Star Fashion 2025: ನಟ ಡಾ. ಶಿವರಾಜ್‌ಕುಮಾರ್ ಮಾಸ್ ಸ್ಟೈಲ್‌ಗೆ ಫ್ಯಾಷನ್ ದಿಗ್ಗಜರ ಫುಲ್ ಮಾರ್ಕ್ಸ್!
Star Fashion 2025: ಇಂದಿಗೂ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರ ಪ್ರತಿ ಚಿತ್ರದಲ್ಲಿನ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಅಭಿಮಾನಿಗಳನ್ನು ಸೆಳೆಯುತ್ತಲೇ ಇದೆ. ಈ ಕುರಿತಂತೆ ಫ್ಯಾಷನ್ ಎಕ್ಸ್‌ಪರ್ಟ್ಸ್ ಏನು ಹೇಳುತ್ತಾರೆ? ಇಲ್ಲಿದೆ ಸಂಕ್ಷಿಪ್ತ ವಿವರ.

ಚಿತ್ರಕೃಪೆ: ಡಾ. ಶಿವರಾಜ್‌ಕುಮಾರ್ ಆಫಿಷಿಯಲ್ ಪೇಜ್ (ಶಿವರಾಜ್ ಕುಮಾರ್ ಫೋಟೋಗಳನ್ನು ಅವರ ಪೇಜ್‌ನಿಂದ ಸೇವ್ ಮಾಡಲಾಗಿದೆ)

ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ (Dr Shivarajkumar) ಅವರ ಪ್ರತಿ ಚಿತ್ರದಲ್ಲಿನ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಇಂದಿಗೂ ಕನ್ನಡ ಚಿತ್ರಗಳ ಅಭಿಮಾನಿಗಳನ್ನು ಸೆಳೆಯುತ್ತಲೇ ಇದೆ. ಅಲ್ಲದೇ, ಅವರ ಸಿನಿಮಾಗಳಲ್ಲಿನ ಮಾಸ್ ಫ್ಯಾಷನ್, ಲೋಕಲ್ ಫ್ಯಾಷನ್ ಹಾಗೂ ಸ್ಟೈಲಿಶ್ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಈಗಾಗಲೇ ಸಾಕಷ್ಟು ಬಾರಿ ಹಂಗಾಮವನ್ನೇ ಸೃಷ್ಟಿಸಿದೆ. ಶಿವರಾಜ್‌ಕುಮಾರ್ ಅವರ ಒಟ್ಟಾರೆ ಫ್ಯಾಷನ್ ಬಗ್ಗೆ ಈ ಕ್ಷೇತ್ರದ ಎಕ್ಸ್‌ಪರ್ಟ್ಸ್‌ಗಳು ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ಅವರೆಲ್ಲರೂ ಏನು ಹೇಳಿದ್ದಾರೆ? ಇಲ್ಲಿದೆ ಸಂಕ್ಷಿಪ್ತ ವಿವರ.

ಸಿನಿಮಾ ಮೂಲಕ ಟ್ರೆಂಡ್ ಸೆಟ್: ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ
ಕರ್ನಾಟಕ ಫ್ಯಾಷನ್ ಕ್ಷೇತ್ರದ ಫ್ಯಾಷನ್ ಗುರು ಎಂದೇ ಖ್ಯಾತಿ ಗಳಿಸಿರುವ ಪ್ರಸಾದ್ ಬಿದ್ದಪ್ಪ ಅವರು ಹೇಳುವಂತೆ, ನಟ ಶಿವರಾಜ್ ಕುಮಾರ್ ನಟಿಸಿದ ಒಂದೊಂದು ಸಿನಿಮಾಗಳಲ್ಲೂ ಆಯಾ ಪಾತ್ರಕ್ಕೆ ತಕ್ಕಂತೆ ಫ್ಯಾಷೆನಬಲ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಅದು ಕಾಲೇಜು ಹುಡುಗನ ಪಾತ್ರವಾಗಬಹುದು, ಇಲ್ಲವೇ, ರೈತ, ಪೊಲೀಸ್ ಆಫೀಸರ್, ಫ್ಯಾಮಿಲಿ ಮ್ಯಾನ್, ಗ್ಯಾಂಗ್‌ಸ್ಟರ್ ಹೀಗೆ ಎಲ್ಲಾ ಬಗೆಯ ಪಾತ್ರಗಳಲ್ಲೂ ತಮ್ಮದೇ ಆದ ಫ್ಯಾಷನ್ ಟ್ರೆಂಡ್ ಸೆಟ್ ಮಾಡಿದ್ದಾರೆ. ಅವರ ಒಂದೊಂದು ಇಮೇಜ್‌ಗಳನ್ನು ಅಭಿಮಾನಿಗಳು ಫಾಲೋ ಮಾಡಿದ್ದಾರೆ. ಹಾಗಾಗಿ ಕನ್ನಡ ಚಿತ್ರರಂಗದ ಫ್ಯಾಷನೆಬಲ್ ನಟ ಎಂದೇ ಹೇಳುವೆ ಎನ್ನುತ್ತಾರೆ ಪ್ರಸಾದ್ ಬಿದ್ದಪ್ಪ.

