ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 11: ಬಿಗ್ ಬಾಸ್ ಮನೆಗೆ ಬಂದ ಯಜಮಾನ ತಂಡ: ಮಸ್ತ್ ಮಜಾ ಮಾಡಿ ಸ್ಪರ್ಧಿಗಳು

ಕಲರ್ಸ್ ಕನ್ನಡ ಇಂದಿನ ಬಿಗ್ ಬಾಸ್ ಸಂಚಿಕೆಯ ಪ್ರೊಪೋ ಹಂಚಿಕೊಂಡಿದೆ. ಜನವರಿ 27 ರಿಂದ ಬಿಗ್ ಬಾಸ್ ಜಾಗವನ್ನು ತುಂಬೋಕೆ ಭರ್ಜರಿಯಾಗಿ ಎಂಟ್ರಿ ಕೊಡ್ತಿರೋ ಯಜಮಾನ ತಂಡ ಈಗ ಬಿಗ್ ಬಾಸ್ ಮನೆಯಲ್ಲಿ ಎಂದು ಪ್ರೊಮೋ ರಿಲೀಸ್ ಆಗಿದೆ.

Yajamana Bigg Boss

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯದ ಹಂತದಲ್ಲಿದೆ. ಇನ್ನೇನು ನಾಲ್ಕು ದಿನಗಳಲ್ಲಿ ಶೋ ಕೊನೆಗೊಳ್ಳಲಿದ್ದು, ಶನಿವಾರ ಹಾಗೂ ಭಾನುವಾರ ಗ್ರ್ಯಾಂಡ್ ಫಿನಾಲೇ ನಡೆಯಲಿದೆ. ಸದ್ಯ ಮನೆಯೊಳಗೆ ಆರು ಮಂದಿ ಇದ್ದಾರಷ್ಟೆ. ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಭವ್ಯಾ ಹನುಮಂತ ಹಾಗೂ ಮೋಕ್ಷಿತಾ ಪೈ ಕೊನೆಯ ವಾರದಲ್ಲಿ ಉಳಿದುಕೊಂಡಿದ್ದಾರೆ. ಹೀಗಿರುವಾಗ ಸದ್ಯ ದೊಡ್ಮನೆಗೆ ಯಜಮಾನ ಧಾರಾವಾಹಿ ತಂಡದ ಸದಸ್ಯರು ಎಂಟ್ರಿ ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ಇಂದಿನ ಬಿಗ್ ಬಾಸ್ ಸಂಚಿಕೆಯ ಪ್ರೊಪೋ ಹಂಚಿಕೊಂಡಿದೆ. ಜನವರಿ 27 ರಿಂದ ಬಿಗ್ ಬಾಸ್ ಜಾಗವನ್ನು ತುಂಬೋಕೆ ಭರ್ಜರಿಯಾಗಿ ಎಂಟ್ರಿ ಕೊಡ್ತಿರೋ ಯಜಮಾನ ತಂಡ ಈಗ ಬಿಗ್ ಬಾಸ್ ಮನೆಯಲ್ಲಿ ಎಂದು ಪ್ರೊಮೋ ರಿಲೀಸ್ ಆಗಿದೆ. ಈ ಧಾರಾವಾಹಿಯ ಮುಖ್ಯ ಪಾತ್ರದಾರಿಗಳಾದ ರಾಘವೇಂದ್ರ ಹಾಗೂ ಝಾನ್ಸಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇವರುಗಳ ಜೊತೆ ಎಲ್ಲ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಬಂದು ಮಾತನಾಡಿದ ಝಾನ್ಸಿ, ನನಗೆ ಗಂಡಸರನ್ನು ಕಂಡ್ರೆ ಆಗಲ್ಲ.. ಯಾವ ಗಂಡ್ಸು ನನ್ನ ಎದುರು ತಲೆ ಎತ್ತಿ ನಿಲ್ಲಬಾರದು ಎಂದು ಆರ್ಡರ್ ಮಾಡಿದ್ದಾರೆ. ಈ ಮನೇಲಿ ಇರೋ ತನಕ ತ್ರಿವಿಕ್ರಮ್ ಅವರು ಭವ್ಯಾ ಅವರನ್ನು ನೋಡೋ ಹಾಗಿಲ್ಲ.. ಪಕ್ಕದಲ್ಲಿ ಕೂರೋ ಹಾಗಿಲ್ಲ.. ಮಾತಾಡೋ ಹಾಗಿಲ್ಲ.. ಎಂದು ಕಂಡೀಷನ್ ಹಾಕಿದ್ದಾರೆ.



