ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shiva Rajkumar: ಶೂಟಿಂಗ್ ಸೆಟ್‌ನಲ್ಲಿ ಫ್ಯಾನ್ಸ್ ಮೇಲೆ ಗರಂ ಆದ ಶಿವಣ್ಣ- ವಿಡಿಯೊ ವೈರಲ್

Shiva Rajkumar: ಹ್ಯಾಟ್ರಿಕ್ ಹೀರೋ ಎಂಬ ಬಿರುದಿನಿಂದ ಕರೆಸಿಕೊಳ್ಳುವ ನಟ ಶಿವರಾಜ್ ಕುಮಾರ್ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ರ ಶುವಣ್ಣ ಬ್ಯಾಕ್ ಟು ಬ್ಯಾಕ್ ಸಾಕಷ್ಟು ಹಿಟ್ ಚಿತ್ರ ಕೊಟ್ಟು ಅಭಿಮಾನಿಗಳನ್ನು ಮನರಂಜಿಸಿದ್ದಾರೆ. ಈಗಲೂ ಶಿವರಾಜ್ ಕುಮಾರ್ ನಟನೆ, ಡ್ಯಾನ್ಸ್ ಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಇನ್ನೂ ಶಿವಣ್ಣ ನನ್ನು ಕಂಡಾಗ ಅಭಿಮಾನಿಗಳು ಮುಗಿ ಬೀಳುವುದೇ ಹೆಚ್ಚು. ಆದರೆ‌ ಈ ಭಾರಿ ಸಿನಿಮಾ ಸೆಟ್‌ನಲ್ಲಿ ಫ್ಯಾನ್ಸ್ ಅತಿರೇಕದ ವರ್ತನೆಗೆ ಶಿವಣ್ಣ ಗರಂ ಆಗಿದ್ದಾರೆ.‌

ಅಭಿಮಾನಿಗಳ ಜೊತೆ ಕೋಪಗೊಂಡ ಶಿವಣ್ಣ

ಶಿವರಾಜ್ ಕುಮಾರ್ -

Profile Pushpa Kumari Sep 7, 2025 4:48 PM

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಂಡಿರುವ ಶಿವರಾಜ್ ಕುಮಾರ್ (Shiva Rajkumar) ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಶಿವಣ್ಣ ಹೆಚ್ಚು ಆತ್ಮೀಯರಾಗುತ್ತಾರೆ. 60 ವರ್ಷ ದಾಟಿದರೂ ಈಗಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರುವ ಶಿವರಾಜ್‌ ಕುಮಾರ್ ಈಗಿನ ಯುವ ನಟರಿಗೆ ಮಾದರಿಯಾಗಿದ್ದಾರೆ. ಸದ್ಯ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದ ಬಳಿಕ ವಿಶ್ರಾಂತಿ ಪಡೆದು ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗಷ್ಟೆ ಸಿನಿಮಾ ಸೆಟ್‌ನಲ್ಲಿ ಅಭಿಮಾನಿಗಳ ವರ್ತನೆಗೆ ಗರಂ ಆಗಿದ್ದಾರೆ. ಎಲ್ಲ ಸಂದರ್ಭದಲ್ಲೂ ಅಭಿಮಾನಿಗಳ ಜೊತೆ ಬಹಳಷ್ಟು ತಾಳ್ಮೆಯಿಂದ ಮಾತನಾಡಿಸುತ್ತಿದ್ದ ಶಿವಣ್ಣ ಈ ಭಾರಿ ಶೂಟಿಂಗ್ ಸೆಟ್‌ನಲ್ಲಿ ಫ್ಯಾನ್ಸ್ ಮೇಲೆ ಕೆಂಡಾಮಂಡಲವಾಗಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದೆ.

