Chaithra Kundapura: ಬಣ್ಣದ ಲೋಕಕ್ಕೆ ಚೈತ್ರಾ ಕುಂದಾಪುರ: ಬಾಯ್ಸ್ vs ಗರ್ಲ್ಸ್ನಲ್ಲಿ ಮಿಂಚುತ್ತಿರುವ ಭಾಷಣಗಾರ್ತಿ
ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಬಂದು ಚೈತ್ರಾ ಕುಂದಾಪುರ ತಮ್ಮಗೆ ಸಿಕ್ಕ ಆಫರ್ ಕಂಡು ಅವರೇ ಅಚ್ಚರಿಗೊಂಡಿದ್ದಾರೆ. ಹೀಗಾಗಿ ಚೈತ್ರಾ ತಮ್ಮ ಭಾಷಣ, ಸಾಮಾಜಿಕ ಕಾರ್ಯಚಟುವಟಿಕೆಗಳ ಜೊತೆ-ಜೊತೆಗೇ ರಿಯಾಲಿಟಿ ಶೋ-ಕೆಲವು ಬ್ರ್ಯಾಂಡ್ಗಳಿಗೆ ಪ್ರಮೋಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Chaithra kundapura

ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಭಾಷಣಗಾರ್ತಿ ಚೈತ್ರಾ ಕುಂದಾಪುರ ಬಿಗ್ ಬಾಸ್ನಿಂದ ಹೊರ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ದಿನದಿಂದ ದಿನಕ್ಕೆ ಚೈತ್ರಾ ಅವರ ವರ್ಚಸ್ಸನ್ನು ಹೆಚ್ಚುತ್ತಿದೆ. ದೊಡ್ಮನೆಯೊಳಗೆ ಸೀರೆಯುಟ್ಟು ಎಲ್ಲರ ಮನಸ್ಸು ಗೆದ್ದಿದ್ದ ಚೈತ್ರಾ ಅವರಿಗೆ ಈಗ ಬ್ಯೂಟಿ ಪಾರ್ಲರ್ ಗಳಿಂದ ಬಂಪರ್ ಆಫರ್ ಬರ್ತಿದೆ. ಒಂದಾದ್ಮೇಲೆ ಒಂದು ಬ್ಯೂಟಿ ಪಾರ್ಲರ್, ಸೀರೆ ಅಂಗಡಿಗೆ ಹೋಗುವ ಚೈತ್ರಾ, ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಕಿರುತೆರೆ ಲೋಕಕ್ಕೂ ಕಾಲಿಟ್ಟು, ಅಲ್ಲೂ ಮಿಂಚುತ್ತಿದ್ದಾರೆ.
ಬಿಗ್ ಬಾಸ್ ಕನ್ನಡದಲ್ಲಿ ಚೈತ್ರಾ ಹೆಚ್ಚಿನವರ ಜೊತೆ ಜಗಳವಾಡಿದ್ದರು. ಇವರ ಮಾತಿನ ಚಾತುರ್ಯತೆಯೆ ಇವರನ್ನು ಬಿಬಿಕೆ 11ನಲ್ಲಿ ಫಿನಾಲೆ ಹತ್ತಿರದ ವರೆಗೆ ಕರೆದುಕೊಂಡುಬಂತು. ಅದರಲ್ಲೂ ಚೈತ್ರಾ ಮತ್ತು ರಜತ್ ನಡುವಿನ ಜಗಳ-ಪರಸ್ಪರ ಕಾಲು ಎಳೆದುಕೊಳ್ಳುವ ರೀತಿಗಳೆಲ್ಲ ಜನರಿಗೆ ಇಷ್ಟವಾಗಿದ್ದವು. ಎದುರಿನವರು ಯಾರೇ ಆಗಲಿ ಗಟ್ಟಿಯಾಗಿ ನಿಂತು ಚೈತ್ರಾ ತಮ್ಮದೇ ಶೈಲಿಯಲ್ಲಿ ಬಾಯಿಮುಚ್ಚಿಸುತ್ತಿದ್ದರು. ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಇವರಿಗೆ ಹೇಳಿ ಮಾಡಿಸಿದ ಮತ್ತೊಂದು ಶೋ ಬಾಯ್ಸ್ ವರ್ಸಸ್ ಗರ್ಲ್ಸ್ನಲ್ಲಿ ಮಿಂಚುತ್ತಿದ್ದಾರೆ.
