ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Bhagya Lakshmi Serial: ಭಾಗ್ಯಾಳ ಮಹಾ ನಿರ್ಧಾರ ಬೆಂಬಲಿಸಿದ ಕುಸುಮಾ: ತಾಳಿ ಕಿತ್ತೇ ಬಿಟ್ಟಳು ಭಾಗ್ಯಾ

ಕುಸುಮಾ ಕೂಡ ಇಂತ ಮಗ ಬೇಡ.. ನನ್ನ ಮಗನನ್ನು ಸರಿ ದಾರಿಯಲ್ಲಿ ನಡೆಸೋದ್ರಲ್ಲಿ ನಾನು ಸೋತಿದ್ದೇನೆ. ಆದ್ರೆ, ಅತ್ತೆಯಾಗಿ ನಾನು ಆ ತಪ್ಪು ಮಾಡೋದಿಲ್ಲ.. ಇವತ್ತಿಗೆ ಈ ಒತ್ತಾಯದ ಸಂಬಂಧ ಮುಗೀತು. ನನ್ನ ಮಗ ನಾಲಾಯಕ್ ಎಂದು ಭಾಗ್ಯಾ ಬಳಿ ತಾಳಿ ತೆಗೆದುಕೊಡು ಎಂದಿದ್ದಾಳೆ.

ಭಾಗ್ಯಾಳ ಮಹಾ ನಿರ್ಧಾರ ಬೆಂಬಲಿಸಿದ ಕುಸುಮಾ: ತಾಳಿ ಕಿತ್ತೇ ಬಿಟ್ಟಳು ಭಾಗ್ಯಾ

Bhagya lakshmi serial

Profile Vinay Bhat Feb 26, 2025 12:17 PM

ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ ಸದ್ಯ ಭಾಗ್ಯಾಳ ಮಹಾ ನಿರ್ಧಾರದ ಎಪಿಸೋಡ್​ಗಳು ನಡೆಯುತ್ತಿದೆ. ತಾಂಡವ್ ಮತ್ತು ಶ್ರೇಷ್ಠಾ ಮದುವೆಯ ಸಂದರ್ಭದಲ್ಲಿ ಭಾಗ್ಯ ಅಲ್ಲಿಗೆ ಬಂದಿದ್ದು, ದೊಡ್ಡ ಹೈಡ್ರಾಮವೇ ನಡೆಯುತ್ತಿದೆ. ತಾಂಡವ್-ಶ್ರೇಷ್ಠಾ ಮದುವೆಗೆ ತಯಾರಾಗಿದ್ದಾರೆ. ಇದನ್ನು ತಿಳಿದ ಭಾಗ್ಯಾ ತನ್ನ ತಾಳಿಯನ್ನು ತೆಗೆದು ತಾಂಡವ್ ಕೈಗೆ ಕೊಟ್ಟುಬಿಟ್ಟಿದ್ದಾಳೆ. ಸ್ವತಃ ಅತ್ತೆ ಕುಸುಮಾಳೆ ತಾಳಿಯನ್ನು ತೆಗೆದುಕೊಡು ಎಂದು ಹೇಳಿದ್ದಾರೆ.

ದಯವಿಟ್ಟು ನನ್ನನ್ನು ಮದುವೆಯಾಗು ಎಂದು ಶ್ರೇಷ್ಠಾ ಕಾಲು ಹಿಡಿದು, ಕೈಮುಗಿದು ಕೇಳಿಕೊಂಡಾಗ ನೀನು ನನಗೋಸ್ಕರ ತುಂಬಾ ತ್ಯಾಗ ಮಾಡಿದ್ದೀಯ.. ನಾನು ನಿನ್ನ ಮಾತಿಗೆ ಬೆಲೆ ಕೊಡ್ತೇನೆ.. ಸರಿ, ಇವತ್ತೇ ಮದುವೆಯಾಗೋಣ ಎಂದು ಹೇಳುತ್ತಾನೆ. ಆದರೆ, ತಾಂಡವ್-ಶ್ರೇಷ್ಠಾಳ ಈ ಎಲ್ಲ ಘಟನೆಯನ್ನು ಸುಂದರಕ್ಕೆ ನೋಡಿರುತ್ತಾಳೆ. ಈ ಮದುವೆ ಆಗೋದಕ್ಕೆ ನಾನು ಬಿಡೋದಿಲ್ಲ ಎಂದು ಕುಸುಮಾಗೆ ಹೇಳುತ್ತಾಳೆ. ಕುಸುಮಾ, ಭಾಗ್ಯಾಗೆ ಕಾಲ್ ಮಾಡಿ ನೀನು ತಕ್ಷಣ ದೇವಸ್ಥಾನಕ್ಕೆ ಬಾ ಎಂದು ಹೇಳಿದ್ದಾರೆ.

