ಬಹು ಭಾಷಾ ತಾರೆ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರು ಗುಡ್ ನ್ಯೂಸ್ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ. ವಿವಾಹವಾದ ಕೇವಲ ನಾಲ್ಕು ತಿಂಗಳಲ್ಲೇ ಈ ತಾರಾ ಜೋಡಿ ಮೊದಲ ಮಗುವಿನ (Baby) ನಿರೀಕ್ಷೆಯಲ್ಲಿದ್ದು, ತಾವು ತಾಯಿಯಾಗುತ್ತಿರುವ (Mother) ವಿಚಾರವನ್ನು ನಟಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಂತ ಮುದ್ದಾದ ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ಈ ಶುಭ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದಾರೆ. ಈ ಫೋಟೋದಲ್ಲಿ ಶರ್ಮಿಳಾ ಮತ್ತು ಪತಿ ಸುಧನ್ ಸುಂದರಂ ಪರಸ್ಪರ ಕೈಹಿಡಿದುಕೊಂಡಿದ್ದು, ತಮ್ಮ ಬೆರಳುಗಳಲ್ಲಿ ಪುಟ್ಟ ಮಗುವಿನ ಬಿಳಿ ಬಣ್ಣದ ಬೂಟುಗಳನ್ನು ಹಿಡಿದಿರುವುದು ಕಂಡುಬಂದಿದೆ.
ನಟಿ ಶರ್ಮಿಳಾ ಮಾಂಡ್ರೆ ಅವರು ಕೂಡ ಚಲನಚಿತ್ರ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ‘ಸಜನಿ’ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಟಿ ಶರ್ಮಿಳಾ ಮಾಂಡ್ರೆ ಅವರು ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನ ಅವರ ಸೋದರತ್ತೆ ಸುನಂದಾ ಮುರಳಿ ಮನೋಹರ್ ಅವರು ನಿರ್ಮಾಣ ಮಾಡಿದ್ದರು.
ಇದನ್ನೂ ಓದಿ: Bigg Boss Kannada 13: ಹೇಳಿದ್ದೇನು? ಮಾಡಿದ್ದೇನು?ಮಂಜುಗೆ ಕಿಚ್ಚನ ಖಡಕ್ ಕ್ಲಾಸ್
ತಮಿಳು ಚಿತ್ರ ಇವನುಕ್ಕು ಎಂಗೆಯೊ ಮಚ್ಚಂ ಇರುಕ್ಕು (೨೦೧೮) ಮೂಲಕ ನಿರ್ಮಾಪಕರಾದರು. ‘ಈ ಬಂಧನ’, ‘ನವಗ್ರಹ’, ‘ಮಸ್ತ್ ಮಜಾ ಮಾಡಿ’, ‘ಕರಿ ಚಿರತೆ’, ‘ವೆಂಕಟ ಇನ್ ಸಂಕಟ’, ‘ಸ್ವಯಂವರ’, ‘ಆಕೆ’, ‘ಗಾಳಿಪಟ-2’, ‘ಕೃಷ್ಣ’, ‘ಪೌಡರ್’, ‘ಮಿರತ್ತಲ್’(ತಮಿಳು), ‘ಕೆವ್ವುಕೇಕ’(ತೆಲುಗು) ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Bigg Boss kannada 13: ಎರಡನೇ ಬಾರಿಗೆ ಕ್ಯಾಪ್ಟನ್ ಆದ ಜಗ್ಗ ಮಮ್ಮಿ! ಬಿಕ್ಕಿ ಬಿಕ್ಕಿ ಅತ್ತ ಧನುಷ್
ದಕ್ಷಿಣ ಭಾರತದ ಸಂಪ್ರದಾಯ ಮತ್ತು ರಾಜಸ್ಥಾನಿ ಪರಂಪರೆಯ ಸುಂದರ ಸಮ್ಮಿಲನದಂತೆ ಈ ಜೋಡಿಯ ವಿವಾಹ ಮಹೋತ್ಸವ ಜರುಗಿತ್ತು. ಕುಟುಂಬಸ್ಥರು, ಆಪ್ತ ಸ್ನೇಹಿತರು ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಸಿನಿಮಾ ತಾರೆಯರಾದ ನಟಿ ರಮ್ಯಾ ಹಾಗೂ ಧನ್ಯಾ ರಾಮ್ಕುಮಾರ್ ಸೇರಿದಂತೆ ಹಲವು ಗಣ್ಯರು ಈ ವಿವಾಹಕ್ಕೆ ಸಾಕ್ಷಿಯಾಗಿದ್ದರು.