದಲ ವಾರದ ಕ್ಯಾಪ್ಟನ್ ಕೂಡ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಜನಾ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ಕ್ಯಾಪ್ಟನ್ ಎಂಬ ಪೋಸ್ಟ್ ಅನ್ನು ಸ್ಟೋರಿ ಹಾಕಲಾಗಿದೆ. ಒಟ್ಟಾರೆ ಮೊದಲ ವಾರವೇ ಸಂಜನಾ ಗಲ್ರಾರಿ ಅಬ್ಬರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಯಾವರೀತಿ ಆಟವಾಡುತ್ತಾರೆ ನೋಡಬೇಕು.