ಅಷ್ಟೇ ಅಲ್ಲದೆ ಆಚೆ ಎಲ್ಲ ರೂಲ್ ಮಾಡಾಯಿತು ಈಗ ಇಲ್ಲಿ ಇರೋರನ್ನ ರೂಲ್ ಮಾಡೋಣ ಎಂದು ಝಾನ್ಸಿ ಹೇಳಿದ್ದಾರೆ. ಆಗ ರಜತ್ ಅವರು, ನಾನು ಸ್ವಲ್ಪ ವೀಕ್ ಹುಡುಗಿಯರ ವಿಷಯದಲ್ಲಿ ಎಂದು ಹೇಳುತ್ತಾರೆ. ಅದಕ್ಕೆ ಝನ್ಸಿ ಅವರು ನನ್ ಹತ್ರ ಮಾತಾಡೋಕೆ ಮೊದಲು ತಲೆ ತಗ್ಗಿಸಬೇಕು ಎಂದು ಹೇಳಿದ್ದಾರೆ. ಆದ್ರೆ, ತಲೆ ತಗ್ಗಿಸೊ ಕ್ಯಾರಕ್ಟರ್ ನಂದು ಅಲ್ಲಮ್ಮ ಎಂದು ರಜತ್ ಹೇಳಿದ್ದಕ್ಕೆ ಮೂರು ಎಣಿಸ್ತೀನಿ ಅಷ್ಟೆ ಎಂದು ಹೇಳಿದ ನಂತರ ಬೇರೆ ದಾರಿಯಿಲ್ಲದೆ ರಜತ್ ತಲೆ ತಗ್ಗಿಸಿದ್ದಾರೆ.

ಬಿಗ್‌ ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿನ ಬಳಿಕ ಕಲರ್ಸ್ ಕನ್ನಡದಲ್ಲಿ ಯಜಮಾನ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಯಜಮಾನ ಸೀರಿಯಲ್‌ನಲ್ಲಿ ಇನ್‌ಸ್ಟಾಗ್ರಾಮ್ ಇನ್‌ಪ್ಲುಯೆನ್ಸರ್ ಮಧುಶ್ರೀ ಭೈರಪ್ಪ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ಹರ್ಷ ಬಿ.ಎಸ್ ಇದ್ದಾರೆ. ಧಾರಾವಾಹಿಯಲ್ಲಿ ಅವರು ರಾಘವೇಂದ್ರ ಎಂಬ ಪಾತ್ರ ಮಾಡ್ತಿದ್ದು, ಡೆಲವರಿ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀಮಂತಿಕೆಯ ದರ್ಪ, ಬಡವನ ಕಷ್ಟ ಅನ್ನೋ ಕಾನ್ಸೆಪ್ಟ್‌ನಲ್ಲಿ ಯಜಮಾನ ಸೀರಿಯಲ್‌ ಮೂಡಿಬರಲಿದೆ. ಕೋಪ, ದ್ವೇಷ , ಅಹಂಕಾರ ತುಂಬಿಕೊಂಡಿರುವ ಹುಡುಗಿ ಹಾಗೂ ಪ್ರೀತಿ, ವಿಶ್ವಾಸ, ಸ್ನೇಹ ಹುಡುಗ. ಅಪ್ಪಿತಪ್ಪಿ ಇವರಿಬ್ಬರೂ ಮದುವೆಯಾದರೆ ಏನಾಗಲಿದೆ ಎಂಬುದೇ ಸೀರಿಯಲ್ ಕಥೆ ಆಗಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಭಾವುಕ ಕ್ಷಣ: ಯಾರ ಮನದಾಳದ ಆಸೆ ಈಡೇರಿಸುತ್ತೆ ಟ್ರೋಫಿ?