ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಸಂಖ್ಯೆಯ ಸಿನಿಮಾಗಳು ರಿಲೀಸ್;‌ 255ರಲ್ಲಿ ನಿರ್ಮಾಪಕರನ್ನು ಸೇಫ್‌ ಮಾಡಿದ ಚಿತ್ರಗಳೆಷ್ಟು?

2025ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಒಟ್ಟು 255 ಸಿನಿಮಾಗಳು (248 ಥಿಯೇಟರ್ + 7 ಒಟಿಟಿ) ತೆರೆಕಂಡಿವೆ. ಆದರೆ ಈ ಬೃಹತ್ ಸಂಖ್ಯೆಯಲ್ಲಿ ಲಾಭ ತಂದುಕೊಟ್ಟ ಸಿನಿಮಾಗಳ ಸಂಖ್ಯೆ 10ನ್ನೂ ದಾಟಿಲ್ಲ ಎಂಬುದು ಕಹಿ ಸತ್ಯ. ರಿಷಬ್ ಶೆಟ್ಟಿಯ 'ಕಾಂತಾರ: ಚಾಪ್ಟರ್ 1' ಮತ್ತು ರಾಜ್ ಬಿ ಶೆಟ್ಟಿ ತಂಡದ 'ಸು ಫ್ರಮ್ ಸೋ' ಚಿತ್ರಗಳು ಈ ವರ್ಷದ ಅತಿದೊಡ್ಡ ಯಶಸ್ವಿ ಚಿತ್ರಗಳಾಗಿ ಹೊರಹೊಮ್ಮಿವೆ. ಉಳಿದಂತೆ ಶೇ. 95ಕ್ಕೂ ಹೆಚ್ಚು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ.

2025ರಲ್ಲಿ ಸ್ಯಾಂಡಲ್‌ವುಡ್‌ ಹೊಸ ದಾಖಲೆಗೆ ಪಾತ್ರವಾಗಿದೆ. ಅದೇನಪ್ಪ ಅಂದ್ರೆ, ಈ ವರ್ಷ ಅತ್ಯಧಿಕ ಸಂಖ್ಯೆಯ ಸಿನಿಮಾಗಳು ತೆರೆಕಂಡಿವೆ. ಹೌದು, ಇದೊಂದೇ ವರ್ಷ 250+ ಸಿನಿಮಾಗಳು ರಿಲೀಸ್‌ ಆಗಿವೆ. ಚಿತ್ರಮಂದಿರಗಳಲ್ಲಿ 248+ಒಟಿಟಿಯಲ್ಲಿ 7 ಸಿನಿಮಾಗಳು ಸೇರಿ ಒಟ್ಟು 255 ಸಿನಿಮಾಗಳು ಈ ವರ್ಷ ರಿಲೀಸ್‌ ಆಗಿದ್ದು, ಅದರಲ್ಲಿ ಎಷ್ಟು ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ? ನಿರ್ಮಾಪಕರನ್ನು ಎಷ್ಟು ಸಿನಿಮಾಗಳು ಸೇಫ್‌ ಮಾಡಿವೆ ಎಂದು ನೋಡಿದರೆ, ಆ ಸಂಖ್ಯೆ 5% ಕೂಡ ದಾಟುವುದಿಲ್ಲ.

ಫೆಬ್ರವರಿಯಲ್ಲೇ ಅತ್ಯಧಿಕ ಸಿನಿಮಾಗಳು ರಿಲೀಸ್‌

ವರ್ಷದಲ್ಲಿ ಕಡಿಮೆ ದಿನಗಳು ಇರುವ ತಿಂಗಳು ಎಂದರೆ, ಅದು ಫೆಬ್ರವರಿ. ಆದರೆ ಈ ವರ್ಷ ಫೆಬ್ರವರಿ ತಿಂಗಳಲ್ಲಿಯೇ ಅತಿ ಹೆಚ್ಚು, ಅಂದರೆ 33 ಸಿನಿಮಾಗಳು ಬಿಡುಗಡೆಯಾಗಿವೆ. ನವೆಂಬರ್ (32) ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಡಿಸೆಂಬರ್ ತಿಂಗಳಲ್ಲಿ ಅತಿ ಕಡಿಮೆ ಅಂದರೆ 10 ಸಿನಿಮಾಗಳು ಬಿಡುಗಡೆಯಾಗಿವೆ. ಆದರೂ ಈ ವರ್ಷ ಹೆಚ್ಚು ಸದ್ದು ಮಾಡಿದ ತಿಂಗಳು ಡಿಸೆಂಬರ್‌. ಯಾಕೆಂದರೆ, ಅದೊಂದೇ ತಿಂಗಳಿನಲ್ಲಿ ಶಿವರಾಜ್‌ಕುಮಾರ್‌, ಉಪೇಂದ್ರ ಅವರ ʻ45ʼ, ಸುದೀಪ್‌ ಅವರ ʻಮಾರ್ಕ್‌ʼ ಮತ್ತು ದರ್ಶನ್‌ ಅವರ ದಿ ಡೆವಿಲ್‌ ಸಿನಿಮಾಗಳೂ ತೆರೆಕಂಡವು. ಈ ಮೂರು ಚಿತ್ರಗಳಿಗೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಂದಹಾಗೆ, 91 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 6000 ಸಿನಿಮಾಗಳು ತೆರೆಕಂಡ ಸಾಧನೆಯು 2025ರಲ್ಲಾಗಿದೆ.

Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್‌ 1! ಕಾಂತಾರ, ಕೆಜಿಎಫ್‌ ದಾಖಲೆ ಉಡೀಸ್

ಗೆದ್ದ ಸಿನಿಮಾಗಳೆಷ್ಟು?