ತಾಂಡವ್-ಶ್ರೇಷ್ಠಾ ಮದುವೆ ತಯಾರಿ ಕಂಡು ಭಾಗ್ಯಾಗೆ ಆಘಾತವಾಗುತ್ತದೆ. ಕಣ್ಣಲ್ಲಿ ನೀರು ಉಕ್ಕಿ ಬರುತ್ತದೆ. ಇನ್ನೇನು ತಾಳಿ ಕಟ್ಟಬೇಕು ಎಂಬಷ್ಟರಲ್ಲಿ ಭಾಗ್ಯಾ ಹಾಗೂ ಕುಸುಮಾ ಬಂದು ದೊಡ್ಡ ಮಾತುಕತೆ ನಡೆಯುತ್ತಿದೆ. ಗಂಡನ ದ್ರೋಹಕ್ಕೆ ಭಾಗ್ಯ ಸ್ವಾಭಿಮಾನದ ಉತ್ತರ ಕೊಡುತ್ತಾಳೆ. ಇದಕ್ಕೆ ಕುಸುಮಾ ಕೂಡ ಸಾಥ್ ನೀಡುತ್ತಾಳೆ. ಇಲ್ಲಿಯವರೆಗೆ ಭಾಗ್ಯಳನ್ನು ನನ್ನ ಮೆಚ್ಚಿನ, ಮುದ್ದಿನ ಸೊಸೆ ಎಂದು ಕರೆಯುತ್ತಿದ್ದ ಕುಸುಮಾ, ನಾನು ಜವಾಬ್ದಾರಿಯುತ ಅತ್ತೆಯ ಸ್ಥಾನವನ್ನು ಕಳೆದುಕೊಂಡಿದ್ದೇನೆ, ಅತ್ತೆ ಎಂದು ಕರೆಸಿಕೊಳ್ಳುವ ಯಾವ ಯೋಗ್ಯತೆಯೂ ನನಗಿಲ್ಲ, ಹೀಗಾಗಿ ನನ್ನನ್ನು ಇನ್ನು ಮುಂದೆ ಅತ್ತೆ ಎಂದು ಕರೆಯಬೇಡ ಎಂದು ಭಾಗ್ಯಾಗೆ ಹೇಳುತ್ತಾಳೆ.

ಅದಕ್ಕೆ ಭಾಗ್ಯ, ಅತ್ತೆ, ನೀವು ಹಾಗೆಲ್ಲ ಹೇಳಬೇಡಿ, ನಾನು ನಿಮ್ಮ ಬಗ್ಗೆ ಯಾವತ್ತೂ ಗೌರವ ಹೊಂದಿದ್ದೇನೆ ಎಂದು ಹೇಳುತ್ತಾಳೆ. ಆದರೆ ಕುಸುಮಾ ಮಾತ್ರ, ನೀನಿನ್ನು ನನಗೆ ಮಗಳಿದ್ದಂತೆ, ಹೆತ್ತ ಮಗಳು ಅಲ್ಲದಿದ್ದರೂ, ಅದಕ್ಕಿಂತ ಜಾಸ್ತಿ, ಚೆನ್ನಾಗಿ ನೋಡಿಕೊಂಡಿದ್ದೀಯಾ, ಹೀಗಾಗಿ ನನ್ನನ್ನು ಅಮ್ಮ ಎನ್ನು, ನೀನು ನನ್ನ ಮಗಳು, ನನ್ನ ಜತೆಯಲ್ಲೇ ಇರು ಎಂದು ಹೇಳುತ್ತಾಳೆ. ಅತ್ತ ಧರ್ಮರಾಜ್ ಕೂಡ, ನನ್ನ ಮಗ ತಾಂಡವ್ ನಾಲಾಯಕ್ ಮನುಷ್ಯ, ಅವನಿಗೆ ಸಂಬಂಧಗಳ ಬೆಲೆ ಗೊತ್ತಿಲ್ಲ ಎಂದು ಹೇಳುತ್ತಾರೆ.



ಕಟ್ಟಿರೋ ತಾಳಿಗೆ ಗಂಡನೇ ಬೆಲೆ ಕೊಡಲಿಲ್ಲ ಅಂದ್ಮೇಲೆ, ಈ ತಾಳಿ ಭಾರ ಆಗ್ತಿದೆ, ಅತ್ತೆ ಎಂದು ಕುಸುಮಾ ಬಳಿ ಹೇಳಿದ್ದಾಳೆ. ಇವರಿಗೆ ಬೇಡದಿರೋ ಸಂಬಂಧ ನನಗೂ ಬೇಡ ಎಂದು ತನ್ನ ಅತ್ತೆಗೆ ಹೇಳುವ ಭಾಗ್ಯ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ. ಅತ್ತ ತಾಂಡವ್ ಇದನ್ನೆಲ್ಲ ಊಹಿಸಿಯೇ ಇರಲಿಲ್ಲ. ಕುಸುಮಾ ಕೂಡ ಇಂತ ಮಗ ಬೇಡ.. ನನ್ನ ಮಗನನ್ನು ಸರಿ ದಾರಿಯಲ್ಲಿ ನಡೆಸೋದ್ರಲ್ಲಿ ನಾನು ಸೋತಿದ್ದೇನೆ. ಆದ್ರೆ, ಅತ್ತೆಯಾಗಿ ನಾನು ಆ ತಪ್ಪು ಮಾಡೋದಿಲ್ಲ.. ಇವತ್ತಿಗೆ ಈ ಒತ್ತಾಯದ ಸಂಬಂಧ ಮುಗೀತು. ನನ್ನ ಮಗ ನಾಲಾಯಕ್ ಎಂದು ಭಾಗ್ಯಾ ಬಳಿ ತಾಳಿ ತೆಗೆದುಕೊಡು ಎಂದಿದ್ದಾಳೆ. ಒಟ್ಟಾರೆ ಭಾಗ್ಯ ಲಕ್ಷ್ಮೀ ಧಾರಾವಾಹಿ ಮಹಾತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಸಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

Lakshmi Baramma Serial: ಭೂಮಿಕಾರನ್ನು ಮದುವೆ ಆಗೋನು ಹೀಗಿದ್ರೆ ಸಾಕಂತೆ