ಹ್ಯಾಟ್ರಿಕ್ ಹೀರೋ ಎಂಬ ಬಿರುದಿನಿಂದ ಕರೆಸಿಕೊಳ್ಳುವ ನಟ ಶಿವರಾಜ್​ ಕುಮಾರ್ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶಿವಣ್ಣ ಬ್ಯಾಕ್​ ಟು ಬ್ಯಾಕ್ ಸಾಕಷ್ಟು ಹಿಟ್ ಚಿತ್ರ ಕೊಟ್ಟು ಅಭಿಮಾನಿಗಳನ್ನು ಮನರಂಜಿಸಿದ್ದಾರೆ. ಈಗಲೂ ಶಿವರಾಜ್​ ಕುಮಾರ್ ನಟನೆ, ಡ್ಯಾನ್ಸ್​​ ಗೆ ಫ್ಯಾನ್ಸ್​ ಕೂಡ ಫಿದಾ ಆಗಿದ್ದಾರೆ. ಇನ್ನೂ ಶಿವಣ್ಣನನ್ನು ಕಂಡಾಗ ಅಭಿಮಾನಿಗಳು ಮುಗಿ ಬೀಳುವುದೇ ಹೆಚ್ಚು. ಆದರೆ‌ ಈ ಭಾರಿ ಸಿನಿಮಾ ಸೆಟ್‌ನಲ್ಲಿ ಫ್ಯಾನ್ಸ್​ ಅತಿರೇಕದ ವರ್ತನೆಗೆ ಶಿವಣ್ಣ ಗರಂ ಆಗಿದ್ದಾರೆ.‌

ಶಿವಣ್ಣ ಕಾರು ಇಳಿದು ಬರುತ್ತಿದ್ದಂತೆ ಅಭಿಮಾನಿಗಳು ಫೋಟೊಗಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಶಿವಣ್ಣ ಬ್ಯುಸಿ ಇದ್ದರೂ ಪ್ರೀತಿಯಿಂದಲೇ ಗದರುತ್ತಾ ಕಾರು ಇಳಿದು ಬಳಿಕ ಫೋಟೊಗೆ ಪೋಸ್ ಕೊಟ್ಟು ಬಂದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗು ತ್ತಿದೆ. ಕೆಲವರು ಶಿವಣ್ಣ ಈ ದೃಶ್ಯ ಟ್ರೋಲ್ ಮಾಡಿದ್ರೂ ಕೆಲವು ಫ್ಯಾನ್ಸ್​ ಶಿವಣ್ಣನನ್ನು ಬೆಂಬಲಿಸಿ ದ್ದಾರೆ.ಸದ್ಯ ಶಿವಣ್ಷ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ಜೊತೆ 'ಉತ್ತರಕಾಂಡ', 'ಜೈಲರ್-2', '666 ಆಪರೇಷನ್ ಡ್ರೀಮ್ ಥಿಯೇಟರ್', ಇತ್ಯಾದಿ ಸಿನಿಮಾಗಳಲ್ಲಿ ಕೂಡ ಶಿವಣ್ಣ ನಟಿಸುತ್ತಿದ್ದಾರೆ.

ಇದನ್ನು ಓದಿ:Karavali Movie: ಪ್ರಜ್ವಲ್ ದೇವರಾಜ್‌ ಅಭಿನಯದ 'ಕರಾವಳಿ' ಸದ್ಯದಲ್ಲೇ ತೆರೆಗೆ

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವಣ್ಣ ‘ಡ್ಯಾಡ್’ (Dad) ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿದೆ. ' ಡ್ಯಾಡ್’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯ ಕೂಡ ಆಗಿದ್ದು ಈ ಸಿನಿಮಾದಲ್ಲಿ ಶಿವರಾಜ್‍ ಕುಮಾರ್, ಶರ್ಮಿಳಾ ಮಾಂಡ್ರೆ ಜೊತೆಗೆ ಬೇಬಿ ನಕ್ಷತ್ರ, ಬಾಬು, ಸೂರಜ್‍ ವೆಂಜರಮೂಡು ಮುಂತಾದವರು ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.