ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Varanasi Movie: ರಾಜಮೌಳಿ 'ವಾರಣಾಸಿ' ಚಿತ್ರಕ್ಕೆ ನೀರಿನ ಸಮಸ್ಯೆ; ಶೂಟಿಂಗ್ ಸ್ಥಗಿತ

Rajamouli : ರಾಜಮೌಳಿ ಅವರ ‘ವಾರಣಾಸಿ’ ಸಿನಿಮಾ ಸಾಕಷ್ಟು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 7ರಂದು ತೆರೆಗೆ ಬರುತ್ತಿದೆ. ಚಿತ್ರದ ಶೂಟಿಂಗ್ ನೀರಿಲ್ಲದೆ ಸ್ಥಗಿತಗೊಂಡಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಮುದ್ರದ ಸೆಟ್ ಹಾಕಲು 150 ಟ್ಯಾಂಕರ್ ನೀರು ಕೇಳಿದ್ದ ಮನವಿಯನ್ನು ಜಲ ಮಂಡಳಿ ತಿರಸ್ಕರಿಸಿದೆ.

ವಾರಣಾಸಿ ಸಿನಿಮಾ

ಖ್ಯಾತ ಚಲನಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ ಅವರ ಬಹು ನಿರೀಕ್ಷಿತ ಸಿನಿಮಾ 'ವಾರಣಾಸಿ' (Varanasi Shooting) ಚಿತ್ರೀಕರಣಕ್ಕೆ ಈಗ ನೀರಿನ ಅಭಾವ ಶುರುವಾಗಿದೆ. ಇದೇ ಕಾರಣಕ್ಕೆ ಚಿತ್ರೀಕರಣ ನಿಲ್ಲಿಸುವಂತಾಗಿದೆ. ಚಿತ್ರೀಕರಣಕ್ಕಾಗಿ 150 ನೀರಿನ ಟ್ಯಾಂಕರ್‌ಗಳ ಬೇಡಿಕೆಯನ್ನು ಹೈದರಾಬಾದ್ ಮಹಾನಗರ ನೀರು ಸರಬರಾಜು ( 150 water tankers needed for underwater shooting) ಮತ್ತು ಒಳಚರಂಡಿ ಮಂಡಳಿ ನಿರಾಕರಿಸಿದೆ ಎಂದು ವರದಿಯಾಗಿದೆ.

ಮಹೇಶ್ ಬಾಬು ಮತ್ತು ಪ್ರಿಯಾಂಕ ಚೋಪ್ರಾ ಚಿತ್ರದ ಚಿತ್ರೀಕರಣವು ಪ್ರಸ್ತುತ ನಗರದ ಹೊರವಲಯದಲ್ಲಿ ನಿರ್ಮಿಸಲಾದ ಸೆಟ್‌ನಲ್ಲಿ ನಡೆಯುತ್ತಿದೆ.

ಇತ್ತೀಚೆಗೆ, 'ವಾರಣಾಸಿ' ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ದುರ್ಗಾ ಆರ್ಟ್ಸ್‌ನ ಪ್ರತಿನಿಧಿಗಳು, ತಲಾ 10,000 ಲೀಟರ್ ಸಾಮರ್ಥ್ಯದ 150 ಟ್ಯಾಂಕರ್‌ಗಳ ನೀರನ್ನು ಕೋರಿ HMWSSB ( ಹೈದರಾಬಾದ್ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಅನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: Trisha Krishnan: ತಿರುಪತಿ ಮೊರೆ ಹೋದ ನಟಿ ತ್ರಿಶಾ; ವಿಜಯ್ ಗೆಲುವಿಗೆ ಪ್ರಾರ್ಥಿಸಿದ್ರಾ?

ನೀರಿನ ತೊಟ್ಟಿಗಳನ್ನು ನಿರ್ಮಿಸಿ ಚಿತ್ರೀಕರಣ

ರಾಜೇಂದ್ರನಗರದ ಗಗನ್‌ಪಹಾದ್‌ನಲ್ಲಿರುವ ಹೈದರಾಬಾದ್ ಫಿಲ್ಮ್ ಸಿಟಿ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ನೀರೊಳಗಿನ ದೃಶ್ಯಗಳ ಚಿತ್ರೀಕರಣಕ್ಕಾಗಿ ಈ ಬೃಹತ್ ಪ್ರಮಾಣದ ನೀರು ಬಳಸಲಾಗಿತ್ತು. ಸಮುದ್ರದಲ್ಲಿ ದೋಣಿಗಳ ಮೇಲೆ ನಡೆಯುವ ಒಂದಷ್ಟು ದೃಶ್ಯಗಳನ್ನು ಸೆಟ್ ಹಾಕಿ ದೊಡ್ಡ ದೊಡ್ಡ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗುತ್ತಿದೆ. ಆ ನೀರಿನ ತೊಟ್ಟಿಗಳಿಗೆ ಸಾಕಷ್ಟು ನೀರು ಬೇಕಿದೆ.

