ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಾಮಾಜಿಕ ಕಳಕಳಿ ಸಾರುವ 'ವಿಸ್ಪರ್ಸ್ ಆಫ್ ದಿ ರಿವರ್' ಸಿನಿಮಾ ರಿಲೀಸ್‌ಗೆ ರೆಡಿ; ಇದು ನದಿಯ ಪಿಸುಮಾತುಗಳ ಕಥೆ

ʻವಿಸ್ಪರ್ಸ್ ಆಫ್ ದಿ ರಿವರ್ʼ (Whispers of the River) ಚಿತ್ರದಲ್ಲಿ ನದಿಗಳ ಸಂರಕ್ಷಣೆ ಮತ್ತು ಕೃಷಿ ಬದುಕಿನ ಮಹತ್ವವನ್ನು ಸಾರುವ ವಿಭಿನ್ನ ಹಾಗೂ ಭಾವನಾತ್ಮಕ ಕಥೆಯನ್ನು ಹೇಳಲಾಗುತ್ತಿದೆ. ಕೆಲಸ ಬಿಟ್ಟು ಹಳ್ಳಿಗೆ ಮರಳುವ ಯುವಕ ಮತ್ತು ಆತನ ತಂದೆಯ ನಡುವಿನ ಸಂಘರ್ಷದ ಜೊತೆಗೆ ಗ್ರಾಮೀಣ ಸೊಗಡು, ಯಕ್ಷಗಾನವನ್ನು ನಿರ್ದೇಶಕ ಕೆ. ಪ್ರಭಾಕರನ್ ಕಟ್ಟಿಕೊಟ್ಟಿದ್ದಾರಂತೆ.

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಲವ್, ಕ್ರೈಮ್, ಸಸ್ಪೆನ್ಸ್‌, ಹಾರರ್ ಹೀಗೆ ಅನೇಕ ಜಾನರ್‌ನ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಎಲ್ಲಾ ಸಿನಿಮಾಗಳ ಮಧ್ಯೆ ಇದೀಗ ವಿಭಿನ್ನ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ʻವಿಸ್ಪರ್ಸ್ ಆಫ್ ದಿ ರಿವರ್ʼ ಚಿತ್ರ ಸಿನಿಪ್ರಿಯರ ಗಮನಸೆಳೆಯುತ್ತಿದೆ. ನದಿಯ ಪಿಸುಮಾತುಗಳು ಎಂಬುದು ಈ ಶೀರ್ಷಿಕೆಯ ಅರ್ಥ. ನದಿಗಳ ಬಗ್ಗೆ ಈ ಸಿನಿಮಾವನ್ನು ಕೆ. ಪ್ರಭಾಕರನ್ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮಂಜುನಾಥ್ ಪೈ ಕಾಣಿಸಿಕೊಂಡಿದ್ದು, ನಟನೆ ಜೊತೆಗೆ ಚಿತ್ರಕಥೆಯನ್ನು ಕೂಡ ಅವರೇ ಬರೆದಿದ್ದಾರೆ. ಈ ಚಿತ್ರವನ್ನು ರಾಧಾಕೃಷ್ಣ ಪೈ, ವಿವೇಕ್ ವಿನ್ಸೆಂಟ್, ಶ್ರೀರಾಮ್ ಸಿ ಸೇರಿ ಮೀನಾಸ್‌ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಿಲಾಗಿದೆ. ರೈತರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವೃತ್ತಿಪರರು, ಸಿನಿಮಾ ತಂತ್ರಜ್ಞರು ಮತ್ತು ನಾಟಕ ಕಲಾವಿದರೆಲ್ಲರು ಒಟ್ಟಿಗೆ ಸೇರಿ ಈ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ.

