ನಟಿ ಸ್ಪಂದನಾ ಸೋಮಣ್ಣ ಸ್ಪಂದನಾ ಸೋಮಣ್ಣ (Spandana Somanna) ಈಚೆಗೆ, ತಮ್ಮ ಮದುವೆಯ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಮತ್ತು ಸಸ್ಪೆನ್ಸ್ಗಳಿಗೆ ತೆರೆ ಎಳೆದಿದ್ದರು. ಮದುವೆ ಸಮೀಪಿಸುತ್ತಿದ್ದಂತೆ ನಟಿ ಸ್ಪಂದನಾ ಸೋಮಣ್ಣ ಅವರ ಭಾವಿ ಪತಿ ವರುಣ್ ಮುನಿರಾಜು ಮದುವೆಗೆ ಸಿದ್ಧತೆ ನಡೆದಿದೆ. ವಿವಾಹದ ಬಳಿಕ ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಹೊಂದಿದ್ದಾರೆ. ಸ್ಪಂದನಾ, ತಮ್ಮ ಪ್ರೀತಿಯ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಟ್ರೋಲಿಗರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಇನ್ನು ಮುಂದೆ ಯಾವುದೇ ವಿದಾಯಗಳಿಲ್ಲ, ದಿನಗಳನ್ನು ಎಣಿಸುವುದಿಲ್ಲ, ಬದಲಿಗೆ ಒಟ್ಟಾಗಿ ಇಡಿಯಾದ ಜೀವನವಿದೆ. ವರ್ಷಗಳಿಂದ ಈ ದಿನದ ಕನಸು ಕಂಡಿದ್ದೆ, ಅದಕ್ಕಾಗಿ ಕಾಯುತ್ತಿದ್ದೆ ಮತ್ತು ಅಂತಿಮವಾಗಿ ಅದು ಸಂಭವಿಸುತ್ತಿದೆ.
ಇದನ್ನೂ ಓದಿ: Agnisakshi Serial: ರಾಜು ನಾಟಕಕ್ಕೆ ಸಾಕ್ಷಿ ತೆರೆ ಎಳೆಯೋ ಸಮಯ ಬಂದೇ ಬಿಡ್ತು; ʻಅಗ್ನಿ ಸಾಕ್ಷಿʼಯಲ್ಲಿ ಬಿಗ್ ಟ್ವಿಸ್ಟ್!
ದೂರ ಪ್ರಯಾಣವು ತುಂಬಾ ಹುಚ್ಚುತನದ್ದಾಗಿರಬಹುದು. ಕಣ್ಣೀರು, ಕ್ಷಣಗಣನೆಗಳು, ತಪ್ಪಿದ ಅಪ್ಪುಗೆಗಳು ಮತ್ತು ಅಂತ್ಯವಿಲ್ಲದ ವಿಮಾನ ನಿಲ್ದಾಣದ ವಿದಾಯಗಳು... ಆದರೆ ಇದೆಲ್ಲದರ ಮೂಲಕ ಪ್ರೀತಿ ಗೆಲ್ಲುತ್ತದೆ. ಯಾವಾಗಲೂ. ಇನ್ನು ಮುಂದೆ ಯಾವುದೇ ವಿದಾಯಗಳಿಲ್ಲ, ಇನ್ನು ಮುಂದೆ ಎಣಿಸುವ ದಿನಗಳಿಲ್ಲ, ಕೇವಲ ಒಟ್ಟಿಗೆ ಇರುವ ದಿನಗಳು.
ಸಾಮಾಜಿಕ ಜಾಲತಾಣದಲ್ಲಿ ಕೆಲವರ ನೆಗೆಟಿವ್ ಕಮೆಂಟ್ಗಳಿಗೂ ಸ್ಪಂದನಾ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ‘ಕೆಲವರು ಕಮೆಂಟ್ಗಳಲ್ಲಿ ಅನಗತ್ಯವಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾನು ಹೇಳುವುದೊಂದೇ – ಹೀಗೆಯೇ ತಲೆಕೆಡಿಸಿಕೊಳ್ಳುತ್ತಿರಿ, ನಾವು ಮಾತ್ರ ಸದಾ ಖುಷಿಯಾಗಿರುತ್ತೇವೆ’ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
ಈಚೆಗೆ ನಟಿ, ಹೂವು ಮುಡಿಸುವ ಶಾಸ್ತ್ರದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಹಿಂದೆ, ನಟಿ, ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿದ್ದರು. ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಕಾಲೇಜಿನ ಟೈಮ್ನಲ್ಲಿ ಮಾತನಾಡಿರಲಿಲ್ಲ. ಆದರೆ ಕೋವಿಡ್ ಟೈಮ್ನಲ್ಲಿ ಮಾತನಾಡಿದ್ವಿ. ಅಲ್ಲಿಂದಲೇ ಲವ್ ಶುರುವಾಯ್ತು ಎಂದಿದ್ದಾರೆ.