ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shiva Rajkumar: ಶಿವಣ್ಣ ಕ್ಯಾನ್ಸರ್‌ ಗೆದ್ದು ಇಂದಿಗೆ ಒಂದು ವರ್ಷ; ಸಿನಿಮಾ ರಿಲೀಸ್‌ಗೂ ಮುನ್ನ ಶಿವರಾಜ್‌ಕುಮಾರ್‌, ಗೀತಾ ಭಾವುಕ ಪೋಸ್ಟ್‌

Shivanna Geeta: ಡಿಸೆಂಬರ್ 24ರಂದು ಶಿವರಾಜ್‌ಕುಮಾರ್ ಕ್ಯಾನ್ಸರ್‌ನಿಂದ ಮುಕ್ತಿ ಪಡೆದಿದ್ದರು. ಇಂದಿಗೆ ಒಂದು ವರ್ಷ. ಆ ಸವಾಲಿನ ದಿನವನ್ನು ಶಿವರಾಜ್‌ಕುಮಾರ್ ನೆನೆದು ಭಾವುಕರಾಗಿದ್ದಾರೆ. 2024ರಂದು ಶಿವರಾಜ್‌ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆ ಒಂದು ವರ್ಷದ ಸವಾಲಿನ ದಿನಗಳ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ.

ನಟ ಶಿವರಾಜ್‌ಕುಮಾರ್‌

ಡಿಸೆಂಬರ್ 24ರಂದು ಶಿವರಾಜ್‌ಕುಮಾರ್ (Shiva Rajkumar) ಕ್ಯಾನ್ಸರ್‌ನಿಂದ (Cancer) ಮುಕ್ತಿ ಪಡೆದಿದ್ದರು. ಇಂದಿಗೆ ಒಂದು ವರ್ಷ. ಆ ಸವಾಲಿನ ದಿನವನ್ನು ಶಿವರಾಜ್‌ಕುಮಾರ್ ನೆನೆದು ಭಾವುಕರಾಗಿದ್ದಾರೆ. 2024ರಂದು ಶಿವರಾಜ್‌ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಕ್ಯಾನ್ಸರ್ (Cancer) ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆ ಒಂದು ವರ್ಷದ ಸವಾಲಿನ ದಿನಗಳ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ. ಗೀತಾ ಶಿವರಾಜ್‌ಕುಮಾರ್‌ (Geeta Shivarajkumar) ಕೂಡ ಪೋಸ್ಟ್‌ ಶೇರ್‌ ಮಾಡಿದ್ದಾರೆ.

ಶಿವಣ್ಣ ಪೋಸ್ಟ್‌

"ನನ್ನ ಜೀವನದ ಬಹು ದೊಡ್ಡ ಸವಾಲಿಗೆ ಇಂದು ಒಂದು ವರ್ಷ. ನಾನು ಮತ್ತೆ ಅದೇ ಚೇತನದಿಂದ ಮುನ್ನಡೆಯಲು ಸಾಧ್ಯವಾದದು ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ. ಡಾ.ಮನೋಹರನ್ ಮುರುಗೇಶನ್ ಮತ್ತು ತಂಡ, ಡಾ.ದಿಲೀಪ್, ಡಾ.ಶಶಿಧರ್, ಡಾ.ವಿ.ಕೆ ಶ್ರೀನಿವಾಸ್, ಡಾ. ಯೋಗಿತಾ ಮತ್ತು ಡಾ.ಅನಿತಾ ಧರ್ಮಲಿಂಗಂ ಅವರಿಗೆ ಅನಂತಾನಂತ ವಂದನೆಗಳು. ನಿಮ್ಮ ಪ್ರೀತಿಗೆ ಸದಾ ಚಿರಋಣಿ. ನಿಮ್ಮ ಶಿವಣ್ಣ." ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shivarajkumar: 40 ವರ್ಷದ ಸಂಭ್ರಮ: ಕಲರ್ಸ್​​ನ ದಶಕದ ಮಹೋತ್ಸವದಲ್ಲಿ ಶಿವಣ್ಣ-ಗೀತಕ್ಕ

