Firefly Movie: ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಶಿವಣ್ಣ
ಶಿವ ರಾಜ್‌ಜ್‌ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಚಿತ್ರ ʼಫೈರ್ ಫ್ಲೈ' ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದೆ. ಶಿವಣ್ಣನ ನಿವಾಸದಲ್ಲಿ ಟ್ರೈಲರ್ ಲಾಂಚ್ ಆಗಿದ್ದು, ಶಿವಣ್ಣನ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಟ್ರೈಲರ್ ಕೊನೆಯಲ್ಲಿ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಫಿಜ್ಜಾ ಡೆಲಿವರಿ ಬಾಯ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

Shivarajkumar

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಶಿವ ರಾಜ್‌ಕುಮಾರ್ (Shiva Rajkumar) ಕೂಡ ಒಬ್ಬರು. ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಅವರು ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದು, ಆರೇಳು ತಿಂಗಳು ಸಿನಿಮಾ ರಂಗದಿಂದ ದೂರವಿದ್ದರು. ಇದೀಗ ಚಿಕಿತ್ಸೆ ಪಡೆದು ಬಂದಿರುವ ನಟ ಶಿವಣ್ಣ ಮತ್ತೆ ಹೊಸ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಈಗಾಗಲೇ ಶಿವಣ್ಣ ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್ ಪ್ರಾರಂಭವಾಗಿದ್ದು, ಈ ನಡುವೆ ಪುತ್ರಿಯ ಸಿನಿಮಾ ಪ್ರಚಾರದಲ್ಲಿ ಶಿವಣ್ಣ ಸಖತ್ ಬ್ಯುಸಿಯಾಗಿದ್ದಾರೆ.
ಶಿವ ರಾಜ್‌ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಚಿತ್ರ ʼಫೈರ್ ಫ್ಲೈ' (Firefly Movie) ರಿಲೀಸ್‌ಗೆ ರೆಡಿಯಾಗಿದ್ದು ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದೆ. ಶಿವಣ್ಣನ ನಿವಾಸದಲ್ಲಿ ಟ್ರೈಲರ್ ಲಾಂಚ್ ಆಗಿದ್ದು, ಶಿವಣ್ಣನ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಉಂಟು ಮಾಡುವಂತೆ ಮಾಡಿದೆ. ಟ್ರೈಲರ್ ಕೊನೆಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಎಂಟ್ರಿ ನೀಡಿದ್ದು, ಫಿಜ್ಜಾ ಡೆಲಿವರಿ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.
ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರನ್ನು ಮನ ಗೆಲ್ಲಲಿದೆ. ಕಳೆದ ಹಲವು ದಿನಗಳಿಂದ ಚಿತ್ರದ ಪ್ರಚಾರ ಜೋರಾಗಿದೆ. ಆದರೆ ಈ ಸಿನಿಮಾದಲ್ಲಿ ಶಿವಣ್ಣ ಕೂಡ ನಟಿಸುತ್ತಾರೆ ಎನ್ನುವ ಸುಳಿವನ್ನು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಶಿವ ರಾಜ್‌ಕುಮಾರ್ ಫ್ಯಾನ್ಸ್ ಮತ್ತಷ್ಟು ಎಕ್ಸೈಟ್ ಆಗಿದ್ದು ಹ್ಯಾಟ್ರಿಕ್ ಹೀರೋ ಎಂಟ್ರಿ ಹೆಚ್ಚು ಥ್ರಿಲ್ ಮೂಡಿಸಿದೆ.
ಸಿನಿಮಾ ಏ. 24ಕ್ಕೆ ರಿಲೀಸ್ ಆಗುತ್ತಿದ್ದ, ಮಗಳ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿರುವ ಶಿವಣ್ಣನ ಲುಕ್ ವಿಭಿನ್ನವಾಗಿದ್ದು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ʼಫೈರ್ ಫ್ಲೈ' ಸಿನಿಮಾದ ಟ್ರೈಲರ್ ಕೊನೆಯಲ್ಲಿ ಸೆಂಚುರಿ ಸ್ಟಾರ್ ಪಿಜ್ಜಾ ಡೆಲಿವರಿ ಬಾಯ್ಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಲಿಫ್ಟ್ ಓಪನ್ ಆಗುತ್ತಿದ್ದಂತೆ ಹೆಡ್ ಫೋನ್ ಹಾಕೊಂಡು, ಕೈಯಲ್ಲಿ ಫಿಜ್ಜಾವನ್ನು ಇಟ್ಕೊಂಡು ಶಿವಣ್ಣ ಎಂಟ್ರಿ ನೀಡಿರುವುದು ಕಂಡು ಬಂದಿದೆ.
ಇದನ್ನು ಓದಿ: Geetha Shivarajkumar: ಗೀತಾ ಶಿವರಾಜ್ ಕುಮಾರ್ ಆಸ್ಪತ್ರೆಗೆ ದಾಖಲು, ಸರ್ಜರಿ
ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಿಸಿರುವ 'ಫೈರ್ ಫ್ಲೈ' ಸಿನಿಮಾವನ್ನು ವಂಶಿ ನಿರ್ದೇಶನ ಮಾಡಿದ್ದು ಅವರೇ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದು ಹಿರಿಯ ಕಲಾವಿದರಾದ ಸುಧಾರಾಣಿ, ಅಚ್ಯುತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.