ಅದ್ಭುತ ಕಲ್ಪನೆಯೊಂದಿಗೆ ಬಂದಿರುವ ಈ ಷೋನಲ್ಲಿ ರೋಮಾಂಚಕ ಗೇಮ್, ಹುಡುಗ ಮತ್ತು ಹುಡುಗಿಯರು ಜಿದ್ದಾಜಿದ್ದಿಗೆ ಬಿದ್ದು ಗೆಲುವಿಗೆ ಹೋರಾಟ ನಡೆಸುತ್ತಾರೆ. ಇದು ನೋಡುಗರಿಗೆ ಮಜಾ ಹಾಗೂ ಥ್ರಿಲ್ ನೀಡುತ್ತಿದೆ. ಇದರಲ್ಲಿ ಚೈತ್ರಾ ಜೊತೆ ಅನೇಕ ಬಿಗ್ ಬಾಸ್ನ ಸ್ಪರ್ಧಿಗಳು ಹಾಗೂ ವಿವಿಧ ರಿಯಾಲಿಟಿ ಷೋಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಗರ್ಲ್ಸ್ ತಂಡವನ್ನು ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ಮುನ್ನಡೆಸುತ್ತಿದ್ದಾರೆ.
ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆ ಸರ್ಪ್ರೈಸ್ ಎನ್ನುವಂತೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಚೈತ್ರಾ ಎಂಟ್ರಿ ಪಡೆದರು. ಮೊದಲ ಎಪಿಸೋಡ್ನಲ್ಲೇ ಹವಾ ಸೃಷ್ಟಿಸಿದ್ದ ಚೈತ್ರಾ ಎರಡನೇ ವಾರದಲ್ಲಿ ಭರ್ಜರಿ ಡಾನ್ಸ್ ಮಾಡಿದ್ದಾರೆ. ರಜತ್ಗೆ ಟಕ್ಕರ್ ನೀಡಲು ಬಂದ ಚೈತ್ರಾ ಡಾನ್ಸ್ ವೀಕ್ಷಕರಿಗೆ ಇಷ್ಟವಾಯಿತು. ಸ್ಪರ್ಧಿಗಳು ಕೂಡ ಚೈತ್ರಾ ನೃತ್ಯವನ್ನು ಮೆಚ್ಚಿದ್ದಾರೆ. ಮೊದಲಿನಿಂದಲೂ ಉತ್ತಮ ಭಾಷಣಗಾರ್ತಿ ಎಂದೇ ಗುರುತಿಸಿಕೊಂಡಿರುವ ಚೈತ್ರಾ ಈಗ ಡಾನ್ಸ್ ಗೂ ಸೈ ಎಂಬುದನ್ನು ತೋರಿಸಿದ್ದಾರೆ.
ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೋಗುವಾಗ ಮುಂದೇನು ಮಾಡುತ್ತೀರಿ ಎಂದು ಸುದೀಪ್ ಕೇಳಿದ್ದರು. ತಮ್ಮ ಸಾಮಾಜಿಕ ಕ್ಷೇತ್ರದಲ್ಲಿಯೇ ಇನ್ನಷ್ಟು ಮತ್ತಷ್ಟು ಕೆಲಸ ಮಾಡುವ ಬಯಕೆ ಇದೆ ಎಂದು ಹೇಳಿಕೊಂಡಿದ್ದರು. ಆದರೆ ಬಿಗ್ ಬಾಸ್ನಿಂದ ಹೊರಬಂದು ಇವರಿಗೆ ಸಿಕ್ಕ ಆಫರ್ ಕಂಡು ಅವರೇ ಅಚ್ಚರಿಗೊಂಡಿದ್ದರು. ಹೀಗಾಗಿ ಚೈತ್ರಾ ಕುಂದಾಪುರ ತಮ್ಮ ಭಾಷಣ, ಸಾಮಾಜಿಕ ಕಾರ್ಯಚಟುವಟಿಕೆಗಳ ಜೊತೆ-ಜೊತೆಗೇ ರಿಯಾಲಿಟಿ ಶೋ-ಕೆಲವು ಬ್ರ್ಯಾಂಡ್ಗಳಿಗೆ ಪ್ರಮೋಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅನೇಕ ಸೀರೆ ಅಂಗಡಿಗಳಿಂದ ಆಫರ್ ಬರುತ್ತಿದ್ದು, ಇದನ್ನು ಉಟ್ಟು ಮಿಂಚುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಮುಂದಿನ ದಿನಗಳಲ್ಲಿ ಚೈತ್ರಾ ಕುಂದಾಪುರ ಅವರು ಸೀರಿಯಲ್, ಸಿನಿಮಾಗಳಲ್ಲೂ ನಟಿಸಿದರೆ ಅಚ್ಚರಿಪಡಬೇಕಿಲ್ಲ.
Bhagya Lakshmi Serial: ಮಗಳ ಬರ್ತ್ ಡೇ ಸೆಲೆಬ್ರೆಟ್ ಮಾಡಲು ಕಾದು-ಕಾದು ಸುಸ್ತಾದ ಭಾಗ್ಯಾ