ಗೀತಾ ಶಿವರಾಜ್‌ಕುಮಾರ್‌ ಪೋಸ್ಟ್‌ನಲ್ಲಿ, ಇಂದಿಗೆ ಶಿವ್ ಗುಣಮುಖರಾಗಿ ಒಂದು ವರ್ಷ ಕಳೆದ ವರ್ಷ ವಿಷಯ ತಿಳಿದು ಅವರು ಗುಣಮುಖರಾಗಲು ಮೊರೆಹೋಗದ ದೇವರಿಲ್ಲ, ಆ ದೇವರೇ ಮನೋಹರನ್ ಮುರುಗೇಶನ್ ಎಂಬ ದೇವರನ್ನು ನಮ್ಮ ಜೊತೆಗೂಡುವಂತೆ ಆಶೀರ್ವದಿಸಿದ್ದಾರೆ. ಅವರಿಗೆ ನಾನು ಚಿರಋಣಿ. ನಿಮ್ಮೆಲ್ಲರ ಪ್ರೀತಿ, ಅಪ್ಪಾಜಿ ಅಮ್ಮನ ಆಶೀರ್ವಾದದಿಂದ ಅವರು ಸದಾ ಕಾಲ ಆರೋಗ್ಯವಾಗಿರುತ್ತಾರೆ ಅನ್ನೋದು ನನ್ನ ನಂಬಿಕೆ.ನಿಮ್ಮೆಲ್ಲರ ಪ್ರೀತಿಯೇ ಅವರ ಶ್ರೀರಕ್ಷೆ.ಧನ್ಯವಾದಗಳು ಗೀತಾ ಶಿವರಾಜಕುಮಾರ್ ಎಂದು ಬರೆದುಕೊಂಡಿದ್ದಾರೆ.



'45' ಸಿನಿಮಾ

ಶಿವರಾಜ್‌ಕುಮಾರ್ ಅಭಿನಯದ '45' ಸಿನಿಮಾ ರಿಲೀಸ್ ಆಗುತ್ತಿದೆ. ಶಿವರಾಜ್‌ಕುಮಾರ್ ಶಸ್ತ್ರ ಚಿಕಿತ್ಸೆ ಒಳಗಾದ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾವಿದು. ಇತ್ತೀಚೆಗಷ್ಟೇ ನಮ್ಮ ಚಿತ್ರದ ಟ್ರೈಲರ್ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಕಡೆಗಳಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.



45 ಚಿತ್ರ ಶಿವಣ್ಣನಿಂದಲೇ ಆಗಿದೆ. ಅರ್ಜುನ್ ಜನ್ಯ ಇದಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಸತತ ಮೂರು ವರ್ಷ ಕೆಲಸ ಮಾಡಿದ್ದಾರೆ. ಅತಿ ದೊಡ್ಡ ಚಿತ್ರದ ಕನಸು ಕಂಡಿದ್ದಾರೆ. ಅದನ್ನ ಹೀಗೆ ಮಾಡುತ್ತೇನೆ ಅಂತೂ ತೋರಿಸಿದ್ದಾರೆ.

ಇದನ್ನೂ ಓದಿ: Shivanna-Daali Movie: ಮತ್ತೆ ಅಬ್ಬರಿಸೋಕೆ ರೆಡಿ ಆಗ್ತಿದೆ ʼಟಗರುʼ ಜೋಡಿ; ಈ ಬಾರಿ ಶಿವಣ್ಣ-ಡಾಲಿ ಕಾಂಬಿನೇಶನ್‌ ಹವಾ ಹೇಗಿರುತ್ತೆ?

ಅರ್ಜುನ್ ಜನ್ಯ ಅವರ ಶ್ರಮವೂ ಇಲ್ಲಿ ದೊಡ್ಡದೆ ಇದೆ.ಇವರು ಈ ಚಿತ್ರದಲ್ಲಿ ಏನೆಲ್ಲ ಮಾಡಿದ್ದಾರೆ. ಇದು ಚಿತ್ರ ರಿಲೀಸ್ ಆದ್ಮೇಲೆ ಗೊತ್ತಾಗುತ್ತದೆ. ಆ ರೀತಿಯ ಸಿನಿಮಾ ಇದಾಗಿದೆ.

Yashaswi Devadiga

View all posts by this author