ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾಂಪತ್ಯ ಬದುಕಿಗೆ ಕಾಲಿಟ್ಟ ʻಶೇಕ್ ಇಟ್ ಪುಷ್ಪವತಿʼ ಖ್ಯಾತಿಯ ನಟಿ ನಿಮಿಕಾ ರತ್ನಾಕರ್;‌ ಹುಡುಗ ಯಾರು?

Nimika Ratnakar Wedding: 'ಕ್ರಾಂತಿ' ಸಿನಿಮಾದ 'ಶೇಕ್ ಇಟ್ ಪುಷ್ಪವತಿ' ಹಾಡಿನ ಮೂಲಕ ಮನೆಮಾತಾದ ನಟಿ ನಿಮಿಕಾ ರತ್ನಾಕರ್ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಏಪ್ರಿಲ್ 6ರಂದು ಮುಂಬೈ ಮೂಲದ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರು, ಮದುವೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2018ರಲ್ಲಿ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ನ ನಿಮಿಕಾ ರತ್ನಾಕರ್.‌ ರಾಮಧಾನ್ಯ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಿಮಿಕಾ, ಆನಂತರ ಹೆಚ್ಚು ಜನಪ್ರಿಯತೆ ಗಳಿಸಿದ್ದು ಕ್ರಾಂತಿ ಚಿತ್ರದ ʻಶೇಕ್‌ ಇಟ್‌ ಪುಷ್ಪವತಿʼ ಹಾಡಿನಿಂದ. ಸದ್ಯ ನಿಮಿಕಾ ರತ್ನಾಕರ್‌ ಬಗ್ಗೆ ಮಾತನಾಡಲು ಕಾರಣ, ಅವರೀಗ ಸಪ್ತಪದಿ ತುಳಿದಿದ್ದಾರೆ. ಅವರ ಮದುವೆಯು ಸದ್ದಿಲ್ಲದೇ ನಡೆದಿದೆ.

ಫೋಟೋ ಹಂಚಿಕೊಂಡ ನಿಮಕಾ

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿರುವ ನಿಮಿಕಾ, "ಮಲ್ಲಿಗೆಯ ಪರಿಮಳ, ನಾದಸ್ವರದ ಧ್ವನಿ, ಮತ್ತು ಸಾವಿರಾರು ಹರಕೆಗಳ ಹಾರೈಕೆ" ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ. ಅಂದಹಾಗೆ, ಇವರ ಮದುವೆಯು ಏಪ್ರಿಲ್‌ 6ರಂದು ನಡೆದಿದೆ. ಆದರೆ ಮದುವೆ ಆಗಿದ್ದು ಎಲ್ಲಿ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

Star Fashion Interview 2025: ಗುಲ್ಮಾರ್ಗ್‌ನಲ್ಲಿ ನಟಿ ನಿಮಿಕಾ ರತ್ನಾಕರ್ ಸೀರೆ ಲವ್

ವರ ಯಾರು?

ನಿಮಿಕಾ ರತ್ನಾಕರ್‌ ಮದುವೆ ಆಗಿರುವ ಹುಡುಗ ಯಾರು ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಇಲ್ಲಿದೆ ಉತ್ತರ. ನಿಮಿಕಾ ಅವರನ್ನು ಮದುವೆಯಾಗಿರುವ ಹುಡುಗ ಸಿನಿಮಾರಂಗದವರಲ್ಲ, ಉದ್ಯಮಿಯಾಗಿರುವ ಅವರು ಮುಂಬೈ ಮೂಲದವರು ಎಂಬುದು ಗೊತ್ತಾಗಿದೆ. ಆದರೆ ಅವರ ಹೆಸರು, ಇನ್ನಿತರ ಬಗ್ಗೆ ಮಾಹಿತಿಗಳನ್ನು ನಿಮಿಕಾ ಬಿಟ್ಟುಕೊಟ್ಟಿಲ್ಲ.

ʻವೈಲ್ಡ್ ಟೈಗರ್ ಸಫಾರಿʼಯಲ್ಲಿ ನಟಿಸುತ್ತಿರುವ ನಿಮಿಕಾ

ಸ್ಯಾಂಡಲ್‌ವುಡ್‌ನಲ್ಲಿ ರಾಮಧಾನ್ಯ, ಅಬ್ಬರ, ಮಿ. ಬ್ಯಾಚುಲರ್‌, ಫ್ಲರ್ಟ್‌ ಇನ್ನಿತರ ಸಿನಿಮಾಗಳಲ್ಲಿ ನಟಿಸಿರುವ ನಿಮಿಕಾ ರತ್ನಾಕರ್‌, ಸದ್ಯ ʻವೈಲ್ಡ್ ಟೈಗರ್ ಸಫಾರಿʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಫೀನಿಕ್ಸ್‌ ಎಂಬ ಸಿನಿಮಾದಲ್ಲೂ ನಿಮಿಕಾ ನಟಿಸುತ್ತಿದ್ದು, ದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಇದರಲ್ಲಿ ನಿಮಿಕಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಗೆರಿಲ್ಲಾ ವಾರ್‌ ಎಂಬ ಮತ್ತೊಂದು ಸಿನಿಮಾವನ್ನು ಕೂಡ ಇವರು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಸಿನಿಮಾರಂಗದಲ್ಲಿ ಬ್ಯುಸಿ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷ.

ನಟಿ ನಿಮಿಕಾ ರತ್ಕಾಕರ್‌ ಮದುವೆ ಫೋಟೋಗಳು



ಜನಪ್ರಿಯತೆ ತಂದುಕೊಟ್ಟ ಪುಷ್ಪವತಿ

ನಿಮಿಕಾ ರತ್ನಾಕರ್‌ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರೂ, ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ದರ್ಶನ್‌ ತೂಗುದೀಪ ಅವರ ಕ್ರಾಂತಿ ಸಿನಿಮಾದ ಶೇಕ್‌ ಇಟ್‌ ಪುಷ್ಪವತಿ ಹಾಡು. ಈ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದರಿಂದ ಅವರನ್ನು ಸ್ಯಾಂಡಲ್‌ವುಡ್‌ ಪುಷ್ಪವತಿ ಎಂದೇ ಅಭಿಮಾನಿಗಳು ಕರೆಯುತ್ತಾರೆ.