ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾದ ಮೊದಲ ದಿನವೇ ಬಿಗ್ ಟ್ವಿಸ್ಟ್ ನೀಡಲಾಗಿದೆ. ಡೊಡ್ಮನೆಯೊಳಗೆ ಕಾಲಿಟ್ಟ ಅತ್ಯಂತ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಒಂಟಿ ತಂಡದ ಒಮ್ಮತದ ನಿರ್ಧಾರದಿಂದ ರಕ್ಷಿತಾ ಬಿಗ್ ಬಾಸ್ನಿಂದ ಹೊರ ಬಿದ್ದಿದ್ದಾರೆ.

ಬಿಗ್ ಬಾಸ್​ನಿಂದ ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ

Rakshitha Eliminated -

Profile Vinay Bhat Sep 29, 2025 9:57 PM

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾದ ಮೊದಲ ದಿನವೇ ಬಿಗ್ ಟ್ವಿಸ್ಟ್ ನೀಡಲಾಗಿದೆ. ಡೊಡ್ಮನೆಯೊಳಗೆ ಕಾಲಿಟ್ಟ ಅತ್ಯಂತ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಒಂಟಿ ತಂಡದ ಒಮ್ಮತದ ನಿರ್ಧಾರದಿಂದ ರಕ್ಷಿತಾ ಬಿಗ್ ಬಾಸ್​ನಿಂದ ಹೊರ ಬಿದ್ದಿದ್ದಾರೆ.

ಈಗಾಗಲೇ ಹೇಳಿರುವಂತೆ ಬಿಗ್ ಬಾಸ್​ ಮನೆಯಲ್ಲಿ ಎರಡು ತಂಡಗಳಿವೆ ಒಂದು ಒಂಟಿ ಮತ್ತೊಂದು ಜಂಟಿ.. ಆದರೆ, ಕೊನೆಯದಾಗಿ ಬಂದ ಸ್ಪರ್ಧಿಗಳಾದ ಸ್ಪಂದನಾ, ರಕ್ಷಿತಾ ಹಾಗೂ ಗಾಯಕ ಮಾಳು ಯಾವುದೇ ತಂಡ ಸೇರಿಕೊಳ್ಳಲಾಗಿಲ್ಲ. ಹೀಗಾಗಿ ಬಿಗ್ ಬಾಸ್ ದೊಡ್ಡ ನಿರ್ಧಾರ ತೆಗೆದುಕೊಂಡರು.

ಸ್ಪಂದನಾ, ರಕ್ಷಿತಾ ಹಾಗೂ ಮಾಳು ಪೈಕಿ ಇಬ್ಬರು ಜಂಟಿ ಆಗಬೇಕಿದೆ. ಹೀಗಾಗಿ ಮೂವರಲ್ಲಿ ಒಬ್ಬರನ್ನು ಮನೆಯಿಂದ ಹೊರಹಾಕಬೇಕು ಎಂದು ಹೇಳಿದ್ದಾರೆ. ಈ ನಿರ್ಧಾರವನ್ನು ಒಂಟಿ ಸದಸ್ಯರಾದ ಅಶ್ವಿನಿ ಗೌಡ, ಸುಧಿ, ಧನುಶ್, ಜಾಹ್ನಿ, ಮಲ್ಲಮ್ಮ ಹಾಗೂ ಧ್ರುವಂತ್ ತೆಗೆದುಕೊಳ್ಳಬೇಕು. ಅದರಂತೆ ಇವರು ಒಮ್ಮತದ ನಿರ್ಧಾರ ತೆಗೆದುಕೊಂಡು ರಕ್ಷಿತಾ ಅವರನ್ನು ಹೊರಹಾಕಿದ್ದಾರೆ.