ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಫೌಂಡೇಶನ್ ಬಿಡುಗಡೆ ಮಾಡಿರುವ ವಿಶೇಷ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ಭಾರೀ ಗಮನ ಸೆಳೆದಿದೆ.
ತಮ್ಮೂರಿನ ಶಾಲೆಯನ್ನ ಅಭಿವೃದ್ಧಿ ಪಡಿಸಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆಯನ್ನೆ ಅಭಿವೃದ್ಧಿ ಪಡಿಸಿದ್ದಾರೆ. ರಿಷಬ್ ಶೆಟ್ಟಿ ಫೌಂಡೇಶನ್ ಅಂತಲೂ ಮಾಡಿಕೊಂಡಿದ್ದಾರೆ.
ಮಕ್ಕಳು ಮನದ ಮಾತು
ಈ ಒಂದು ಫೌಂಡೇಶನ್ ಮೂಲಕವೇ ಶಾಲೆಯ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಎರಡು ವರ್ಷದ ಸ್ಕಾಲರ್‌ಶಿಪ್ ಕೂಡ ಕೊಡುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್‌ಶಿಪ್ ತುಂಬಾನೆ ಸಹಾಯವಾಗಿದೆ. ರಿಷಬ್ ಶೆಟ್ರ ಅವರ ಫೌಂಡೇಶನ್‌ನಿಂದ ಸ್ಕಾಲರ್‌ಶಿಪ್ ಪಡೆದ ಮಕ್ಕಳು ತಮ್ಮ ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Amruthadhaare Serial: ಮನದರಸಿ ಭೂಮಿಗೆ ಗೌತಮ್ ನಲ್ಮೆಯ ಉಡುಗೊರೆ!
ಖುಷಿನೂ ಹಂಚಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡೆವು. ಮನೆಯ ಸಂಪೂರ್ಣ ಜವಾಬ್ದಾರಿ ತಾಯಿಯ ಮೇಲಿತ್ತು. ಅಂತಹ ಕಷ್ಟದ ಸಮಯದಲ್ಲಿ ರಿಷಬ್ ಶೆಟ್ಟಿ ಸರ್ ನೀಡಿದ ವಿದ್ಯಾರ್ಥಿವೇತನ ನನ್ನ ಶಿಕ್ಷಣ ಮುಂದುವರಿಸಲು ದೊಡ್ಡ ಆಸರೆಯಾಯಿತು" ಎಂದು ಭಾವುಕರಾಗಿ ಹೇಳಿದ್ದಾಳೆ. ತಾವೊಬ್ಬರೇ ಬೆಳೆಯದೇ, ತಮ್ಮ ಊರಿನ ಮಕ್ಕಳ ಭವಿಷ್ಯಕ್ಕೂ ಬೆಳಕು ನೀಡುತ್ತಿದ್ದಾರೆ. ಅವರ ಸಹಾಯ ಅನೇಕ ಕುಟುಂಬಗಳ ಬದುಕು ಬದಲಿಸಿದೆ" ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.ಶಿಕ್ಷಣವು ಕೇವಲ ಜೀವನವನ್ನು ಬದಲಾಯಿಸುವುದಿಲ್ಲ, ಅದು ಜೀವನವನ್ನೇ ರೂಪಿಸುತ್ತದೆ ಎಂದು ಬರೆದುಕೊಂಡಿದೆ.
ಪ್ರಸ್ತುತ ರಿಷಬ್ ಶೆಟ್ಟಿಯವರು 'ಜೈ ಹನುಮಾನ್' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಜೊತೆಗೆ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೂ ಸಿದ್ಧವಾಗುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾದ ಜೊತೆಗೆ ಮರಾಠಿ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಮಿಂಚುತ್ತಿದ್ದಾರೆ. ಸದ್ಯಕ್ಕೆ ತಮ್ಮದೇ ನಿರ್ದೇಶನದ ‘ಕಾಂತಾರ ಚಾಪ್ಟರ್ 2’ ರೂಪಿಸುವ ಕಾರ್ಯದಲ್ಲಿದ್ದಾರೆ.
ಜೊತೆಗೆ ಮಲಯಾಳಂನ ಖ್ಯಾತ ಬರಹಗಾರ ಎಂ.ಟಿ. ವಾಸುದೇವನಾಯರ್ ಅವರ ‘ರಂಡಮೂಳಂ’ ಕೃತಿಯನ್ನು ಸಿನಿಮಾವಾಗಿಸುವ ಮಹೋನ್ನತ ಯೋಜನೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: Toxic: ʼಟಾಕ್ಸಿಕ್ʼ ಚಿತ್ರದ 'ಲೇಡೀಸ್ ಆ್ಯಂಡ್ ಲೇಡೀಸ್' ಟೀಸರ್ ಟೀಕೆಗೆ ಖಡಕ್ ಉತ್ತರ ಕೊಟ್ಟ ಬೆನೆಡಿಕ್ಟ್ ಗ್ಯಾರೆಟ್
‘ರಂಡಮೂಳಂ’ ಅವರ ಮ್ಯಾಗ್ನಂ ಓಪಸ್ ಸಿನಿಮಾ ಆಗಲಿದ್ದು, ಅವರ ತಂಡ ಸಂಶೋಧನಾ ಕೆಲಸದಲ್ಲಿ ನಿರತವಾಗಿದೆ. ಮುಂದೆ ಆದಷ್ಟು ಬೇಗ ಸಿನಿಮಾ ಬರಹದ ಮೂಲಕ ತೆರೆಯ ಮೇಲೆ ಬರುವ ಸಿದ್ಧತೆಯಲ್ಲಿದೆ.