ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Seetha Rama: ಸೀತಾ ರಾಮ ಕೊನೆಯ ದಿನದ ಶೂಟಿಂಗ್​ನಲ್ಲಿ ಕಣ್ಣೀರಿಟ್ಟ ಗಗನ್ ಚಿನ್ನಪ್ಪ: ವಿಡಿಯೋ ನೋಡಿ

ಸೀತಾ ರಾಮ ಧಾರಾವಾಹಿಯ ಕೊನೆಯಲ್ಲಿ ಭಾರ್ಗವಿ ಕೆಟ್ಟವಳು ಎಂಬ ವಿಚಾರ ರಾಮ್ ಸೇರಿದಂತೆ ಇಡೀ ಮನೆಯವರಿಗೆ ಗೊತ್ತಾಯಿತು. ಮೊದಲಿಗೆ ಈ ವಿಚಾರ ಸೀತಾಗೆ ತಿಳಿಯಿತು. ಆಗ ಭಾರ್ಗವಿ ಸೀತಾಳನ್ನು ಕಿಡ್ನಾಪ್ ಮಾಡಿದಳು. ಇದನ್ನು ಅರಿತ ರಾಮ್ ಕಿಡ್ನಾಪ್ ಮಾಡಿರುವ ಜಾಗಕ್ಕೆ ಬಂದು ಅಲ್ಲಿ ಎಲ್ಲ ಸತ್ಯ ಗೊತ್ತಾಗಿದೆ.

Seetha rama Gagan Crying

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿ ಮೇ 30 ರಂದು ಕೊನೆಯ ಎಸಪಿಸೋಡ್ ಪ್ರಸಾರ ಮಾಡುವ ಮೂಲಕ ಕೊನೆಗೊಂಡಿದೆ. ಮರಾಠಿ ಧಾರಾವಾಹಿ ‘ಮುಜಿ ತುಜಿ ರೇಶಿಮಗಾಡ’ ಧಾರಾವಾಹಿಯ ರಿಮೇಕ್ ಆಗಿ ಸೀತಾ ರಾಮ ಧಾರಾವಾಹಿ ಮೂಡಿ ಬಂದಿತ್ತು. 2023ರ ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆರಂಭವಾಗಿ ಮುಕ್ತಾಯಕಂಡಿದೆ. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿಯಲ್ಲಿ ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ ಎಸ್‌, ಕಲಾಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್‌, ಪೂಜಾ ಲೋಕೇಶ್‌, ಜಯದೇವ್‌ ಮೋಹನ್‌, ಅಶೋಕ್‌ ಶರ್ಮಾ, ರೀತು ಸಿಂಗ್‌ ನೇಪಾಳ, ಪೂರ್ಣಚಂದ್ರ ಮುಂತಾದವರು ಭಾಗವಹಿಸಿದ್ದರು.

ಬರೋಬ್ಬರಿ 490 ಎಪಿಸೋಡ್​ಗಳನ್ನು ಪ್ರಸಾರ ಮಾಡಿದ್ದ ಈ ಧಾರಾವಾಹಿ ಪೂರ್ಣಗೊಂಡಿರುವುದು ಅಭಿಮಾನಿಗಳಿಗೆ ಬೇಸರ ಕಾಡುತ್ತಿದೆ. ತೆರೆಗೆ ಬಂದ ಕೆಲವೇ ದಿನಗಳಲ್ಲಿ ಈ ಸೀರಿಯಲ್​ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಆದರೆ ಇದೀಗ ಧಾರಾವಾಹಿ ಅಂತ್ಯವಾಗಿದೆ. ಸೀತಾ ರಾಮ ಸೀರಿಯಲ್‌ನ ಕೊನೇ ದಿನದ ಶೂಟಿಂಗ್‌ನಲ್ಲಿ ಇಡೀ ತಂಡ ಭಾಗಿಯಾಗಿತ್ತು. ಇದೇ ವೇಳೆ ಸೀರಿಯಲ್ ಕೊನೆ ಶಾಟ್​​ನಲ್ಲಿ ಕಟ್​ ಹೇಳುತ್ತಿದ್ದಂತೆ ನಟ ಗಗನ್​ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ಸೀತಾ ರಾಮ ಸೀರಿಯಲ್ ಅನೇಕ ಕಲಾವಿದರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು. ಗಗನ್​ ಮತ್ತು ಸಿಹಿ ಪಾತ್ರ ಮಾಡಿದ ರೀತು ಸಿಂಗ್​, ವೈಷ್ಣವಿ ಗೌಡ, ಅಶೋಕ್​ ಹಾಗೂ ಮೇಘನಾಗೆ ಇದು ದೊಡ್ಡ ಮಟ್ಟದ ಯಶಸ್ಸು ಕಂಡಿತು. ಅದರಲ್ಲೂ ಪುಟಾಣಿ ರೀತುಗೆ ದೊಡ್ಡ ಮಟ್ಟದ ಸ್ಟಾರ್​ ಪಟ್ಟ ಕೊಟ್ಟಿದ್ದೇ ಈ ಸೀತಾ ರಾಮ ಸೀರಿಯಲ್.​ ಹೀಗಾಗಿ ಕೊನೆಯ ದಿನದ ಶೂಟಿಂಗ್​ನಲ್ಲಿ ಇಡೀ ಸೀರಿಯಲ್ ತಂಡ ಭಾವುಕವಾಗಿದೆ. ಇದರ ವಿಡಿಯೋವನ್ನು ಝೀ ಕನ್ನಡ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.



ಸೀತಾ ರಾಮ ಧಾರಾವಾಹಿಯ ಕೊನೆಯಲ್ಲಿ ಭಾರ್ಗವಿ ಕೆಟ್ಟವಳು ಎಂಬ ವಿಚಾರ ರಾಮ್ ಸೇರಿದಂತೆ ಇಡೀ ಮನೆಯವರಿಗೆ ಗೊತ್ತಾಯಿತು. ಮೊದಲಿಗೆ ಈ ವಿಚಾರ ಸೀತಾಗೆ ತಿಳಿಯಿತು. ಆಗ ಭಾರ್ಗವಿ ಸೀತಾಳನ್ನು ಕಿಡ್ನಾಪ್ ಮಾಡಿದಳು. ಇದನ್ನು ಅರಿತ ರಾಮ್ ಕಿಡ್ನಾಪ್ ಮಾಡಿರುವ ಜಾಗಕ್ಕೆ ಬಂದು ಅಲ್ಲಿ ಎಲ್ಲ ಸತ್ಯ ಗೊತ್ತಾಗಿದೆ. ಈ ಕಾರಣದಿಂದ ಭಾರ್ಗವಿಯನ್ನು ಜೈಲಿಗೆ ಹಾಕಲಾಯಿತು. ಈ ಮೂಲಕ ಧಾರಾವಾಹಿ ಕೊನೆಗೊಂಡಿದೆ.

Bhagya Lakshmi Serial: ದಿಢೀರ್ ಭಾಗ್ಯ ಮನೆಗೆ ಬಂದು ವಾರ್ನ್ ಮಾಡಿ ಹೋದ ಆದೀಶ್ವರ್ ಕಾಮತ್