ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shivarajkumar: ಶೀಘ್ರದಲ್ಲೇ ʻಜೈಲರ್‌ 2ʼ ಶೂಟಿಂಗ್‌ಗೆ ಶಿವಣ್ಣ ಹಾಜರ್; ಫ್ಯಾನ್ಸ್‌ಗೆ ಥ್ರಿಲ್ಲಿಂಗ್‌ ನ್ಯೂಸ್‌ ಕೊಟ್ಟ ʻಹ್ಯಾಟ್ರಿಕ್‌ ಹೀರೋʼ

Jailer 2 Movie Update: 'ಜೈಲರ್' ಸಿನಿಮಾದಲ್ಲಿನ 'ನರಸಿಂಹ' ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಶಿವರಾಜ್‌ಕುಮಾರ್, ಈಗ 'ಜೈಲರ್ 2' ಚಿತ್ರದ ಶೂಟಿಂಗ್‌ಗೆ ಸಜ್ಜಾಗಿದ್ದಾರೆ. ಜನವರಿ ಎರಡನೇ ವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿರುವುದಾಗಿ ಶಿವಣ್ಣ ಖಚಿತಪಡಿಸಿದ್ದಾರೆ.

ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ಅವರ ಮುಂದಿನ ಸಿನಿಮಾ ʻಜೈಲರ್‌ 2ʼ ಬಗ್ಗೆ ಈಗಾಗಲೇ ದೊಡ್ಡ ಹೈಪ್‌ ಕ್ರಿಯೆಟ್‌ ಆಗಿದೆ. ʻಜೈಲರ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದ್ದರಿಂದ ಪಾರ್ಟ್‌ 2ರ ಮೇಲೂ ಅಭಿಮಾನಿಗಳಿಗೆ ಅಂಥದ್ದೇ ನಿರೀಕ್ಷೆ ಇದೆ. 'ಜೈಲರ್' ಸಿನಿಮಾದಲ್ಲಿನ 'ನರಸಿಂಹ' ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಶಿವರಾಜ್‌ಕುಮಾರ್ ಸದ್ಯ ಈ ಚಿತ್ರದ ಬಗ್ಗೆ ಒಂದು ಅಪ್ಡೇಟ್‌ ನೀಡಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಶಿವಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ಶಿವಣ್ಣ ಹೇಳಿದ್ದೇನು?

45ನೇ ಚಿತ್ರದ ಬಿಡುಗಡೆಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಶಿವಣ್ಣ, ಜೈಲರ್‌ ಪಾರ್ಟ್‌ 1ಕ್ಕಿಂತ ಪಾರ್ಟ್‌ 2ರಲ್ಲಿ ತಮ್ಮ ಪಾತ್ರ ಹೆಚ್ಚು ಮಹತ್ವದ್ದಾಗಿರುತ್ತದೆ ಎಂದು ಬಹಿರಂಗಪಡಿಸಿದ್ದಾರೆ. ಈ ವಾರದೊಳಗೆ ಜೈಲರ್ 2 ಚಿತ್ರೀಕರಣವನ್ನು ಪ್ರಾರಂಭಿಸುವುದಾಗಿ ಶಿವರಾಜ್‌ಕುಮಾರ್. "ಈಗಾಗಲೇ ಒಂದು ದಿನ ಶೂಟಿಂಗ್‌ ಮಾಡಿರುವೆ. ಮುಂದೆ ಜನವರಿ ಎರಡನೇ ವಾರದಲ್ಲಿಯೂ ಚಿತ್ರೀಕರಣಕ್ಕೆ ಡೇಟ್ಸ್‌ ನೀಡಿದ್ದೇನೆ. 2023 ರಲ್ಲಿ ಜೈಲರ್ ಯಶಸ್ವಿಯಾಗಿತ್ತು. ಈಗ ಪಾರ್ಟ್‌ 2 ಅದಕ್ಕಿಂತಲೂ ದೊಡ್ಡಮಟ್ಟದಲ್ಲಿ ಮೂಡಿಬರಲಿದೆ. ನನ್ನ ಪಾತ್ರವು ಹೆಚ್ಚು ಪ್ರಮುಖ್ಯತೆ ಹೊಂದಿದೆ. ಹಿಂದಿನ ಪಾರ್ಟ್‌ಗಿಂತ ಕೊಂಚ ಜಾಸ್ತಿ ಅವಧಿ ಇರಲಿದೆ" ಎಂದು ಶಿವಣ್ಣ ಹೇಳಿದ್ದಾರೆ.

Star Fashion 2025: ನಟ ಡಾ. ಶಿವರಾಜ್‌ಕುಮಾರ್‌ ಮಾಸ್‌ ಸ್ಟೈಲ್‌ಗೆ ಫ್ಯಾಷನ್‌ ದಿಗ್ಗಜರ ಫುಲ್‌ ಮಾರ್ಕ್ಸ್!

ನನ್ನದು ದೀರ್ಘವಾದ ಅತಿಥಿ ಪಾತ್ರವಿದೆ

"ಜೈಲರ್ 2 ಕಥೆಯು ಪಾರ್ಟ್ 1ರ ಕಥೆ ಎಲ್ಲಿಗೆ ಎಂಡ್‌ ಆಗಿತ್ತೋ, ಅಲ್ಲಿಂದ ಮುಂದುವರಿಯುತ್ತದೆ. ನನ್ನದು ದೀರ್ಘವಾದ ಅತಿಥಿ ಪಾತ್ರವಿದೆ. ಕಾಣಿಸಿಕೊಳ್ಳುತ್ತೇನೆ" ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ʻಜೈಲರ್‌ 2ʼ ಸಿನಿಮಾವನ್ನು ನೆಲ್ಸನ್ ನಿರ್ದೇಶಿಸಿದ್ದು, ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ʻಜೈಲರ್ 2ʼ ಚಿತ್ರದಲ್ಲಿ 'ಟೈಗರ್' ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದು, ರಮ್ಯಾ ಕೃಷ್ಣನ್ ಜೊತೆ ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಸೇರಿದಂತೆ ಇತರ ಪ್ರಮುಖ ತಾರೆಯರು ಮತ್ತೆ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಮುಂದುವರಿದ ಭಾಗಕ್ಕೆ ಹೊಸ ಕಲಾವಿದರ ಸೇರ್ಪಡೆಯೂ ಆಗಿದೆ.

Shivarajkumar: ಮರ್ಡರ್‌ ಮಿಸ್ಟ್ರಿ ಜಾನರ್‌ನ ಚಿತ್ರದಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ ಶಿವರಾಜ್‌ಕುಮಾರ್‌

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಮತ್ತು ಆರ್ ನಿರ್ಮಲ್ ಸಂಕಲನ ಮಾಡುತ್ತಿದ್ದಾರೆ. ಅಂದಹಾಗೆ, 2026ರ ಆಗಸ್ಟ್‌ನಲ್ಲಿ ಈ ಸಿನಿಮಾವು ತೆರೆಗೆ ಬರುವ ನಿರೀಕ್ಷೆ ಇದೆ.

ಈ ಬಾರಿ ಎಸ್‌ ಜೆ ಸೂರ್ಯ, ವಿದ್ಯಾ ಬಾಲನ್‌, ಮಿಥುನ್‌ ಚಕ್ರವರ್ತಿ, ವಿಜಯ್‌ ಸೇತುಪತಿ, ಸಂತಾನಂ ಮುಂತಾದವರು ಎಂಟ್ರಿ ಕೊಟ್ಟಿರುವ ಮಾಹಿತಿ ಇದೆ.