ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Parasakthi Twitter Review: ಶಿವಕಾರ್ತಿಕೇಯನ್-ಶ್ರೀಲೀಲಾ ಚಿತ್ರ ನೋಡಿ ಪ್ರೇಕ್ಷಕರು ಏನಂದ್ರು? ವಿಲನ್ ಪಾತ್ರದಲ್ಲಿ ʻಜಯಂʼ ರವಿ ಮಿಂಚಿದ್ರಾ?

Parashakti Movie Review: ಶಿವಕಾರ್ತಿಕೇಯನ್, ಜಯಂ ರವಿ, ಅಥರ್ವ ಮತ್ತು ಶ್ರೀಲೀಲಾ ಅಭಿನಯದ, ಸುಧಾ ಕೊಂಗರಾ ನಿರ್ದೇಶನದ 'ಪರಾಶಕ್ತಿ' ಸಿನಿಮಾ ಜನವರಿ 10ರಂದು ಬಿಡುಗಡೆಯಾಗಿದೆ. ಈ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಏನಂದ್ರು? ಇಲ್ಲಿದೆ ಮಾಹಿತಿ.

‌ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಚಿತ್ರಕ್ಕೆ ಹೇಗಿದೆ ರೆಸ್ಪಾನ್ಸ್?

-

Avinash GR
Avinash GR Jan 10, 2026 11:52 AM

ಶಿವಕಾರ್ತಿಕೇಯನ್, ಶ್ರೀಲೀಲಾ, ಅಥರ್ವ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ 'ಪರಾಶಕ್ತಿ' ಜ.10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೊನೆಯ ಕ್ಷಣದಲ್ಲಿ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದ್ದರಿಂದ, ಸುಧಾ ಕೊಂಗರಾ ನಿರ್ದೇಶನದ ಈ ಚಿತ್ರಕ್ಕೆ ಪೊಂಗಲ್‌ ರಜೆಯನ್ನು ಲಾಭ ಮಾಡಿಕೊಳ್ಳುವ ಚಾನ್ಸ್‌ ಸಿಕ್ಕಿದೆ. ಮುಂಜಾನೆಯಿಂದಲೇ ಉತ್ತಮ ಓಪನಿಂಗ್‌ ಪಡೆದುಕೊಂಡಿರುವ ಈ ಸಿನಿಮಾದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಸೂರರೈ ಪೋಟ್ರು' ಖ್ಯಾತಿಯ ಸುಧಾ ಕೊಂಗರಾ ನಿರ್ದೇಶಿಸಿರುವ 'ಪರಾಶಕ್ತಿ' ಚಿತ್ರವು 1960ರ ದಶಕದ ಚೆನ್ನೈ ಮತ್ತು ಮಧುರೈ ಹಿನ್ನೆಲೆಯಲ್ಲಿ ನಡೆಯುವ ರಾಜಕೀಯ ಮತ್ತು ಐತಿಹಾಸಿಕ ಕಥಾಹಂದರವನ್ನು ಹೊಂದಿದೆ. ರಾಜಕೀಯ ಅಶಾಂತಿಯ ಕಾಲದಲ್ಲಿ ವಿಭಿನ್ನ ಸಿದ್ಧಾಂತಗಳಿಂದಾಗಿ ಎರಡು ವಿರುದ್ಧ ದಿಕ್ಕಿನಲ್ಲಿ ನಿಲ್ಲುವ ಇಬ್ಬರು ಸಹೋದರರ ಕಥೆ ಇದಾಗಿದ್ದು, ದಬ್ಬಾಳಿಕೆ, ಪ್ರತಿರೋಧ ಮತ್ತು ತ್ಯಾಗದಂತಹ ವಿಷಯಗಳನ್ನು ಚಿತ್ರವು ಒಳಗೊಂಡಿದೆ. ಸಿನಿಮಾದ ಕಥಾವಸ್ತುವು ಭಾವನಾತ್ಮಕ ಮತ್ತು ತೀವ್ರತೆಯಿಂದ ಕೂಡಿದೆ ಎಂದು ಭರವಸೆ ನೀಡಿದ್ದರೂ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಟ್ವಿಟರ್‌ನಲ್ಲಿ ಏನಿದೆ ರಿಯಾಕ್ಷನ್?

ಪ್ರೇಕ್ಷಕರೊಬ್ಬರು ಸಿನಿಮಾ ನೋಡಿ, 5ಕ್ಕೆ 1.5 ರೇಟಿಂಗ್ ನೀಡಿದ್ದಾರೆ. ಚಿತ್ರದ ಮೊದಲಾರ್ಧ "ಪರವಾಗಿಲ್ಲ" ಎನ್ನುವಂತಿದ್ದರೂ, ದ್ವಿತೀಯಾರ್ಧವು ತುಂಬಾ ಎಳೆಯಲ್ಪಟ್ಟಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಸಿನಿಮಾ "ದೊಡ್ಡ ಕನಸು ಕಂಡರೂ, ಅದನ್ನು ತಲುಪುವಲ್ಲಿ ವಿಫಲವಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.

