ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರಿದ 'ಸು ಫ್ರಮ್ ಸೋ’ ನಟ ಜೆಪಿ ತುಮ್ಮಿನಾಡು!

J. P. Thuminad: ಜೆಪಿ ಅವರು ರಶ್ಮಿಕಾ ಎಂಬ ಹೆಸರಿನ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ದ್ದಾರೆ. ಮಂಗಳೂರಿನಲ್ಲಿ ಮದುವೆ ಸಮಾರಂಭ ನಡೆದಿದ್ದು ಆಪ್ತರು ಹಾಗೂ ಕುಟುಂಬದವರ ಜೊತೆ ಮದುವೆ ಕಾರ್ಯಕ್ರಮ ನಡೆದಿದೆ‌. 14 ವರ್ಷಗಳಿಂದ ಈ ಜೋಡಿಯೂ ಪರಸ್ಪರ ಪ್ರೀತಿಸುತ್ತಿದ್ದು ಇದೀಗ ಸಿಂಗಲ್ ಲೈಫ್ ಗೆ ಗುಡ್ ಬೈ ಹೇಳಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸು ಫ್ರಮ್ ಸೋ’ ನಟ ಜೆಪಿ ತುಮ್ಮಿನಾಡು!

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸು ಫ್ರಮ್ ಸೋ’ ನಟ -

Profile
Pushpa Kumari May 6, 2026 4:50 PM

ಮಂಗಳೂರು,ಮೆ 6: 'ಸು ಫ್ರಮ್ ಸೋ’ (Su From So Movie) ಸಿನಿಮಾ ಹೆಸರು ಕೇಳುವಾಗಲೇ ಸಿನಿಪ್ರಿಯರ ಮೊಗದಲ್ಲೊಂದು ನಗೆಯ ಕಚಗುಳಿ ಇಡುತ್ತದೆ. ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಗಿಟ್ಟಿಸಿಕೊಂಡಿತ್ತು.ರಾಜ್‌ ಬಿ ಶೆಟ್ಟಿ ನಿರ್ಮಾಣದ ಈ ಚಿತ್ರವನ್ನು ಜೆಪಿ ತುಮ್ಮಿನಾಡು (J. P. Thuminad) ನಿರ್ದೇಶಿಸಿ ನಟಿಸಿದ್ದರು. ಈ ಚಿತ್ರದ ಸಕ್ಸಸ್ ನಡುವೆ ಬ್ರೇಕ್ ಪಡೆದು ಜೆಪಿ ತುಮ್ಮಿನಾಡು ಇದೀಗ ಹಸಮಣೆ ಏರಿದ್ದಾರೆ. ತಮ್ಮ ಪ್ರೇಯಸಿ ರಶ್ಮಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟಿದ್ದು ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಜೆಪಿ ಅವರು ರಶ್ಮಿಕಾ ಎಂಬ ಹೆಸರಿನ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಮದುವೆ ಸಮಾರಂಭ ನಡೆದಿದ್ದು ಆಪ್ತರು ಹಾಗೂ ಕುಟುಂಬದವರ ಜೊತೆ ಮದುವೆ ಕಾರ್ಯಕ್ರಮ ನಡೆದಿದೆ‌. 14 ವರ್ಷಗಳಿಂದ ಈ ಜೋಡಿಯೂ ಪರಸ್ಪರ ಪ್ರೀತಿಸುತ್ತಿದ್ದು ಇದೀಗ ಸಿಂಗಲ್ ಲೈಫ್ ಗೆ ಗುಡ್ ಬೈ ಹೇಳಿದ್ದಾರೆ. ತುಳು ರಂಗಭೂಮಿಯಲ್ಲಿ ಜೆಪಿ ಅವರು ನಟಿಸಿ ಖ್ಯಾತಿ ಪಡೆದಿದ್ದರು. ಅದೇ ಸಮಯದಲ್ಲಿ ರಶ್ಮಿಕಾ ಎಂಬ ಯುವತಿಯ ಪರಿಚಯ ಆಗಿ ಇಬ್ಬರು ಪ್ರೀತಿಸುತ್ತಿದ್ದರು.

Rudra Kala Movie: ʻದೂಧ್ ಪೇಡಾʼ ದಿಗಂತ್ ಹೊಸ ಸಿನಿಮಾಗೆ ʻಸ್ಟಾರ್‌ʼ ನಟಿ ಸಮಂತಾ ಸಾಥ್

ನಟ ಪ್ರಕಾಶ್ ತುಮ್ಮಿನಾಡು ಸೇರಿದಂತೆ ಆಪ್ತರು, ಗಣ್ಯರು ಹಾಗೂ ಕುಟುಂಬ ಸದಸ್ಯರು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.ಕಳೆದೆರಡು ದಿನಗಳಿಂದ ಮೆಹೆಂದಿ ಮದುವೆ ಶಾಸ್ತ್ರ ಗಳು ಅದ್ದೂರಿಯಾಗಿ ನಡೆದಿದ್ದು ಇಂದು ವಿವಾಹ ನೆರವೇರಿದೆ. ಇಬ್ಬರ ಮದುವೆ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಪ್ರೀತಿಯಿಂದ ಶುಭ ಹಾರೈಸಿದ್ದು ಮುದ್ದಾದ ಜೋಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸು ಪ್ರಮ್ ಸೋ ಚಿತ್ರದಲ್ಲಿರೋ ಅಶೋಕ ಅನ್ನುವ ರೋಲ್ ಮಾಡುವ ಮೂಲಕ ತುಮ್ಮಿನಾಡ್ ಅವರು ಮೆಚ್ಚುಗೆ ಪಡೆದಿದ್ದಾರೆ. ಕರಾವಳಿ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಇವರು ಹಾಸ್ಯ ನಾಟಕಗಳನ್ನ ಬರೆದಿದ್ದಾರೆ. ಸಪ್ತ ಸಾಗರದಾಚೆ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ ಚಿತ್ರದಲ್ಲೂ ಜೆಪಿ ಕೆಲಸ ಮಾಡಿದ್ದಾರೆ. ಇನ್ನು ಸು ಪ್ರಮ್ ಸೋ ಸಿಂಪಲ್ ಕಥೆಯನ್ನು ಎಲ್ಲಾ ವರ್ಗದ ಪ್ರೇಕ್ಷಕರನ್ನು ಗಮನ ಸೆಳೆಯುವಂತೆ ನಿರ್ದೇಶನ ಮಾಡಿದ್ದು ಹಲವು ನಟ ನಟಿಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.