ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಯಾರೇ ನೀ ಮೋಹಿನಿ (Yare Nee Mohini) ಸೇರಿದಂತೆ ಮಹಾಸತಿ, ಸಂಘರ್ಷ, ಒಲವಿನ ನಿಲ್ದಾಣ, ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಮುಂತಾದ ಸೀರಿಯಲ್‌ಗಳಲ್ಲಿ ಮಿಂಚಿದ ಚೆಲುವೆ ಐಶ್ವರ್ಯಾ ಬಸ್ಪುರೆ. ಮಾಯಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ 2015ರಲ್ಲಿ ‘ಮಿಸ್ ಕರ್ನಾಟಕ’ ಆಗಿದ್ದರು. ಇದೀಗ ಐಶ್ವರ್ಯಾ ಬಸ್ಪುರೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ರಾಕೇಶ್ ಎಂಬುವರನ್ನ ಐಶ್ವರ್ಯಾ ಬಸ್ಪುರೆ ವಿವಾಹವಾಗಿದ್ದಾರೆ. ಐಶ್ವರ್ಯಾ ಬಸ್ಪುರೆ - ರಾಕೇಶ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಈ ಜೋಡಿ ಬೆಂಗಳೂರಿನಲ್ಲಿ ಸಪ್ತಪದಿ ತುಳಿದಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು, ನಟ ಜೇತನ್, ನಟಿ ಸುಷ್ಮಾ ಶೇಖರ್, ಶಿಲ್ಪಾ ಶೈಲೇಶ್, ಸುನಿಲ್ ಪುರಾಣಿಕ್, ಐಶ್ವರ್ಯ ವಿನಯ್ ದಂಪತಿ, ಸ್ವಾತಿ ಸೇರಿದಂತೆ ಹಲವು ಕಿರುತೆರೆಯ ಕಲಾವಿದರು, ಆತ್ಮಿಯರು ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಕೋರಿದ್ದಾರೆ.
ನಟಿ ಐಶ್ವರ್ಯಾ ಅವರು ಮೂಲತಹ ಧಾರವಾಡದವರು. ಸುನೀಲ್ ಪುರಾಣಿಕ್ ಅವರ ನಿರ್ದೇಶನದ ಮಹಾಸತಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದ ಮೂಲಕ ನಟನೆ ಜರ್ನಿ ಶುರು ಮಾಡಿದರು. ನಂತರ ಶ್ರುತಿ ನಾಯ್ಡು ಅವರ ನಿರ್ಮಾಣದ ಯಾರೇ ನೀ ಮೋಹಿನಿ ಧಾರಾವಾಹಿ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತು. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಆರಾಧನಾ ರಘುರಾಮ್ ಜೊತೆಗೆ ಐಶ್ವರ್ಯಾ ಬಸ್ಪುರೆ ನಟಿಸಿದ್ದರು.
Mokshitha Pai: ಒಂದೇ ವೇದಿಕೆ ಮೇಲೆ ಜೊತೆಯಾಗಿ ಕಾಣಿಸಿಕೊಂಡ ಉಗ್ರಂ ಮಂಜು-ಮೋಕ್ಷಿತಾ ಪೈ