ಬೇಸಿಗೆ ಸಮಯದಲ್ಲಿ ಅಷ್ಟು ಪ್ರಮಾಣದ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ದುಡ್ಡು ಕೊಟ್ಟರೂ ನೀರು ಇಲ್ಲ ಎನ್ನುವಂತಾಗಿದೆ. ಇದೇ ಈಗ ಚಿತ್ರೀಕರಣಕ್ಕೆ ಸಮಸ್ಯೆ ತಂದೊಡ್ಡಿದೆ.

ಕೆಲವು ನೀರೊಳಗಿನ ದೃಶ್ಯಗಳನ್ನು ಚಿತ್ರೀಕರಿಸಲು ಹೈದರಾಬಾದ್ ಫಿಲ್ಮ್ ಸಿಟಿ ಸ್ಟುಡಿಯೋದಲ್ಲಿ ನೀರಿನ ಕೊಳವನ್ನು ನಿರ್ಮಿಸಲಾಗಿದೆ ಎಂದು ಚಲನಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ಈ ದೃಶ್ಯಗಳ ಚಿತ್ರೀಕರಣಕ್ಕಾಗಿ ತಲಾ 10,000 ಲೀಟರ್ ಸಾಮರ್ಥ್ಯದ ಒಟ್ಟು 150 ಟ್ಯಾಂಕರ್‌ಗಳನ್ನು ಪೂರೈಸುವಂತೆ ಅವರು ಜಲಮಂಡಳಿಯನ್ನು ಒತ್ತಾಯಿಸಿದೆ.



ತೀವ್ರ ಬೇಸಿಗೆಯ ಮಧ್ಯೆ, ಹೆಚ್ಚಿದ ನೀರು ಸರಬರಾಜು ಬೇಡಿಕೆ ಮತ್ತು ನಗರದ ವಿವಿಧ ಭಾಗಗಳಿಂದ ನೀರಿನ ಟ್ಯಾಂಕರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, HMWSSB ನೀರು ಸರಬರಾಜು ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿದೆ. 'ವಾರಣಾಸಿ' ತಯಾರಕರು ಬಯಸಿದಂತೆ ನೀರು ಸರಬರಾಜು ಮಾಡಲು ನಿರಾಕರಿಸಿದೆ. ಹೀಗಾಗಿ ಚಿತ್ರತಂಡ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.

ಇದನ್ನೂ ಓದಿ: Mamata Banerjee: ಸಿನಿಮಾಕ್ಕೆ ಕೂಡ ಹರಕೆ ಹೊತ್ತಿರಲಿಲ್ಲ, ಆದ್ರೆ ಮಮತಾ ಬ್ಯಾನರ್ಜಿ ಸೋಲಬೇಕು; ಒಳ್ಳೆ ಹುಡುಗ ಪ್ರಥಮ್

ಒಂದು ಹಂತದ ಶೂಟ್ ವಿಳಂಬ ಆಯಿತು ಎಂದರೆ, ಮುಂದಿನ ಹಂತದ ಶೂಟ್​ ಕೂಡ ತಡವಾಗುತ್ತವೆ. ಇದು ಮಹೇಶ್ ಬಾಬೂ ಹಾಗೂ ರಾಜಮೌಳಿ ಅಭಿಮಾನಿಗಳಿಗೆ ಆತಂಕ ತಂದಿದೆ. ಹೀಗೆ ಸಾಗಿದರೆ ಸಿನಿಮಾ ರಿಲೀಸ್ ವಿಳಂಬ ಆಗಬಹುದು ಎಂದು ಆತಂಕ ಹೊರಹಾಕಲಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಪ್ರಿಯಾಂಕಾ ಚೋಪ್ರಾ ಹಾಗೂ ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Yashaswi Devadiga

View all posts by this author