ಜಾಕೆಟ್ ಟ್ರೆಂಡ್ ಸೆಟ್ ಮಾಡಿದ್ದ ಶಿವರಾಜ್‌ಕುಮಾರ್: ರಾಜೇಶ್ ಶೆಟ್ಟಿ
ಕನ್ನಡ ಸಿನಿಮಾಗಳ ಮೂಲಕ ಜಾಕೆಟ್ ಟ್ರೆಂಡ್ ಸೆಟ್ ಮಾಡಿದವರಲ್ಲಿ ನಟ ಶಿವರಾಜ್ ಕುಮಾರ್ ಅವರು ಮೊದಲಿಗರು. ಅವರು ಟೀ ಶರ್ಟ್ ಪ್ರೇಮಿ ಕೂಡ. ಅವಾರ್ಡ್ ಸಮಾರಂಭವೊಂದರಲ್ಲಿ, ಡ್ಯಾನ್ಸ್ ಪರ್ಫಮಾನ್ಸ್ ಸ್ಟೈಲಿಂಗ್ ಸಂದರ್ಭಗಳಲ್ಲಿ ಅವರೊಂದಿಗೆ ವರ್ಕ್ ಮಾಡಿದ್ದು ನನಗೆ ಅವಿಸ್ಮರಣೀಯ ಎನ್ನುತ್ತಾರೆ ಫ್ಯಾಷನ್ ಡಿಸೈನರ್, ಸ್ಟೈಲಿಸ್ಟ್, ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ.
ಇನ್ನು, ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಅವರ ಡ್ರೆಸ್‌ಕೋಡ್ ಅವರ ಫ್ಯಾಷನ್ ಸೆನ್ಸ್ ತೋರ್ಪಡಿಸುತ್ತದೆ. ಹಾಗಾಗಿ ಸ್ಯಾಂಡಲ್‌ವುಡ್‌ನ ಹಿರಿಯ ಸ್ಟೈಲಿಶ್ ನಟ ಎನ್ನುತ್ತಾರೆ ರಾಜೇಶ್ ಶೆಟ್ಟಿ.

ಅಭಿಮಾನಿಗಳ ಟ್ರೆಂಡ್ ಸೆಟ್ಟರ್: ಸಂತೋಷ್ ರೆಡ್ಡಿ
ಶಿವರಾಜ್‌ಕುಮಾರ್ ಅವರಿಗೆ ಮೊದಲಿನಿಂದಲೂ ತಮ್ಮದೇ ಆದ ಫ್ಯಾನ್ ಬೇಸ್ ಇದೆ. ವಯಸ್ಸು 63 ಆದರೂ ಕೂಡ, ಅವರ ಸಿನಿಮಾಗಳಲ್ಲಿ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಅನ್ನು ಕ್ಯಾರಿ ಮಾಡುವ ರೀತಿ ನಿಜಕ್ಕೂ ಅವರಿಂದ ನೋಡಿ ನಾವು ಕಲಿಯಬೇಕು. ಅವರ ಡ್ರೆಸ್ಸಿಂಗ್ ಸೆನ್ಸ್‌ನಿಂದಾಗಿ ಇಂದಿಗೂ ಅವರು ಯುವಕನಂತೆಯೇ ಕಾಣಿಸುತ್ತಾರೆ ಎನ್ನುತ್ತಾರೆ ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ.
ಅಂದು ಜೋಗಿ ಸಿನಿಮಾದಲ್ಲಿನ ಅವರ ರೌಡಿ ಪಾತ್ರದ ಕರ್ಲಿ ಲಾಂಗ್ ಹೇರ್ ಸ್ಟೈಲ್ ನನಗೆ ಮಾತ್ರವಲ್ಲ, ಕರ್ನಾಟಕದಾದ್ಯಂತ ಅಭಿಮಾನಿಗಳಲ್ಲಿ ಕ್ರೇಝ್ ಹುಟ್ಟಿಸಿತ್ತು ಎನ್ನುತ್ತಾರೆ ಸಂತೋಷ್ ರೆಡ್ಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Shivarajkumar: ಮರ್ಡರ್ ಮಿಸ್ಟ್ರಿ ಜಾನರ್‌ನ ಚಿತ್ರದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಶಿವರಾಜ್‌ಕುಮಾರ್