ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sikandar Trailer Out: ʼಸಿಕಂದರ್‌ʼ ಚಿತ್ರದ ಟ್ರೈಲರ್‌ ಔಟ್‌; ಸಲ್ಮಾನ್‌ ಖಾನ್‌ ಜತೆ ಮಿಂಚಿದ ರಶ್ಮಿಕಾ, ಕಿಶೋರ್‌

Salman Khan-Rashmika Mandanna: ಈ ವರ್ಷದ ಬಹು ನಿರೀಕ್ಷಿತ ಬಾಲಿವುಡ್‌ ಚಿತ್ರ ʼಸಿಕಂದರ್‌ʼನ ಟ್ರೈಲರ್‌ ರಿಲೀಸ್‌ ಆಗಿದೆ. ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಸಲ್ಮಾನ್‌ ಖಾನ್‌ ಮತ್ತು ರಶ್ಮಿಕಾ ಮಂದಣ್ಣ ಟ್ರೈಲರ್‌ನಲ್ಲಿ ಗಮನ ಸೆಳೆದಿದ್ದಾರೆ. ಈದ್‌ ಪ್ರಯುಕ್ತ ಚಿತ್ರ ಮಾ. 30ರಂದು ತೆರೆಗೆ ಬರಲಿದೆ.

ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ಜೋಡಿಯ ʼಸಿಕಂದರ್‌ʼ ಟ್ರೈಲರ್‌ ಔಟ್‌

'ಸಿಕಂದರ್‌ʼ ಚಿತ್ರದ ಪೋಸ್ಟರ್‌.

Profile Ramesh B Mar 23, 2025 7:34 PM

ಮುಂಬೈ: ಈ ವರ್ಷದ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ʼಸಿಕಂದರ್‌ʼ (Sikandar) ಬಿಡುಗಡೆಗೆ ಇನ್ನು ಸರಿಯಾಗಿ 1 ವಾರ ಬಾಕಿ ಇದ್ದು, ಅದರ ಝಲಕ್‌ ಪರಿಚಯ ಮಾಡಿಸುವ ಉದ್ದೇಶದಿಂದ ಇಂದು (ಮಾ. 23) ಸಿನಿಮಾ ತಂಡ ಟ್ರೈಲರ್‌ ರಿಲೀಸ್‌ ಮಾಡಿದೆ (Sikandar Trailer Out). ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan) ನಟನೆಯ ಈ ಆ್ಯಕ್ಷನ್‌ - ಥ್ರಿಲ್ಲರ್‌ ಈ ಹಿಂದೆ ರಿಲೀಸ್‌ ಆದ ಟೀಸರ್‌, ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿತ್ತು. ಇದೀಗ ಬರೋಬ್ಬರಿ 3 ನಿಮಿಷ 38 ಸೆಕೆಂಡ್‌ಗಳ ಟ್ರೈಲರ್‌ ಹೊರ ಬಂದಿದ್ದು, ಸಲ್ಮಾನ್‌ ಮತ್ತೊಮ್ಮೆ ಮಾಸ್‌ ಅವತಾರವೆತ್ತಿದ್ದಾರೆ. ಪಕ್ಕಾ ಕಮರ್ಷಿಯಲ್‌ ಶೈಲಿಯಲ್ಲಿ ಸಿನಿಮಾ ಮೂಡಿಬಂದಿರುವ ಸೂಚನೆ ಟ್ರೈಲರ್‌ ಮೂಲಕ ಬಹಿರಂಗವಾಗಿದ್ದು, ಮತ್ತೊಂದು ಅದ್ಧೂರಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮಿಂಚು ಹರಿಸಿದ್ದಾರೆ.

ಈದ್‌ ಪ್ರಯುಕ್ತ 'ಸಿಕಂದರ್‌' ಚಿತ್ರ ಮಾ. 30ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಪ್ರಥಮ ಬಾರಿಗೆ ಸಲ್ಮಾನ್‌ ಖಾನ್‌ಗೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ.ಆರ್‌.ಮುರುಗದಾಸ್‌ ಆ್ಯಕ್ಷನ್‌ ಕಟ್‌ ಹೇಳಿರುವುದು ವಿಶೇಷ. ಅಲ್ಲದೆ ಸಲ್ಮಾನ್‌ ಜತೆಗೆ ರಶ್ಮಿಕಾ ಅವರ ಮೊದಲ ಸಿನಿಮಾ ಇದು. ಹೀಗಾಗಿ ಈ ಸಿನಿಮಾ ಮೇಲೆ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿದೆ. ಅದಕ್ಕೆ ತಕ್ಕಂತೆ ಟ್ರೈಲರ್‌ ಉದ್ದಕ್ಕೂ ರಶ್ಮಿಕಾ ಕಾಣಿಸಿಕೊಂಡಿದ್ದು, ಸಲ್ಮಾನ್‌ ಜತೆಗೆ ಅವರ ಪಾತ್ರವೂ ಗಮನ ಸೆಳೆಯುತ್ತಿದೆ.

