ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion Interview 2025: ಗುಲ್ಮಾರ್ಗ್‌ನಲ್ಲಿ ನಟಿ ನಿಮಿಕಾ ರತ್ನಾಕರ್ ಸೀರೆ ಲವ್

Star Fashion Interview 2025: ಬಾಲಿವುಡ್ ನಾಯಕಿಯರಂತೆ ಕಾಶ್ಮಿರದಲ್ಲಿ ಸ್ನೋ ಫಾಲ್ ಆಗುವ ಸ್ಥಳದಲ್ಲಿ ಸೀರೆಯುಟ್ಟು ಮನಮೋಹಕವಾಗಿ ಕಾಣಿಸಿಕೊಂಡಿರುವ ನಟಿ ನಿಮಿಕಾ ರತ್ನಾಕರ್ ಅವರು ತಮ್ಮ ಸೀರೆ ಲವ್ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಸಾರಾಂಶ ಇಲ್ಲಿದೆ ನಿಮಗಾಗಿ.

ಗುಲ್ಮಾರ್ಗ್‌ನಲ್ಲಿ ನಟಿ ನಿಮಿಕಾ ರತ್ನಾಕರ್ ಸೀರೆ ಲವ್

ಚಿತ್ರಗಳು: ನಿಮಿಕಾ ರತ್ನಾಕರ್, ಸ್ಯಾಂಡಲ್‌ವುಡ್ ನಟಿ

ಸಂದರ್ಶನ: ಶೀಲಾ ಸಿ. ಶೆಟ್ಟಿ

ನಟಿ ನಿಮಿಕಾ ರತ್ನಾಕರ್ ಕಾಶ್ಮಿರದಲ್ಲಿ ಸೀರೆಯುಟ್ಟು ಮನಮೋಹಕವಾಗಿ (Star Fashion Interview 2025) ಕಾಣಿಸಿಕೊಂಡಿದ್ದಾರೆ. ಹೌದು, ಡಿ ಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾದಲ್ಲಿ ʼಶೇಕ್ ಇಟ್ ಪುಷ್ಪವತಿʼ ಹಾಡಿಗೆ ಹೆಜ್ಜೆ ಹಾಕಿದ ನಂತರ ಜನ- ಮನ ಗೆದ್ದಿರುವ ನಿಮಿಕಾ ಈಗಾಗಲೇ ಸಾಕಷ್ಟು ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಸಾಕಷ್ಟು ಫ್ಯಾಷನ್ ಶೋಗಳಲ್ಲೂ ವಾಕ್ ಮಾಡಿದ್ದಾರೆ. ಸದ್ಯ, ಕೆಲಸದ ನಿಮಿತ್ತ ಮುಂಬೈ ಹಾಗೂ ಬೆಂಗಳೂರಿಗೆ ಓಡಾಡಿಕೊಂಡಿರುವ ಅವರು, ಕಾಶ್ಮಿರದ ಗುಲ್ಮಾರ್ಗ್‌ನಲ್ಲಿ ಸೀರೆಯುಟ್ಟು ಸಂಭ್ರಮಿಸಿದ್ದಾರೆ. ತಮ್ಮ ಸೀರೆ ಲವ್ ಬಗ್ಗೆ ಒಂದಿಷ್ಟು ವಿಷಯವನ್ನು ಹಂಚಿಕೊಂಡಿರುವ ನಿಮಿಕಾ, ವಿಶ್ವವಾಣಿ ನ್ಯೂಸ್ ಸಂದರ್ಶನದಲ್ಲಿ ಸೀರೆ ಬಗ್ಗೆ ಮಾತನಾಡಿದ್ದಾರೆ.

10

ವಿಶ್ವವಾಣಿ ನ್ಯೂಸ್ : ನಿಮ್ಮ ಸೀರೆ ಪ್ರೇಮದ ಬಗ್ಗೆ ಹೇಳಿ?

ನಿಮಿಕಾ: ನನಗೆ ಎಷ್ಟು ಸೀರೆ ಲವ್ ಎಷ್ಟು ಇತ್ತೆಂದರೆ, ಚಿಕ್ಕವಳಿದ್ದಾಗಲೇ ದುಪಟ್ಟಾವನ್ನು ಸೀರೆಯಂತೆ ಉಡುತ್ತಿದ್ದೆ. ಈಗಲೂ ಸೀರೆಯನ್ನು ಇಷ್ಟಪಟ್ಟು ಉಡುತ್ತೇನೆ. ನನಗೆ ಕಂಫರ್ಟಬಲ್ ಅಟೈರ್ ಎನ್ನಬಹುದು.

