ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

666 Operation Dream Theatre: ʼ666 ಆಪರೇಷನ್ ಡ್ರೀಮ್ ಥಿಯೇಟರ್‌ʼ ಚಿತ್ರದ ಶಿವಣ್ಣ ಫಸ್ಟ್‌ ಲುಕ್‌ ರಿಲೀಸ್‌

Shivarajkumar: ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ, ಹೇಮಂತ್‌ ರಾವ್‌ ನಿರ್ದೇಶನದ ʼ666 ಆಪರೇಷನ್ ಡ್ರೀಮ್ ಥಿಯೇಟರ್‌ʼ ಚಿತ್ರದಲ್ಲಿ ಶಿವ ರಾಜ್‌ಕುಮಾರ್‌ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದ್ದು, ಅವರ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

ʼ666 ಆಪರೇಷನ್ ಡ್ರೀಮ್ ಥಿಯೇಟರ್‌ʼ ಚಿತ್ರದ ಶಿವಣ್ಣ ಫಸ್ಟ್‌ ಲುಕ್‌ ರಿಲೀಸ್‌

Profile Ramesh B Jul 9, 2025 11:07 PM

ಬೆಂಗಳೂರು: ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್‌ ಎ ಮತ್ತು ಸೈಡ್‌ ಬಿ ಚಿತ್ರಗಳ ಯಶಸ್ಸಿನ ಬಳಿಕ ಹೇಮಂತ್‌ ರಾವ್‌ (Hemanth M Rao) ಕೈಗೆತ್ತಿಕೊಂಡಿರುವ ʼ666 ಆಪರೇಷನ್ ಡ್ರೀಮ್ ಥಿಯೇಟರ್‌ʼ (666 Operation Dream Theatre) ಚಿತ್ರ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಕೆರಳಿಸಿದೆ. ಇತ್ತೀಚೆಗೆ ಧನಂಜಯ್ (Dhananjaya) ಅವರ ಎರಡು ಲುಕ್‌ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರತಂಡವೀಗ ಶಿವ ರಾಜ್‌ಕುಮಾರ್‌ (Shivarajkumar) ಅವರ ಫಸ್ಟ್‌ ಲುಕ್‌ ಅನಾವರಣಗೊಳಿಸಿದೆ.

ʼ666 ಆಪರೇಷನ್ ಡ್ರೀಮ್ ಥಿಯೇಟರ್‌ʼನಲ್ಲಿ ಶಿವಣ್ಣ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್‌ ಧರಿಸಿ, ಕೈಯಲ್ಲಿ ವಿಂಟೇಜ್ ರಿವಾಲ್ವರ್‌ ಹಿಡಿದು ಹಿಡಿದು ತೀಕ್ಷ್ಣ ನೋಟದೊಂದಿಗೆ ಹೆಜ್ಜೆ ಹಾಕುತ್ತಾ ಸ್ಟೈಲಿಶ್ ಆಗಿ ಕಂಡು ಬಂದಿದ್ದಾರೆ. ಅವರ ಪಾತ್ರದ ಝಲಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಶಿವಣ್ಣ ಪ್ರತಿ ಸಿನಿಮಾದಲ್ಲಿಯೂ, ಪ್ರತಿ ಪಾತ್ರದಲ್ಲಿಯೂ ಹೊಸತನ ನೀಡುತ್ತಾರೆ. ಆ ಸಾಲಿಗೆ ʼ666 ಆಪರೇಷನ್ ಡ್ರೀಮ್ ಥಿಯೇಟರ್‌ʼ ಕೂಡ ಸೇರ್ಪಡೆಯಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ. ಇದು ರೆಟ್ರೋ ಕಥೆಯನ್ನು ಒಳಗೊಂಡಿದೆ.

ಈ ಸುದ್ದಿಯನ್ನೂ ಓದಿ: 666 Operation Dream Theatre: ರೆಟ್ರೋ ಲುಕ್‌ನಲ್ಲಿ ಧನಂಜಯ್; ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದ ಫಸ್ಟ್‌ ಲುಕ್ ಔಟ್‌

ಡಾ. ವೈಶಾಕ್ ಜೆ. ಗೌಡ ಅವರ ವೈಶಾಕ್ ಜೆ. ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಹಾಗೂ ವಿಶ್ವಾಸ್ ಕಶ್ಯಪ್ ನಿರ್ಮಾಣ ವಿನ್ಯಾಸ , ಇಂಚರಾ ಸುರೇಶ್ ಕಾಸ್ಟೈಮ್ ಡಿಸೈನ್ ಇದೆ. ಸದ್ಯ ಶಿವಣ್ಣ ಹಾಗೂ ಧನಂಜಯ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ ಸಿನಿಮಾಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಮತ್ತಷ್ಟು ತಾರಾಬಳಗದ ಬಗ್ಗೆ ಮಾಹಿತಿ ಕೊಡಲಿದೆ.

ಡಾ.ಶಿವರಾಜ್‌ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಚಿತ್ರ ಶೂಟಿಂಗ್‌ ಜುಲೈಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.