ʼಸಿಕಂದರ್‌ʼ ಚಿತ್ರದ ಟ್ರೈಲರ್‌ ನೋಡಿ:



ಹೇಗಿದೆ ಟ್ರೈಲರ್‌?

ಮೊದಲೇ ಹೇಳಿದಂತೆ ಇದು ಔಟ್‌ ಆಫ್‌ ಔಟ್‌ ಆ್ಯಕ್ಷನ್‌ ಚಿತ್ರ. ನಿರೀಕ್ಷೆಯಂತೆಯೇ ಟ್ರೈಲರ್‌ ಮೂಡಿ ಬಂದಿದ್ದು, ಸಲ್ಮಾನ್‌ ವಿಲನ್‌ಗಳನ್ನು ಮನ ಬಂದಂತೆ ಚಚ್ಚಿ ಹಾಕಿರುವುದು ಕಂಡು ಬಂದಿದೆ. ಜತೆಗೆ ಭರ್ಜರಿ ಡೈಲಾಗ್‌ ಹೊಡೆದಿದ್ದಾರೆ. ಆ್ಯಕ್ಷನ್‌ ದೃಶ್ಯಗಳ ಜತೆಗೆ ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ರೊಮ್ಯಾನ್ಸ್‌ ಕೂಡ ಹೈಲೈಟ್‌ ಆಗಿದೆ. ರಶ್ಮಿಕಾಗೆ ಮತ್ತೊಂದು ಪವರ್‌ಫುಲ್‌ ಪಾತ್ರ ಸಿಕ್ಕಿದ್ದು, ಹಾಡಿನಲ್ಲೂ ಮಿಂಚಿದ್ದಾರೆ. ಸಲ್ಮಾನ್‌-ರಶ್ಮಿಕಾ ಜೋಡಿಗೆ ಪ್ರೇಕ್ಷಕರು ಜೈ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: AR Murugadoss: ಸಲ್ಮಾನ್‌-ರಶ್ಮಿಕಾ ನಟನೆಯ ʼಸಿಕಂದರ್‌ʼ ರಿಮೇಕ್‌ ಚಿತ್ರವ? ನಿರ್ದೇಶಕ ಎ.ಆರ್‌.ಮುರುಗದಾಸ್‌ ಹೇಳಿದ್ದೇನು?



ಗಮನ ಸೆಳೆದ ಕಿಶೋರ್‌, ಸತ್ಯರಾಜ್‌

ಸ್ಯಾಂಡಲ್‌ವುಡ್‌ ನಟ ಕಿಶೋರ್‌ ಮತ್ತೊಮ್ಮೆ ಪೊಲೀಸ್‌ ಪಾತ್ರದಲ್ಲಿ ಗಮನ ಸೆಳೆದರೆ, ಮುಖ್ಯ ವಿಲನ್‌, ಭ್ರಷ್ಟ ರಾಜಕಾರಣಿಯಾಗಿ ಕಾಲಿವುಡ್‌ನ ಸತ್ಯರಾಜ್‌ ಅಬ್ಬರಿಸಿದ್ದಾರೆ. ಇನ್ನು ಬಹುಭಾಷಾ ತಾರೆ ಕಾಜಲ್‌ ಅಗರ್‌ವಾಲ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 80 ಮತ್ತು 90ರ ದಶಕದ ಹಿಂದಿ ಸಿನಿಮಾಗಳನ್ನು ನೆನಪಿಸುವ ಡೈಲಾಗ್‌ ಈ ಟ್ರೈಲರ್‌ನ ಮತ್ತೊಂದು ವೈಶಿಷ್ಟ್ಯ.

ಶುಕ್ರವಾರ ಬದಲು ಭಾನುವಾರ ರಿಲೀಸ್‌

ಸಾಮಾನ್ಯವಾಗಿ ಚಿತ್ರಗಳು ಶುಕ್ರವಾರ ರಿಲೀಸ್‌ ಆಗುತ್ತವೆ. ಆದರೆ ʼಸಿಕಂದರ್‌ʼ ಭಾನುವಾರ ಬಿಡುಗಡೆಯಾಗಲಿದೆ. ಭರ್ಜರಿ ಕಲೆಕ್ಷನ್‌ ಮೇಲೆ ಕಣ್ಣಿಟ್ಟಿರುವ ಚಿತ್ರತಂಡ ಈದ್‌ ಹಿನ್ನೆಲೆಯಲ್ಲಿ ಭಾನುವಾರ ತೆರೆಗೆ ತರಲು ಮುಂದಾಗಿದೆ. ಸಾಲು ಸಾಲು ರಜೆ ಇರುವುದರಿಂದ ಮೊದಲ ದಿನವೇ ದಾಖಲೆಯ ಕಲೆಕ್ಷನ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ಅಭಿಮಾನಿಗಳು.