ವಿಶ್ವವಾಣಿ ನ್ಯೂಸ್ :ಯಾವ ಬಗೆಯ ಸೀರೆಗಳು ನಿಮಗಿಷ್ಟ? ಯಾಕೆ ?

ನಿಮಿಕಾ: ಶಿಫಾನ್ ಸೀರೆಗಳೆಂದರೇ ನನಗೆ ಇಷ್ಟ. ಯಾಕೆಂದರೆ ಅವನ್ನು ಉಡಲು ಹಾಗೂ ನಿರ್ವಹಣೆ ಮಾಡುವುದು ಸುಲಭ. ಶಿಫಾನ್ ಸಿರೆ ಕಂಫರ್ಟಬಲ್ ಫೀಲ್ ನೀಡುತ್ತದೆ.

11

ವಿಶ್ವವಾಣಿ ನ್ಯೂಸ್: ಗ್ರ್ಯಾಂಡ್ ಸಮಾರಂಭಗಳಿಗೆ ಯಾವ ಬಗೆಯ ಸೀರೆ ಪ್ರಿಫರ್ ಮಾಡುತ್ತೀರಾ?

ನಿಮಿಕಾ: ಆದಷ್ಟೂ ಕಾಂಚೀವರಂ ಸೀರೆಯನ್ನು ಗ್ರ್ಯಾಂಡ್ ಸಮಾರಂಭಗಳಿಗೆ ಧರಿಸುತ್ತೇನೆ. ಅವು ನೋಡಲು ಆಕರ್ಷಕವಾಗಿ ಬಿಂಬಿಸುತ್ತವೆ.

ವಿಶ್ವವಾಣಿ ನ್ಯೂಸ್: ಕಾಶ್ಮಿರದ ಸ್ಮೋ ಫಾಲ್ ಮಧ್ಯೆ ಸೀರೆಯುಟ್ಟು ಸಂಭ್ರಮಿಸಿದ್ದಿರಂತೆ!

ನಿಮಿಕಾ: ಹೌದು, ನನಗೆ ಮೊದಲಿನಿಂದಲೂ ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯರು ಸೀರೆಯುಟ್ಟು ಶೂಟ್ ಮಾಡುವುದನ್ನು ನೋಡಿದಾಗ, ನನಗೂ ಅದೇ ರೀತಿ ಆಸೆಯುಟ್ಟಿತ್ತು. ಕಾಶ್ಮಿರಕ್ಕೆ ಹೋದಾಗ ಆ ಚಳಿಯಲ್ಲಿ, ಬೂಟ್ಸ್ ಹಾಕಿಕೊಂಡೇ ಸೀರೆ ಉಟ್ಟು ಸಂಭ್ರಮಿಸಿದೆ. ಈ ಹಿಂದೆ, ಚಿಕ್ಕಮಗಳೂರಿನ ಚಳಿಯೇ ನನಗೆ ತಡೆಯಲಾಗಿರಲಿಲ್ಲ! ಕಾಶ್ಮಿರದಲ್ಲಿ ಸಾಧ್ಯವೇ ಎಂಬ ಅನುಮಾನವಿತ್ತು. ಆದರೆ, ನನ್ನ ಆತ್ಮವಿಶ್ವಾಸ ಈ ಪುಟ್ಟ ಆಸೆ ನೆರವೇರುವಂತೆ ಮಾಡಿತು.

ಈ ಸುದ್ದಿಯನ್ನೂ ಓದಿ | Beli Hoo Movie: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 2 ವಿಭಾಗಗಳಲ್ಲಿ ʼಬೇಲಿ ಹೂʼ ಚಿತ್ರ ಆಯ್ಕೆ

ವಿಶ್ವವಾಣಿ ನ್ಯೂಸ್: ಸೀರೆ ಪ್ರಿಯರಿಗೆ ನೀವು ನೀಡುವ ಟಿಪ್ಸ್ ?

ನಿಮಿಕಾ: ನಿಮ್ಮ ಪರ್ಸನಾಲಿಟಿಗೆ ಮ್ಯಾಚ್ ಆಗುವಂತಹ ಫ್ಯಾಬ್ರಿಕ್‌ನ ಸೀರೆ ಆರಿಸಿ. ಕಂಫರ್ಟಬಲ್ ಸೀರೆಗೆ ಆದ್ಯತೆ ನೀಡಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)