ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Su from So OTT Release Update: ಒಟಿಟಿಗೆ ಎಂಟ್ರಿ ಕೊಡಲು ಸುಲೋಚನಾ ಸಜ್ಜು; ʼಸು ಫ್ರಮ್‌ ಸೋʼ ಎಲ್ಲಿ, ಯಾವಾಗ ಸ್ಟ್ರೀಮಿಂಗ್‌?

Su from So Movie: ಕಳೆದ ತಿಂಗಳು ತೆರೆಕಂಡ ಸು ಫ್ರಮ್‌ ಸೋ ಚಿತ್ರ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸಿದೆ. ಕರಾವಳಿ ಪ್ರತಿಭೆಗಳೇ ಸೇರಿ ಮಾಡಿದ, ಕರಾವಳಿ ಮಣ್ಣಿನ ಕಥೆಯಾದರೂ ರಾಜ್ಯಾದ್ಯಂತ ಪರೇಕ್ಷಕರ ಗಮನ ಸೆಳೆದಿದೆ. ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್‌ನತ್ತ ಮುನ್ನುಗ್ಗುತ್ತಿರುವ ಈ ಚಿತ್ರದ ಒಟಿಟಿ ರಿಲೀಸ್‌ ಬಗ್ಗೆ ವದಂತಿ ಹಬ್ಬಿದೆ.

ಒಟಿಟಿಗೆ ಎಂಟ್ರಿ ಕೊಡಲು ʼಸು ಫ್ರಮ್‌ ಸೋʼ ಸಜ್ಜು; ಎಲ್ಲಿ ಸ್ಟ್ರೀಮಿಂಗ್‌?

Ramesh B Ramesh B Aug 6, 2025 3:39 PM

ಬೆಂಗಳೂರು: ಸದ್ಯ ಎಲ್ಲಿ ನೋಡಿದರೂ ಸುಲೋಚನಾಳದ್ದೇ ಹವಾ. ಸ್ಯಾಂಡಲ್‌ವುಡ್‌ ಬಿಡಿ ಪರಭಾಷಿಕರೂ ಸೋಮೇಶ್ವರದ ಸುಲೋಚನಾ ಮೋಡಿಗೆ ಒಳಗಾಗಿದ್ದಾರೆ. ಪರಿಣಾಮವಾಗಿ ಸೋತು ಸೊರಗಿದ್ದ ಕನ್ನಡ ಚಿತ್ರರಂಗ ಗೆಲುವಿನತ್ತ ಮುಖ ಮಾಡಿದೆ. ಕರಾವಳಿ ಪ್ರತಿಭೆಗಳ ಕನಸಿನ ಕೂಸು ʼಸು ಫ್ರಮ್‌ ಸೋʼ ಅರ್ಥಾತ್‌ ಸುಲೋಚನಾ ಫ್ರಮ್‌ ಸೋಮೇಶ್ವರ ಚಿತ್ರ (Su From So Movie). ಯಾವುದೇ ಅಬ್ಬರದ ಪ್ರಚಾರವಿಲ್ಲದೆ ತೆರೆಗೆ ಬಂದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ಚಿತ್ರದ ಮಲಯಾಳಂ ಆವೃತ್ತಿಯೂ ರಿಲೀಸ್‌ ಆಗಿದ್ದು, ಕೇರಳದಲ್ಲಿಯೂ ಗಮನ ಸೆಳೆಯುತ್ತಿದೆ. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ (Su from So OTT Release Update). ಯಾವಾಗ, ಎಲ್ಲಿ ಸ್ಟ್ರೀಮಿಂಗ್‌ ಎನ್ನುವ ಮಾಹಿತಿ ಇಲ್ಲಿದೆ.

2019ರಲ್ಲಿ ರಿಲೀಸ್‌ ಆದ ʼಕಟಪಾಡಿ ಕಟ್ಟಪ್ಪʼ ತುಳು ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಜೆ.ಪಿ. ತುಮಿನಾಡ್‌ (J.P. Tuminad) ಇದೀಗ ʼಸು ಫ್ರಂ ಸೋʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಗಮನ ಸೆಳೆದಿದ್ದಾರೆ. ನಿರ್ದೇಶನದ ಜತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್‌ನತ್ತ ಸಾಗಿರುವ ʼಸು ಫ್ರಮ್‌ ಸೋʼ ಒಟಿಟಿಗೆ ಯಾವಾಗ ಕಾಲಿಡಲಿದೆ ಎನ್ನುವ ಚರ್ಚೆ ಆರಂಭವಾಗಿದೆ.