Sivakarthikeyan: ನಟ ಶಿವಕಾರ್ತಿಕೇಯನ್ ಕಾರು ಅಪಘಾತ; ಅಸಲಿಗೆ ಆಗಿದ್ದೇನು? ವೈರಲ್‌ ಆಯ್ತು ವಿಡಿಯೊ

ಮತ್ತೊಬ್ಬರು ಈ ಚಿತ್ರದ ಮೊದಲಾರ್ಧವು ನೀರಸವಾಗಿದೆ ಮತ್ತು ಚಿತ್ರದ ಇಂಟರ್ವಲ್ ಬ್ಲಾಕ್ ಎಷ್ಟು ಸಾಧಾರಣವಾಗಿತ್ತೆಂದರೆ, ಅದನ್ನು ಪುಟ್ಟ ಮಗು ಕೂಡ ಊಹಿಸಬಹುದಿತ್ತು ಎಂದು ಬೇಸರ ಮಾಡಿಕೊಂಡಿದ್ದಾರೆ. ಅದ್ದೂರಿ ಐತಿಹಾಸಿಕ ಚಿತ್ರಕ್ಕೆ ಇರಬೇಕಾದ ಭಾವನಾತ್ಮಕ ತೀವ್ರತೆ ಸಂಗೀತದಲ್ಲಿ ಕಂಡುಬಂದಿಲ್ಲ. ಈ ಚಿತ್ರದ ಕ್ಲೈಮ್ಯಾಕ್ಸ್ ನಿರ್ದೇಶಕಿ ಸುಧಾ ಕೊಂಗರಾ ಅವರ ವೃತ್ತಿಜೀವನದಲ್ಲೇ ಅತ್ಯಂತ ದುರ್ಬಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರೇಕ್ಷಕರೊಬ್ಬರು ಈ ಸಿನಿಮಾ ತಾಳ್ಮೆಯನ್ನು ಪರೀಕ್ಷಿಸಿತು ಎಂದು ಟ್ವೀಟ್ ಮಾಡಿದ್ದು, "ಸಿನಿಮಾದ ಗಂಭೀರ ರಾಜಕೀಯ ಕಥಾವಸ್ತುವಿಗೆ ಕೆಲ ಹಾಸ್ಯದ ಸನ್ನಿವೇಶಗಳು ಯಾವುದೇ ರೀತಿಯಲ್ಲಿ ಹೊಂದಿಕೆಯಾಗುತ್ತಿಲ್ಲ. ಅವುಗಳನ್ನು ಬಲವಂತವಾಗಿ ತುರುಕಿದಂತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‌

ರಶ್ಮಿಕಾ ಬಳಿಕ ಎಐ ದುರ್ಬಳಕೆ ವಿರುದ್ಧ ಧ್ವನಿ ಎತ್ತಿದ ಶ್ರೀಲೀಲಾ: ಡಿಜಿಟಲ್ ಜವಾಬ್ದಾರಿ ಇರಲಿ ಎಂದು ಕಿವಿಮಾತು

ಪಾಸಿಟಿವ್‌ ಆಗಿಯೂ ಕೆಲವರು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. "ನೈಜ ಘಟನೆಗಳಿಂದ ಪ್ರೇರಿತವಾದ ವಿಷಯಗಳನ್ನು ಅತೀವ ಗಂಭೀರತೆ ಮತ್ತು ಬದ್ಧತೆಯಿಂದ ತೆರೆಯ ಮೇಲೆ ತರುವಲ್ಲಿ ಸುಧಾ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಸಾಹಸ ದೃಶ್ಯಗಳು, ಭಾವನಾತ್ಮಕ ಸಂಘರ್ಷಗಳು ಉತ್ತಮವಾಗಿದೆ" ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಇನ್ನು, ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಪೋಷಿಸಿರುವ ರವಿ ಮೋಹನ್ (ಜಯಂ ರವಿ) ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವು ಪ್ರೇಕ್ಷಕರು ಜಯಂ ರವಿ ಅವರ ಪವರ್‌ಫುಲ್ ಪರ್ಫಾರ್ಮೆನ್ಸ್ ಬಗ್ಗೆ ಟ್ವೀಟ್ ಮಾಡಿದ್ದು, ಇಡೀ ಸಿನಿಮಾವನ್ನು ಅವರೇ ಹೆಗಲ ಮೇಲೆ ಹೊತ್ತಿದ್ದಾರೆ ಎಂದು ಹೊಗಳಿದ್ದಾರೆ.