ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Spandana Somanna: ಹಸೆಮಣೆ ಏರಲು ಸಜ್ಜಾದ ಸ್ಪಂದನಾ ಸೋಮಣ್ಣ: ಹೂ ಮುಡಿಸುವ ಶಾಸ್ತ್ರ ಫೋಟೋ ಹಂಚಿಕೊಂಡ ನಟಿ

Spandana Somanna: ಕಿರುತೆರೆ ನಟಿ ಹಾಗೂ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ಭಾವಿ ಪತಿ ವರುಣ್ ಮುನಿರಾಜು (Varun Muniraju) ಜೊತೆಗಿನ 6 ವರ್ಷಗಳ ಪ್ರೀತಿಯ ವಿಚಾರವನ್ನು ಹಂಚಿಕೊಂಡಿರೋದು ಗೊತ್ತೇ ಇದೆ. ಇದೀಗ ನಟಿ ಹೂ ಮುಡಿಸುವ ಶಾಸ್ತ್ರದ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ಪಂದನಾ ಸೋಮಣ್ಣ

ಕಿರುತೆರೆ ನಟಿ ಹಾಗೂ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ಭಾವಿ ಪತಿ ವರುಣ್ ಮುನಿರಾಜು (Varun Muniraju) ಜೊತೆಗಿನ 6 ವರ್ಷಗಳ ಪ್ರೀತಿಯ ವಿಚಾರವನ್ನು ಹಂಚಿಕೊಂಡಿರೋದು ಗೊತ್ತೇ ಇದೆ. ಇದೀಗ ನಟಿ ಹೂ ಮುಡಿಸುವ ಶಾಸ್ತ್ರದ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

ಕೆಂಪು ಮಿಶ್ರಿತ ಹಸರಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ ಸ್ಪಂದನಾ. ಈ ಜೋಡಿಯ ಮದುವೆ ಸಂಭ್ರಮದ ಮೊದಲ ಹಂತವಾಗಿ ʻಹೂ ಮುಡಿಸುವ ಶಾಸ್ತ್ರʼ ಅದ್ದೂರಿಯಾಗಿ ನೆರವೇರಿದೆ.

ಸ್ಪಂದನಾ ಸೋಮಣ್ಣ ತಮ್ಮ ಮದುವೆಯ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಮತ್ತು ಸಸ್ಪೆನ್ಸ್‌ಗಳಿಗೆ ತೆರೆ ಎಳೆದಿದ್ದರು. ವರುಣ್ ಮುನಿರಾಜು (@varun_muniraju) ಎಂಬುವವರನ್ನೇ ಸ್ಪಂದನಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದು, ಇಬ್ಬರೂ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವರುಣ್ ಜೊತೆಗಿನ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿರುವ ಸ್ಪಂದನಾ, ತಮಗಿಬ್ಬರ ನಡುವಿನ 6 ವರ್ಷಗಳ ಸುದೀರ್ಘ ಕಷ್ಟ-ಸುಖಗಳ ಪ್ರೇಮ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಬರೆದುಕೊಂಡಿದ್ದರು.

ಇದನ್ನೂ ಓದಿ: Bigg Boss Kannada 13: ಪತ್ರಕ್ಕಾಗಿ ಕಠಿಣ ಪೈಪೋಟಿ; ತಾಂಡವ್, ಧನುಷ್ ನಡುವೆ ಜಿದ್ದಾಜಿದ್ದಿ!



ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಕಾಲೇಜಿನ ಟೈಮ್​ನಲ್ಲಿ ಮಾತನಾಡಿರಲಿಲ್ಲ. ಆದರೆ ಕೋವಿಡ್​ ಟೈಮ್​ನಲ್ಲಿ ಮಾತನಾಡಿದ್ವಿ. ಅಲ್ಲಿಂದಲೇ ಲವ್​ ಶುರುವಾಯ್ತು ಎಂದಿದ್ದಾರೆ. ಆ ಸಮಯದಲ್ಲಿ ನಾನು ಇಷ್ಟು ಫೇಮಸ್​ ಆಗಿರಲಿಲ್ಲ. ಸೀರಿಯಲ್​ ಹುಡುಕಾಟದಲ್ಲಿ ಇದ್ದೆ. ಆಡಿಷನ್​ ಕೊಡುತ್ತಿದ್ದೆ. ಸ್ಟ್ಯಾಂಡ್​ ಆಗಿರಲಿಲ್ಲ. ಆ ಟೈಮ್​ನಲ್ಲಿ ಲವ್​ ಆಗಿದ್ದು ಎಂದಿದ್ದರು.

ಇದನ್ನೂ ಓದಿ: Bigg Boss Kannada 13: ಮಗಳ ಪತ್ರ ಮತ್ತು ಧ್ವನಿ ಸಂದೇಶ ಸಿಗುತ್ತಿದ್ದಂತೆ ಜಗ್ಗ ಮಮ್ಮಿ ಭಾವುಕ!

ಸ್ಪಂದನಾ ಅವರು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಆರಂಭಿಸಿದರು. ನಂತರ ಕಿರುತೆರೆಯಲ್ಲಿ ನಟಿಸಲು ಅವಕಾಶ ಪಡೆದರು • ಕನ್ನಡದ 'ನಾನು ನನ್ನ ಕನಸು' ಧಾರಾವಾಹಿ ಮೂಲಕ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಬಳಿಕ 'ಗೃಹಪ್ರವೇಶ', 'ಅಭಿಲಾಷಾ' ಸೀರಿಯಲ್‌ಗಳಲ್ಲಿ ನಟಿಸಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ಕರಿಮಣಿ' ಧಾರಾವಾಹಿಯ 'ಸಾಹಿತ್ಯ' ಪಾತ್ರ ಇವರಿಗೆ ದೊಡ್ಡ ಬ್ರೇಕ್ ನೀಡಿತು. ಕನ್ನಡದ 'ಮರೀಚಿ' (2023) ಮತ್ತು 'ದಿಲ್ ಖುಷ್' (2024) ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗಿನ 'ಕರೆನ್ಸಿ ನಗರ್' ಚಿತ್ರದಲ್ಲೂ ಅಭಿನಯಿಸಿದ್ದಾರೆ.

Yashaswi Devadiga

View all posts by this author