2025ರ ಮೊದಲ ಆರು ತಿಂಗಳು ತುಂಬಾ ನೀರಸವಾಗಿಯೇ ಇತ್ತು. ಮೇ ತಿಂಗಳ ಆರಂಭದಲ್ಲೇ 100 ಸಿನಿಮಾಗಳು ರಿಲೀಸ್‌ ಆಗಿದ್ದರೂ, ಗೆಲುವಿನ ಸದ್ದೇ ಇರಲಿಲ್ಲ. ಮಾದೇವ, ಎಕ್ಕ, ಛೂ ಮಂತರ್ ಮತ್ತೊಂದೆರಡು ಸಿನಿಮಾಗಳು ಸೌಂಡ್‌ ಮಾಡಿದರೂ, ಅದು ಅಲ್ಲಿಗಲ್ಲಿಗೆ ಎನ್ನುವಂತಿತ್ತು. ಜುಲೈ 25ರಂದು ತೆರೆಕಂಡ ಸು ಫ್ರಮ್‌ ಸೋ ಸಿನಿಮಾ ಮಾಡಿದ ದಾಖಲೆಯೇ ಬೇರೆಯದ್ದು. ಅದೊಂದು ಆರ್ಗ್ಯಾನಿಕ್‌ ಗೆಲುವು. ‌ ರಾಜ್‌ ಬಿ ಶೆಟ್ಟಿ ತಂಡದ 5 ಕೋಟಿ ರೂ. ಬಜೆಟ್‌ನ ಆ ಸಿನಿಮಾ ಗಳಿಸಿದ್ದು ಭರ್ತಿ 125 ಕೋಟಿ ರೂ. ಹಣ!

Su From So: ಸು ಫ್ರಮ್ ಸೋ ಸಿನಿಮಾ ಒಟಿಟಿ ಡೇಟ್ ಫೇಕ್- ಹಾಟ್ ಸ್ಟಾರ್ ಸ್ಪಷ್ಟನೆ ಏನು?

ನಂತರ ಅಕ್ಟೋಬರ್‌ನಲ್ಲಿ ಬಂದ ‘ಕಾಂತಾರ – ಚಾಪ್ಟರ್‍ 1’ ಚಿತ್ರದ್ದು ಇಂಡಿಯಾ ತಿರುಗಿ ನೋಡುವಂತಹ ಗೆಲುವು. 100+ ಕೋಟಿ ರೂ. ಬಜೆಟ್‌ನ ಈ ಪ್ಯಾನ್‌ ಇಂಡಿಯಾ ಚಿತ್ರ ಗಳಿಸಿದ್ದು ಭರ್ತಿ 900 ಕೋಟಿ ರೂ. ಹಣ. ಇನ್ನು, 250+ ಸಿನಿಮಾಗಳಲ್ಲಿ ಐದಾರು ಚಿತ್ರಗಳು ಹಾಕಿದ ದುಡ್ಡನ್ನ ವಾಪಸ್ಸು ಪಡೆದಿವೆ. ಸ್ಯಾಟಲೈಟ್‌ ಮತ್ತು ಡಿಜಿಟಲ್‍ ಹಕ್ಕುಗಳಿಂದ ಮೂರ್ನಾಲ್ಕು ಸಿನಿಮಾಗಳ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. ಹೇಗೆ ಲೆಕ್ಕ ಹಾಕಿದರೂ ಗೆದ್ದ ಸಿನಿಮಾಗಳ ಸಂಖ್ಯೆ 10 ದಾಟೋದಿಲ್ಲ. ಹಾಗಾದರೆ, ಉಳಿದ 245 ಸಿನಿಮಾಗಳ ನಿರ್ಮಾಪಕರ ಪಾಡೇನು? ದೇವರೇ ಬಲ್ಲ! ಇದು ನಿಜಕ್ಕೂ ಸ್ಯಾಂಡಲ್‌ವುಡ್‌ಗೆ ಅವಲೋಕನದ ಸಮಯವೇ ಸರಿ.

ಈ ವರ್ಷ ಗಮನಸೆಳೆದವರು ಯಾರು?

2025ರಲ್ಲಿ ಒಂದಷ್ಟು ಪ್ರತಿಭಾನ್ವಿತ ಹೊಸ ನಿರ್ದೇಶಕರು ಗಮನಸೆಳೆದಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

ಕುಲದೀಪ್ ಕಾರಿಯಪ್ಪ- ನೋಡಿದವರು ಏನಂತಾರೆ

ಜೆಪಿ ತುಮಿನಾಡು- ಸು ಫ್ರಮ್ ಸೋ

ಹಯವದನ- ಎಲ್ಲೋ ಜೋಗಪ್ಪ ನಿನ್ನರಮನೆ

ಸುಮಂತ್ ಭಟ್ - ಮಿಥ್ಯ

ಪುನೀತ್ ರಂಗಸ್ವಾಮಿ - ಏಳುಮಲೆ

ಆಯುಷ್ ಮಲ್ಲಿ - ಪಪ್ಪಿ

ಭೀಮರಾವ್ ಪೈದೊಡ್ಡಿ- ಹೆಬ್ಬುಲಿ ಕಟ್

ಸಮರ್ಥ್ ಕಡಕೋಳ್ - ಎಡಗೈ ಅಪಘಾತಕ್ಕೆ ಕಾರಣ

ವಿನಾಯಕ ಎನ್‌ ಫುಲ್‌ಮೀಲ್ಸ್

ಪ್ರತಾಪ್ ಗಂಧರ್ವ - ಕಂಗ್ರಾಜ್ಯುಲೇಷನ್ ಬ್ರದರ್

ಚಂದನ್ ಕುಮಾರ್- ಫ್ಲರ್ಟ್

ಅರ್ಜುನ್‌ ಜನ್ಯ - 45