ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತನ್ನದೇ ಗರಡಿಯ ಹುಡುಗನಿಗೆ ಹೀರೋ ಪಟ್ಟ ನೀಡಿದ ‘ಸಿಂಪಲ್’ ಸುನಿ; ಗಮನ ಸೆಳೆಯುತ್ತಿದೆ ‘ಮೋಡ ಕವಿದ ವಾತಾವರಣ’ ಟೀಸರ್!

‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಖ್ಯಾತ ನಿರ್ದೇಶಕ ʻಸಿಂಪಲ್ʼ ಸುನಿ ಅವರು ಜೂನ್ 26 ರಂದು ವಿಭಿನ್ನ ಸೈಂಟಿಫಿಕ್ ಫಿಕ್ಷನ್ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ 'ಹೀರೋ ಟೀಸರ್' ಭಾರಿ ಗಮನ ಸೆಳೆಯುತ್ತಿದ್ದು, ಸುನಿ ಗರಡಿಯ ಪ್ರತಿಭೆ ಶೀಲಮ್ ಈ ಸಿನಿಮಾ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ʻಸಿಂಪಲ್ʼ ಸುನಿ ಗರಡಿಯ ಹುಡುಗನಿಗೆ ಒಲಿದ ಅದೃಷ್ಟ; ಹೀರೋ ಆದ ಶೀಲಮ್

-

Avinash GR
Avinash GR Jun 17, 2026 3:57 PM

‘ಒಂದು ಸರಳ ಪ್ರೇಮಕಥೆ’, ʻಗತ ವೈಭವʼ ಚಿತ್ರಗಳ ಯಶಸ್ಸಿನ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಮತ್ತೊಂದು ವಿಭಿನ್ನ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸುನಿ ನಿರ್ದೇಶನದ ಬಹುನಿರೀಕ್ಷಿತ ‘ಮೋಡ ಕವಿದ ವಾತಾವರಣ’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದ್ದು, ಇದೇ ಜೂನ್ 26ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದ್ದು, ಅದರ ಭಾಗವಾಗಿ ಇತ್ತೀಚೆಗೆ ಚಿತ್ರದ ‘ಹೀರೋ ಟೀಸರ್’ ಅನ್ನು ಬಿಡುಗಡೆ ಮಾಡಲಾಯಿತು.

ಚಿತ್ರದ ಅರ್ಧ ಕಥೆ ಥಿಯೇಟರ್‌ನಲ್ಲೇ ರಿವೀಲ್ ಆಗಲಿದೆ

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, "ಮೋಡ ಕವಿದ ವಾತಾವರಣ ನನ್ನ ಜೀವನದ ಅತ್ಯಂತ ಸ್ಪೆಷಲ್ ಸಿನಿಮಾ. ಸಾಮಾನ್ಯವಾಗಿ ನಾನು ಟ್ರೇಲರ್‌ಗಳನ್ನು ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಸಿನಿಮಾದಲ್ಲಿ ಒಂದು ವಿಶೇಷ ಅಂಶವಿರುವುದರಿಂದ, ಚಿತ್ರದ ಅರ್ಧ ಭಾಗವನ್ನು ಥಿಯೇಟರ್‌ನಲ್ಲಿಯೇ ಪ್ರೇಕ್ಷಕರು ನೋಡಬೇಕು ಎನ್ನುವುದು ನಮ್ಮ ಆಸೆ. ಹೀಗಾಗಿ ಟ್ರೇಲರ್ ಕಟ್ ಮಾಡುವುದು ನಮಗೆ ದೊಡ್ಡ ಸವಾಲಾಗಿತ್ತು. ನಾಯಕ ಶೀಲಮ್ ಅದ್ಭುತವಾಗಿ ನಟಿಸಿದ್ದಾರೆ. ‘ಒಂದು ಸರಳ ಪ್ರೇಮಕಥೆ’ ನಂತರ ನಿರ್ಮಾಪಕ ರಮೇಶ್ ಸರ್ ನಮ್ಮ ತಂಡದ ಜೊತೆ ಕೈಜೋಡಿಸಿರುವುದು ಪಾಸಿಟಿವ್ ವೈಬ್ಸ್ ತಂದಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

Simple Suni: ಸಿಂಪಲ್ ಸುನಿಯ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ ; ರಿಲೀಸ್‌ ಡೇಟ್‌ ಅನೌನ್ಸ್‌

ಹೀರೋ ಆಗುವುದು ಒಂದು ಪವಾಡ

ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಸುನಿ ಗರಡಿಯ ಹುಡುಗ ಶೀಲಮ್ ತಮ್ಮ ಅನುಭವ ಹಂಚಿಕೊಂಡರು. "ಚಿತ್ರರಂಗದಲ್ಲಿ ಹೀರೋ ಆಗುವುದು ಒಂದು ಪವಾಡ. ಕೇವಲ ಹಣ, ನಟನಾ ಕೌಶಲ, ಡ್ಯಾನ್ಸ್ ಅಥವಾ ಫೈಟ್ ಗೊತ್ತಿದ್ದ ತಕ್ಷಣ ಹೀರೊ ಆಗಲು ಸಾಧ್ಯವಿಲ್ಲ.ಎಲ್ಲವನ್ನೂ ಮೀರಿ ಅದೃಷ್ಟ ಇರಬೇಕು. ನನ್ನ ಜೀವನದಲ್ಲಿ ಸುನಿ ಸರ್ ಕಾರಣದಿಂದ ಆ ಪವಾಡ ನಡೆದಿದೆ. ನನ್ನ ಸಿನಿ ಜರ್ನಿಯ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ದೊಡ್ಡ ಸ್ಟಾರ್ ನಟರಿಗೆ ಸಿನಿಮಾ ಮಾಡಬೇಕಿದ್ದ ಈ ತಂಡ, ನನ್ನನ್ನು ನಂಬಿ ಹೀರೋ ಮಾಡಿದೆ. ಇದು ನನ್ನ ಪುಣ್ಯ" ಎಂದು ಹೇಳಿದರು. ಶೀಲಮ್ ಈ ಹಿಂದೆ ಸುನಿ ಅವರ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು.

‘ಮೋಡ ಕವಿದ ವಾತಾವರಣ’ ಒಂದು ವಿಭಿನ್ನವಾದ ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ನಾಯಕ ಶೀಲಮ್‌ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

Gatha Vaibhava OTT: ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ ಬಂದಾಯ್ತು! ಸ್ಟ್ರೀಮಿಂಗ್ ಎಲ್ಲಿ?

‘ಒಂದು ಸರಳ ಪ್ರೇಮಕಥೆ’ ಖ್ಯಾತಿಯ 'ರಾಮ್ ಮೂವೀಸ್' ಬ್ಯಾನರ್ ಅಡಿಯಲ್ಲಿ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಂತೋಷ್ ರೈ ಪಾತಾಜೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಜೂಡಾ ಸ್ಯಾಂಡಿ ಅವರ ಸಂಗೀತವಿದೆ. ಆದಿತ್ಯ ಕಶ್ಯಪ್ ಸಂಕಲನ ಮಾಡಿದ್ದಾರೆ.