ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Spandana Somanna: ಬಾಯ್‌ಫ್ರೆಂಡ್‌ ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ; ಫೋಟೋ ವೈರಲ್‌

Spandana Somanna: ಕಳ್ಳ ಪುಟ್ಟಿ ಎಂದೇ ಹೆಸರು ಪಡೆದಿರುವ ನಟಿ ಸ್ಪಂದನಾ ಸೋಮಣ್ಣ (Spandana Somanna) ಬಾಯ್‌ಫ್ರೆಂಡ್‌ ಪರಿಚಯಿಸಿದ್ದಾರೆ. ಹುಡುಗನ ಮುಖ ಮತ್ತು ಹೆಸರು ಬಹಿರಂಗಪಡಿಸದೆ ಸಸ್ಪೆನ್ಸ್ ಕಾಯ್ದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು (Boyfriednd) ವೈರಲ್ ಆಗಿವೆ.

ಬಾಯ್‌ಫ್ರೆಂಡ್‌ ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ

ಸ್ಪಂದನಾ ಸೋಮಣ್ಣ -

Yashaswi Devadiga
Yashaswi Devadiga Aug 5, 2026 8:20 AM

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್ 12ರ ಕಳ್ಳ ಪುಟ್ಟಿ ಎಂದೇ ಹೆಸರು ಪಡೆದಿರುವ ನಟಿ ಸ್ಪಂದನಾ ಸೋಮಣ್ಣ (Spandana Somanna) ಬಾಯ್‌ಫ್ರೆಂಡ್‌ ಪರಿಚಯಿಸಿದ್ದಾರೆ. ಹುಡುಗನ ಮುಖ ಮತ್ತು ಹೆಸರು ಬಹಿರಂಗಪಡಿಸದೆ ಸಸ್ಪೆನ್ಸ್ ಕಾಯ್ದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು (Boyfriednd) ವೈರಲ್ ಆಗಿವೆ.

ಪ್ಯಾರೀಸ್ ನ ಐಫೆಲ್ ಟವರ್ ಹಿನ್ನೆಲೆಯಲ್ಲಿ, ಹುಡುಗನೊಬ್ಬನ ಕೈಹಿಡಿದು ಸಂತೋಷದಿಂದ ನಡೆಯುತ್ತಿರುವ ಫೋಟೊ ಎರಡನ್ನು ಶೇರ್ ಮಾಡಿದ್ದು, ಅದರ ಜೊತೆಗೆ Plot Twist : Paris was not the Main Character! ಎಂದು ಬರೆದಿದ್ದಾರೆ.

ಇದನ್ನೂ ಓದಿ: Bigg Boss 20 teaser: ಬಿಗ್‌ ಬಾಸ್‌​ ಪ್ರಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಕೊನೆಗೂ ಡೇಟ್​ ಫಿಕ್ಸ್

ತಮ್ಮ ಜೀವನದ ಮುಖ್ಯ ಪಾತ್ರವನ್ನು ರಿವೀಲ್ ಮಾಡಿದಂತಿದೆ. ಆದರೆ ಫೋಟೊದಲ್ಲಿ ಇರುವವರು ಯಾರು ಎಂಬುದನ್ನು ನಟಿ ರಿವೀಲ್ ಮಾಡಿಲ್ಲ, ಕೇವಲ ಬ್ಯಾಕ್ ಸೈಡ್ ಫೋಟೊ ಹಂಚಿಕೊಂಡಿದ್ದಾರೆ. ನಟಿ ಹಂಚಿಕೊಂಡ ಫೋಟೊ ನೋಡಿ ಕನ್ನಡ ಕಿರುತೆರೆಯ ಹಲವಾರು ನಟಿಯರು ಕಂಗ್ರಾಜುಲೇಶನ್ಸ್ ಹೇಳಿದ್ದಾರೆ.

ಬಿಗ್ ಬಾಸ್‌ನಿಂದ ಆಚೆ ಬಂದ ಬಳಿಕ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಸ್ಪಂದನಾ, ತಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಬಹಳ ದಿನಗಳಿಂದ ಗೌಪ್ಯವಾಗಿಟ್ಟಿದ್ದರು.

ನಾನು ನನ್ನ ಕನಸು’, ‘ಗೃಹಪ್ರವೇಶ’, ‘ಕರಿಮಣಿ’ ಹಾಗೂ ತೆಲುಗಿನ ‘ಅಭಿಲಾಷಾ’ ಸೀರಿಯಲ್‌ಗಳಲ್ಲಿ, ‘ದಿಲ್‌ಖುಷ್‌’, ‘ಮರೀಚಿ’ ಸಿನಿಮಾಗಳಲ್ಲಿ ಸ್ಪಂದನಾ ಸೋಮಣ್ಣ ನಟಿಸಿದ್ದಾರೆ. ‘ಬಾಯ್ಸ್ ವರ್ಸಸ್ ಗರ್ಲ್ಸ್’, ‘ಬಿಗ್‌ ಬಾಸ್‌ ಕನ್ನಡ ಸೀಸನ್12’ ಶೋನಲ್ಲಿ ಸ್ಪಂದನಾ ಸೋಮಣ್ಣ ಸ್ಪರ್ಧಿಸಿದ್ದರು. ಮೂಲತಃ ಮೈಸೂರಿನ ಹುಡುಗಿಯಾದ ಸ್ಪಂದನಾ ವಿದ್ಯಾಭ್ಯಾಸ ಮಾಡಿದ್ದು ಹುಟ್ಟೂರಿನಲ್ಲಿಯೇ. ಎಂಜನಿಯರ್‌ ಓದಿದ್ದಾರೆ.

ಕನ್ನಡದ ‘ದಿಲ್‌ ಖುಷ್’ ಹಾಗೂ ‘ಮರೀಚಿ’ ಸಿನಿಮಾಗಳಲ್ಲಿ ಸ್ಪಂದನಾ ಸೋಮಣ್ಣ ಮಿಂಚಿದ್ದಾರೆ. ಎಂಜಿನಿಯರಿಂಗ್ ಓದಿದ್ದ ಸ್ಪಂದನಾ ಸೋಮಣ್ಣ ಆಕ್ಟಿಂಗ್ ಮಾಡುವುದು ತಂದೆ - ತಾಯಿ, ಅಜ್ಜನಿಗೆ ಇಷ್ಟವಿರಲಿಲ್ಲ.

ಇದನ್ನೂ ಓದಿ: Priyanka Chopra: ಮಗಳಿಗೆ 'ಸರ್ವ ಮಂಗಲ ಮಾಂಗಲ್ಯೇʼ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ; ನೆಟ್ಟಿಗರಿಂದ ಮೆಚ್ಚುಗೆ

ಆದರೂ ಕನ್ಸಿನ್ಸ್ ಮಾಡಿ ಸ್ಪಂದನಾ ಸೋಮಣ್ಣ ನಟನೆಗಿಳಿದರು. ಸ್ಪಂದನಾ ಸೋಮಣ್ಣ ನಟಿಯಾಗಿದ್ದಕ್ಕೆ ಅಜ್ಜ ಮಾತುಬಿಟ್ಟಿದ್ದರು. ಆನಂತರ ಸ್ಪಂದನಾ ಸೋಮಣ್ಣ ನಟನೆ ನೋಡಿ ಅಜ್ಜ ಮೆಚ್ಚಿಕೊಂಡರು.