ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪರಸ್ಪರ ಚುಂಬಿಸಿಕೊಂಡು ನವರಾತ್ರಿ ಉತ್ಸವದಲ್ಲಿ ಗರ್ಬಾ ನೃತ್ಯ ಮಾಡಿದ ಎನ್‌ಆರ್‌ಐ ದಂಪತಿ; ವೈರಲ್ ಆಯ್ತು ವಿಡಿಯೊ

ದೇಶಾದ್ಯಂತ ನವರಾತ್ರಿ ಉತ್ಸವವನ್ನು ವಿಜೃಂಭನೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬದ ದುರ್ಗಾ ಪೂಜೆಯಂದು ವಿಶೇಷವಾಗಿ ಉತ್ತರ ಭಾರತದ ಕಡೆ ದಾಂಡಿಯಾ, ಗರ್ಬಾ ನೃತ್ಯಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿಯ ನವರಾತ್ರಿ ಉತ್ಸವ ಕೂಡಾ ದೇಶಾದ್ಯಂತ ಅದ್ಧೂರಿಯಾಗಿ ನಡೆಯುತ್ತಿದ್ದು, ಗರ್ಬಾ ಡಾನ್ಸ್‌ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ವಿದೇಶಿ ಜೋಡಿಯೊಂದು ಪರಸ್ಪರ ಚುಂಬಿಸಿಕೊಂಡು ಗರ್ಬಾ ನೃತ್ಯ ಮಾಡಿದೆ.

ಗರ್ಬಾ ಡ್ಯಾನ್ಸ್ ವೇಳೆ ಸರಸವಾಡಿದ ಜೋಡಿ

ಘಟನೆಯ ದೃಶ್ಯ -

Profile Sushmitha Jain Sep 29, 2025 11:18 PM

ಗಾಂಧಿನಗರ: ಗುಜರಾತ್‌ನ (Gujarat) ವಡೋದರಾದ (Vadodara) ಕಲಾಲಿ ಮೈದಾನದಲ್ಲಿ ನವರಾತ್ರಿ (Navratri) ಪ್ರಯುಕ್ತ ಸೆಪ್ಟೆಂಬರ್ 26ರ ರಾತ್ರಿ ನಡೆದ ಯುನೈಟೆಡ್ ವೇ ಗರ್ಬಾ (United Way Garba) ಕಾರ್ಯಕ್ರಮದಲ್ಲಿ ಎನ್‌ಆರ್‌ಐ ದಂಪತಿ ಚುಂಬಿಸಿರುವ (NRI Couple Kissing) ವಿಡಿಯೊ ವೈರಲ್ ಆಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಜನರು ಇದನ್ನು ನವರಾತ್ರಿಯ ಧಾರ್ಮಿಕ ಮಹತ್ವಕ್ಕೆ ಅಗೌರವ ಎಂದು ಖಂಡಿಸಿದ್ದಾರೆ.

ಗರ್ಬಾ ಕಾರ್ಯಕ್ರಮದಲ್ಲಿ ಪ್ರತೀಕ್ ಪಟೇಲ್ ಎಂಬಾತ ತನ್ನ ಪತ್ನಿಯನ್ನು ಎತ್ತಿಹಿಡಿದು ಗುಂಪಿನ ಮುಂದೆ ಚುಂಬಿಸಿದ್ದು, ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಡಿದೆ. ಪ್ರತೀಕ್ ಮಂಜಲ್‌ಪುರದವರಾದರೆ, ಅವರ ಪತ್ನಿ ಆನಂದ್ ಮೂಲದವರು. ಈ ದಂಪತಿ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ 16 ವರ್ಷಗಳಿಂದ ವಾಸಿಸುತ್ತಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಅವರು ವಡೋದರಾಕ್ಕೆ ಪ್ರತೀಕ್‌ ಅವರ ಪೋಷಕರನ್ನು ಭೇಟಿಯಾಗಲು ಮತ್ತು ಗರ್ಬಾ ಉತ್ಸವದಲ್ಲಿ ಭಾಗವಹಿಸಲು ಬಂದಿದ್ದರು.



ಈ ಘಟನೆಯ ಬಗ್ಗೆ ಅಟ್ಲಾದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಪೊಲೀಸರು ದಂಪತಿಗಳನ್ನು ಠಾಣೆಗೆ ಕರೆಸಿದ್ದು, ಅವರು ತಮ್ಮ ಕೃತ್ಯಕ್ಕೆ ಕ್ಷಮಾಪತ್ರ ಬರೆದುಕೊಟ್ಟಿದ್ದಾರೆ. “ಗರ್ಬಾ ನಡೆಯುವ ಸ್ಥಳವು ನವರಾತ್ರಿಯಲ್ಲಿ ಪವಿತ್ರವಾಗಿರುತ್ತದೆ. ತಪ್ಪಾಯಿತು” ಎಂದು ಒಪ್ಪಿಕೊಂಡಿದ್ದಾರೆ. ದೂರಿನ ನಂತರ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅವರು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ.

ಈ ಸುದ್ದಿಯನ್ನು ಓದಿ: Viral News: 10 ಕೆಜಿ ಚಿನ್ನದಿಂದ ತಯಾರಾಗಿದೆ ವಿಶ್ವದ ಅತ್ಯಂತ ದುಬಾರಿ 'ದುಬೈ ಉಡುಗೆ’; ಇದರ ಬೆಲೆ ಎಷ್ಟು ಗೊತ್ತೆ?

ಈ ದಂಪತಿ ಕಳೆದ ವರ್ಷದ ಯುನೈಟೆಡ್ ವೇ ಗರ್ಬಾದಲ್ಲೂ ಇದೇ ರೀತಿ ಸಾರ್ವಜನಿಕವಾಗಿ ಚುಂಬಿಸಿದ್ದಾರೆ ಎಂಬ ಹೊಸ ವಿಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಮುಂಬೈಯ ಗೇಟ್‌ವೇ ಆಫ್ ಇಂಡಿಯಾ ಬಳಿಯೂ ಇಂತಹ ಕೃತ್ಯದ ವಿಡಿಯೊ ಇದೆ. ಇದು ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ.

ಯುನೈಟೆಡ್ ವೇ ಗರ್ಬಾ ವಿಶ್ವದ ಅತಿದೊಡ್ಡ ನವರಾತ್ರಿ ಉತ್ಸವಗಳಲ್ಲಿ ಒಂದು. ಪ್ರತಿದಿನ 30,000–35,000 ಜನರು, ಎನ್‌ಆರ್‌ಐಗಳು ಸೇರಿದಂತೆ ಹಲವರು ಭಾಗವಹಿಸುತ್ತಾರೆ. ಈ ಘಟನೆ ಸಾಂಸ್ಕೃತಿಕ ಸಂವೇದನೆಯ ಕುರಿತು ಚರ್ಚೆಗೆ ಕಾರಣವಾಗಿದೆ. “ಧಾರ್ಮಿಕ ಉತ್ಸವದಲ್ಲಿ ಇಂತಹ ವರ್ತನೆ ತಪ್ಪು” ಎಂದು ಜನರು ಆಕ್ಷೇಪಿಸಿದ್ದಾರೆ.