ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Su From So: ಸು ಫ್ರಮ್ ಸೋ ಸಿನಿಮಾ ಒಟಿಟಿ ಡೇಟ್ ಫೇಕ್- ಹಾಟ್ ಸ್ಟಾರ್ ಸ್ಪಷ್ಟನೆ ಏನು?

'Su From So' OTT Release: ಸು ಫ್ರಮ್ ಸೋ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ ಎಂಬ ಸುದ್ದಿ ಕೂಡ ಹರಿದಾಡಿದ್ದು ಇದರ ಬೆನ್ನಲ್ಲೆ ಈ ಸಿನಿಮಾ ಅತೀ ಶೀಘ್ರದಲ್ಲಿ ಒಟಿಟಿಗೆ ಬರುತ್ತದೆ ಎಂಬ ಸುದ್ದಿ ಸೋಶಿ ಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಮೂಲಕ ಸೆಪ್ಟೆಂಬರ್ 5ರಂದು ಜಿಯೋ ಹಾಟ್ ಸ್ಟಾರ್ ನಲ್ಲಿ ಈ ಸಿನಿಮಾ ಶೀಘ್ರವೇ ತೆರೆಕಾಣುತ್ತದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಇದುವರೆಗೂ ಜಿಯೋ ಹಾಟ್ ಸ್ಟಾರ್ ನಲ್ಲಿ ಯಾವುದೆ ಅಧಿಕೃತ ಮಾಹಿತಿ ಬಂದಿಲ್ಲ.

ಸು ಫ್ರಮ್ ಸೋ’ ಸಿನಿಮಾ

ಬೆಂಗಳೂರು: ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಿಗೆ ಯಶಸ್ಸು ನೀಡಿದ್ದ ಸು ಫ್ರಮ್ ಸೋ (Su From So Kannada Movie) ಸಿನಿಮಾ ಬಹುಸಂಖ್ಯಾತ ಪ್ರೇಕ್ಷಕರ ವರ್ಗದ ಮನಗೆದ್ದಿದ್ದಾರೆ. ಬಹುತೇಕ ಹೊಸ ಬರೇ ಸೇರಿಕೊಂಡು ಮಾಡಿದ್ದ ಈ ಸಿನಿಮಾ ತನ್ನ ವಿಭಿನ್ನ ಕಥೆ ಹಾಗೂ ಕಾಮಿಡಿಯಿಂದಲೇ ರಾಜ್ಯಾದ್ಯಂತ ಬಿಡುಗಡೆಯಾಗಿ ಬಳಿಕ ಮಲಯಾಳಂ ಸೇರಿದಂತೆ ಇತರ ಭಾಷೆಯಲ್ಲೂ ರಿಲೀಸ್ ಆಗಿದೆ. ಜುಲೈ ನಲ್ಲಿ ಈ ಸಿನಿಮಾ ತೆರೆಕಂಡರು ಕೂಡ ಸೆಪ್ಟೆಂಬರ್‌ವರೆಗೂ ಕೂಡ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಾ ಬಂದಿದೆ‌.

ಸು ಫ್ರಮ್ ಸೋ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ ಎಂಬ ಸುದ್ದಿ ಕೂಡ ಹರಿದಾಡಿದ್ದು ಇದರ ಬೆನ್ನಲ್ಲೆ ಈ ಸಿನಿಮಾ ಅತೀ ಶೀಘ್ರದಲ್ಲಿ ಒಟಿಟಿಗೆ ಬರುತ್ತದೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಮೂಲಕ ಸೆಪ್ಟೆಂಬರ್ 5ರಂದು ಜಿಯೋ ಹಾಟ್ ಸ್ಟಾರ್ ನಲ್ಲಿ ಈ ಸಿನಿಮಾ ಶೀಘ್ರವೇ ತೆರೆಕಾಣುತ್ತದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಇದುವರೆಗೂ ಜಿಯೋ ಹಾಟ್ ಸ್ಟಾರ್ ನಲ್ಲಿ ಯಾವುದೆ ಅಧಿಕೃತ ಮಾಹಿತಿ ಬಂದಿಲ್ಲ ಎಂದೆ ಹೇಳಬಹುದು. ಹಾಗಾದರೆ ಈ ಸಿನಿಮಾ ಯಾವಾಗ ಒಟಿಟಿಗೆ ಬರುತ್ತೆ ಎಂಬ ಅನುಮಾನ ಪ್ರೇಕ್ಷಕರಿಗೆ ಮೂಡುವಂತಾಗಿದೆ.

ಸು ಫ್ರಮ್ ಸೋ ಸಿನಿಮಾಕ್ಕೆ ಜಾಹೀರಾತು ಇತರ ಪ್ರಚಾರ ಬಹಳ ಕಮ್ಮಿ ಇತ್ತು. ಆದರೆ ಫ್ರಿಮಿಯಂ ಶೋ ಮೂಲಕ ಜನರ ಬಾಯ್ ಮಾತಿನಿಂದಲೇ ಈ ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ಸು ಪಡೆ ಯಿತು. ಒಟಿಟಿಗೆ ಶೀಘ್ರವೇ ಬರುತ್ತೆ ಎಂದು ಸಹ ಹೇಳಲಾಗಿತ್ತು. ವೈರಲ್ ಆದ ಸುದ್ದಿಯ ಪ್ರಕಾರ ಸೆಪ್ಟೆಂಬರ್ 5ರ ಬೆಳಗ್ಗೆ ಈ ಸಿನಿಮಾ ಜಿಯೋ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಆಗಲಿಲ್ಲ. ಜೊತೆಗೆ ಹಾಟ್ ಸ್ಟಾರ್ ಕೂಡ ಈ ಬಗ್ಗೆ ಯಾವುದೇ ಪ್ರಮೋಶನ್ ಸಹ ನೀಡಿಲ್ಲದ ಕಾರಣ ಈ ಸಿನಿಮಾ ಇನ್ನು ಕೂಡ ಒಟಿಟಿಗೆ ಬರಲಿಲ್ಲ ಎಂದೇ ಹೇಳಬಹುದು.

