ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhavya Gowda: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಭವ್ಯಾ ಗೌಡ

ಇದೀಗ ಭವ್ಯಾ ಗೌಡ ಅವರು ಕರಾವಳಿಯಲ್ಲಿ ಟೆಂಪಲ್ ರನ್ ನಡೆಸುತ್ತಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭವ್ಯಾ ಭೇಟಿ ನೀಡಿದ್ದು, ಇದರ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಟೀಲು ಅಮ್ಮನವರ ದೇವಸ್ಥಾನದ ಮಹಾಲಕ್ಷ್ಮಿ ಆನೆ ಜೊತೆ ಭವ್ಯಾ ಫೋಟೋ ತೆಗೆಸಿಕೊಂಡಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಭವ್ಯಾ

Bhavya Gowda

Profile Vinay Bhat Aug 11, 2025 4:20 PM

ಭವ್ಯಾ ಗೌಡ (Bhavya Gowda) ಬಿಗ್ ಬಾಸ್ ಮುಗಿದ ಬಳಿಕ ಯಾವುದೇ ರಿಯಾಲಿಟಿ ಶೋ ಅಥವಾ ಹೆಚ್ಚಿನ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿರಲಿಲ್ಲ. ವಿದೇಶಿ ಪ್ರವಾಸ ಮಾಡಿ ಸೈಲೆಂಟ್ ಆಗಿದ್ದರು. ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಕರ್ಣ ಎಂಬ ಹೊಸ ಧಾರಾವಾಹಿಗೆ ನಾಯಕಿ ನಟಿಯಾಗಿ ಎಂಟ್ರಿ ಆದರು. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿತು.

ಕರ್ಣ ಧಾರಾವಾಹಿಯಲ್ಲಿ ಭವ್ಯಾ ಗೌಡ ಮುದ್ದ-ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಭವ್ಯಾ ಅವರನ್ನು ನಿಧಿ ಪಾತ್ರದಲ್ಲಿ ಇಷ್ಟಪಡುತ್ತಿದ್ದಾರೆ. ಇದರ ಮಧ್ಯೆ ಈಗ ಭವ್ಯಾ ಎಲ್ಲೇ ಹೋದರು ಅಂದದ ಫೋಟೋ ತೆಗೆಸಿಕೊಂಡು ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತ ಇರುತ್ತಾರೆ.

ಇದೀಗ ಭವ್ಯಾ ಅವರು ಕರಾವಳಿಯಲ್ಲಿ ಟೆಂಪಲ್ ರನ್ ನಡೆಸುತ್ತಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭವ್ಯಾ ಭೇಟಿ ನೀಡಿದ್ದು, ಇದರ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಟೀಲು ಅಮ್ಮನವರ ದೇವಸ್ಥಾನದ ಮಹಾಲಕ್ಷ್ಮಿ ಆನೆ ಜೊತೆ ಭವ್ಯಾ ಫೋಟೋ ತೆಗೆಸಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕರ್ಣನ ವಿಜಯಕ್ಕೆ ಈ ಭೇಟಿ ಆಗಿರಬಹುದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಭವ್ಯಾ ಗೌಡ ಟಾಪ್‌ ನಾಲ್ಕನೇ ಸ್ಥಾನ ಗಳಿಸಿದ್ದರು. ಈ ಶೋನಿಂದ ಭವ್ಯಾ ಫ್ಯಾನ್ ಪೇಜ್‌ಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಗೀತಾ ಸೀರಿಯಲ್‌ನಲ್ಲಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಭವ್ಯಾ ಗೌಡ ಅಭಿನಯಿಸಿ ಕರ್ನಾಟಕ ಜನತೆಗೆ ಹತ್ತಿರವಾದವರು.

Bhagya Lakshmi Serial: ಒಂದಲ್ಲ.. ಎರಡಲ್ಲ.. ಭಾಗ್ಯಾಗೆ 25 ಲಕ್ಷ ಹಣವನ್ನು ಗಿಫ್ಟ್ ನೀಡಲು ಮುಂದಾದ ಆದೀಶ್ವರ್