ಈ ಸುದ್ದಿಯನ್ನೂ ಓದಿ: Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್‌ ಸೋʼ ಮ್ಯಾಜಿಕ್‌; ಗೆಲುವಿಗೆ ಕಾರಣವೇನು?

ಮೂಲಗಳ ಪ್ರಕಾರ ಸ್ಟೆಂಬರ್‌ನಲ್ಲಿ ʼಸು ಪ್ರಮ್‌ ಸೋʼ ಒಟಿಟಿಗೆ ಕಾಲಿಡಲಿದೆ. ಟ್ರೇಡ್‌ ಅನಾಲಿಸ್ಟ್‌ ರಮೇಶ್‌ ಬಾಲ ಪ್ರಕಾರ ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆಯಂತೆ. ಅದಾಗ್ಯೂ ಯಾವ ದಿನಾಂಕ ಮತ್ತು ಯಾವ ಫ್ಲಾಟ್‌ಫಾರ್ಮ್‌ ಎನ್ನುವುದು ತಿಳಿದುಬಂದಿಲ್ಲ. ʼʼಸಾಮಾನ್ಯವಾಗಿ ರಿಲೀಸ್‌ಗೆ ಮುಂಚಿತವಾಗಿ ಕನ್ನಡ ಚಿತ್ರಗಳ ಹಕ್ಕು ಮಾರಾಟವಾಗುವುದಿಲ್ಲ. ಇದೀಗ ಈ ಚಿತ್ರ ಸೂಪರ್‌ ಹಿಟ್‌ ಆಗಿರುವುದಿಂದ ಬೇಡಿಕೆ ಕಂಡು ಬಂದಿದೆ ಎನ್ನಲಾಗಿದೆ. ಥಿಯೇಟರ್‌ನಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಬಳಿಕ ಒಟಿಟಿಗೆ ಬರಲಿದೆʼʼ ಎಂದು ಹೇಳಿದ್ದಾರೆ.

ಅದಾಗ್ಯೂ ಚಿತ್ರತಂಡ ಈ ಬಗ್ಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಮೂಲಗಳ ಪ್ರಕಾರ, ಒಟಿಟಿ ಹಕ್ಕನ್ನು ಪ್ರೈಮ್‌ ವಿಡಿಯೊ ವಿಡಿಯೊ ಪಡೆದುಕೊಂಡಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಹೊರ ಬೀಳಲಿದೆ.

ಜು. 25ರಂದು ರಿಲೀಸ್‌ ಆದ ಈ ಚಿತ್ರ ಈಗಾಗಲೇ 30 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ರಾಜ್ಯಾದ್ಯಂತ ವಾರದ ದಿನಗಳಲ್ಲಿಯೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಆಗಸ್ಟ್‌ 1ರಂದು ಮಲಯಾಳಂನಲ್ಲಿ ತೆರೆಕಂಡಿದ್ದು, ಆಗಸ್ಟ್‌ 8ರಂದು ತೆಲುಗು ಡಬ್‌ ಬಿಡುಗಡೆಯಾಗಲಿದೆ.

ವಿದೇಶದಲ್ಲೂ ಸೂಪರ್‌ ಹಿಟ್‌

ವಿಶೇಷ ಎಂದರೆ ವಿದೇಶದಲ್ಲೂ ʼಸು ಫ್ರಮ್‌ ಸೋʼ ಹವಾ ಎಬ್ಬಿದೆ. ವಿವಿಧ ದೇಶಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಿ ಸುಮಾರು 4.38 ಕೋಟಿ ರೂ. ಗಳಿಸಿದೆ. ಶಶಿಧರ್‌ ಶೆಟ್ಟಿ, ರವಿ ರೈ ಜತೆ ಸೇರಿ ರಾಜ್‌ ಬಿ. ಶೆಟ್ಟಿ ನಿರ್ಮಿಸುವ ಜತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಮುಖ್ಯ ಪಾತ್ರಗಳಲ್ಲಿ ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್‌, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಸೇರಿದಂತೆ ಬಹುತೇಕ ಕರಾವಳಿ ಕಲಾವಿದರೇ ಬಣ್ಣ ಹಚ್ಚಿದ್ದಾರೆ. ಇದು ಹಿಂದಿಗೂ ರಿಮೇಕ್‌ ಆಗುವ ಸಾಧ್ಯತೆ ಇದೆ.