ಯಾವುದಾದರೂ ಸಿನಿಮಾ ದೊಡ್ಡಮಟ್ಟಿಗೆ ನಿರೀಕ್ಷೆ ಹುಟ್ಟು ಹಾಕಿದರೆ ಅದರ ಒಟಿಟಿ ಹಾಗೂ ಟಿವಿ ಪ್ರಸಾರಕ್ಕೆ ಹಕ್ಕು ಸ್ವಾಮ್ಯ ಕೂಡ ದೊಡ್ಡ ಮಟ್ಟಕ್ಕೆ ಮಾರಾಟ ಆಗಲಿದೆ. ಅಂತೆಯೇ ಈ ಸಿನಿಮಾ ಈಗಾಗಲೇ ಜಿಯೋ ಹಾಟ್ ಸ್ಟಾರ್ ಪಡೆದದ್ದೇ ಹೌದಾದರೆ ಅದು ದೊಡ್ಡ ಮಟ್ಟಿಗೆ ಸುದ್ದಿಯಾಗ ಬೇಕಿತ್ತು. ಆದರೆ ಈ ಸುದ್ದಿ ಗಾಸಿಪ್ ಆಗಿ ಮಾತ್ರ ಉಳಿದಿದೆ ಹೊರತು ಅದಕ್ಕೆ ಯಾವುದೇ ನಿರ್ದಿಷ್ಟ ಪುರಾವೆ ಇಲ್ಲ ಎಂದೇ ಹೇಳಬಹುದು. ಒಟಿಟಿ ಪ್ಲಾಟ್​ಫಾರ್ಮ್​ ಗೆ ಯಾವುದೇ ಸಿನಿಮಾ ಬರುವು ದಾದರು ಮೊದಲೇ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಆನ್ಲೈನ್ ಫ್ಲ್ಯಾಟ್ ಫಾರ್ಮ್ ಅವರಿಂದ ಮಾಹಿತಿ ನೀಡಲಾಗುತ್ತದೆ. ‘ಸು ಫ್ರಮ್ ಸೋ’ ಸಿನಿಮಾ ವಿಚಾರದಲ್ಲಿ ಜಿಯೋ ಹಾಟ್​ಸ್ಟಾರ್ ಈ ಬಗ್ಗೆ ಯಾವುದೇ ಅಪ್​​ಡೇಟ್ ನೀಡಿಲ್ಲ.

ಇದನ್ನು ಓದಿ:Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!

ಸೆಪ್ಟೆಂಬರ್​ನಲ್ಲಿ ಯಾವೆಲ್ಲ ಸಿನಿಮಾ, ವೆಬ್ ಸೀರಿಸ್ ಹಾಗೂ ಶೋಗಳು ಬಿಡುಗಡೆ ಆಗುತ್ತಿವೆ ಎಂಬ ಬಗ್ಗೆ ಹಾಟ್​ಸ್ಟಾರ್ ಈಗಾಗಲೇ ಮಾಹಿತಿ ನೀಡಿದೆ. ಆದರೆ, ಇದರಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸದ್ಯಕ್ಕೆ ಜಿಯೋ ಹಾಟ್ ಸ್ಟಾರ್ ನಲ್ಲಿ ಸು ಫ್ರಾಂ ಸೋ ಸಿನಿಮಾ ಬಿಡುಗಡೆಯಾಗಲಾರದು ಎಂದೇ ಹೇಳಬಹುದಾಗಿದೆ.

ರಾಜ್ ಬಿ ಶೆಟ್ಟಿ ನಿರ್ಮಿಸಿ ನಟಿಸಿದ್ದ 'ಸು ಫ್ರಮ್ ಸೋ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದೆ‌. ಇದುವರೆಗೆ ಈ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಸ್ಟಾರ್ ನಟರಿಲ್ಲದಿದ್ದರೂ, ಹೆಚ್ಚು ಪ್ರಚಾರ ಮಾಡದೆಯೂ ಕಡಿಮೆ ಬಜೆಟ್ ಹಾಗೂ ಹೊಸ ನಟರಿಂದಲೂ ಕಥೆ ಚೆನ್ನಾಗಿದ್ದರೆ ಸಿನಿಮಾ ಹಿಟ್ ಆಗುತ್ತದೆ ಎನ್ನಲು ಸು ಫ್ರಾ ಸೋ ಸಿನಿಮಾ ಉತ್ತಮ ಉದಾಹರಣೆ ಎನ್ನಬಹುದು. ಬಾಕ್ಸ್ ಆಫೀಸ್ ಮುನ್ನುಗ್ಗಿದ್ದ ಈ ಸಿನಿಮಾ ಯಾವಾಗ ಒಟಿಟಿ ಬರುತ್ತೆ ಎಂಬುದು ಕಾದುನೋಡಬೇಕು.