Kantara: Chapter 1: ನೀವು ದೈವಗಳ ಅನುಕರಣೆ ಮಾಡೋದು ಸರೀನಾ?; ಕಾಂತಾರ-1 ಚಿತ್ರತಂಡದ ವಿರುದ್ಧ ನೆಟ್ಟಿಗರ ಆಕ್ರೋಶ

ನೋಡುಗರಿಂದ ಮೆಚ್ಚುಗೆ

"ನದಿಗಳೊಂದಿಗೆ ನಮ್ಮ ಸಂಬಂಧವನ್ನು ಮರುಪರಿಶೀಲಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ನದಿಗಳನ್ನು ಉಳಿಸುವ ಬಗ್ಗೆ ಭಾವನಾತ್ಮಕವಾಗಿ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿದ್ದ ಪ್ರಿಮಿಯರ್ ಶೋಗಳಲ್ಲಿ ಸಿನಿ ಗಣ್ಯರು ಹಾಗೂ ಪ್ರೇಕ್ಷಕರಿಂದ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ" ಎನ್ನುತ್ತದೆ ಚಿತ್ರತಂಡ.

Kantara Movie: ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ತಪ್ಪದ ಸಂಕಷ್ಟ: ದೈವ ನುಡಿದ ಮಾತು ನಿಜವಾಯ್ತಾ?

ಕೃಷಿ ಬಗ್ಗೆ ಆಪಾರ ಆಸಕ್ತಿ ಹೊಂದಿರುವ ಮಗ, ಅದನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸುವ ಕನಸನ್ನು ಹೊಂದಿರುತ್ತಾನೆ. ಅದಕ್ಕಾಗಿ ಕೆಲಸ ಬಿಟ್ಟು ಊರಿಗೆ ಮರಳುತ್ತಾನೆ. ಆದರೆ ತಂದೆ-ಮಗನ ನಡುವಿನ ವಿಭಿನ್ನ ದೃಷ್ಟಿಕೋನಗಳು ಸಂಘರ್ಷಕ್ಕೆ ಕಾರಣವಾಗುತ್ತವೆ. ಬಳಿಕ ಮಗ ಮಣ್ಣು, ನದಿ ಮತ್ತು ಮೂಲ ಮೌಲ್ಯಗಳೊಂದಿಗೆ ಬಾಂಧವ್ಯ ಬೆಳಸಿಕೊಳ್ಳುತ್ತಾನೆ. ಗ್ರಾಮೀಣ ಬದುಕು, ಕೃಷಿಕರ ದಿನನಿತ್ಯದ ಆಚರಣೆಗಳು, ಜನಪದ ಕಥೆ, ಯಕ್ಷಗಾನ ಮತ್ತು ಹಳ್ಳಿಯ ಸಮೂಹ ಜೀವನವನ್ನು ಈ ಸಿನಿಮಾ ಒಳಗೊಂಡಿದೆ ಎಂಬುದು ಚಿತ್ರತಂಡ ನೀಡುವ ಮಾಹಿತಿ.

ʻವಿಸ್ಪರ್ಸ್ ಆಫ್ ದಿ ರಿವರ್ʼ ಸಿನಿಮಾಗೆ ರೋಹಿತ್ ಪೂಜಾರಿ ಸಂಗೀತ ನೀಡಿದ್ದು, ಕೆ. ಸತ್ಯರಾಜ್ ಛಾಯಾಗ್ರಹಣ ಮಾಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶಬಾನಾ, ʻಕಾಂತಾರʼ ಖ್ಯಾತಿಯ ಪ್ರಭಾಕರ್ ಕುಂದರ್ ಹಾಗೂ ದಿವಂಗತ ಪ್ರಭಾಕರ್ ಕಲ್ಯಾಣಿ ನಟಿಸಿದ್ದಾರೆ. ಅಂದಹಾಗೆ, ʻವಿಸ್ಪರ್ಸ್ ಆಫ್ ದಿ ರಿವರ್ʼ ಸಿನಿಮಾವನ್ನು ಚಿತ್ರಮಂದಿರಗಳ ಬದಲು, ನೇರವಾಗಿ ಒಟಿಟಿಯಲ್ಲಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.