ಮೂರು ದಶಕಗಳಿಗೂ ಹೆಚ್ಚಿನ ಕಾಲ ವೃತ್ತಿಜೀವನದೊಂದಿಗೆ, ಸುನೀಲ್ ಶೆಟ್ಟಿ (Suniel Shetty) ಬಹುಮುಖ ನಟನಾಗಿ ಮಾತ್ರವಲ್ಲದೆ ತಮ್ಮ ತತ್ವಗಳಿಂದಲೂ ಖ್ಯಾತಿಯನ್ನು ಗಳಿಸಿದ್ದಾರೆ. ದುಡ್ಡಿಗಿಂತ ನನಗೆ ನನ್ನ ಮೌಲ್ಯ ಮುಖ್ಯ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ತಂಬಾಕು ಸಂಬಂಧಿತ ಬ್ರ್ಯಾಂಡ್‌ನ ಜಾಹೀರಾತು (Brand Ad) ನನ್ನ ಬಳಿ ಬಂದಿತ್ತು ಎಂದು ಹೇಳಿರುವ ಸುನಿಲ್ ಶೆಟ್ಟಿ ಆ ಜಾಹೀರಾತಿಗಾಗಿ ಅವರು ನನಗೆ 40 ಕೋಟಿ ಹಣ ಕೊಡಲು ಸಿದ್ಧರಿದ್ದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನನಗೆ ಹಣದ ಅವಶ್ಯಕತೆ (Money) ಇತ್ತು, ಹಾಗಂಥ ನನ್ನನ್ನೂ ನಾನು ಮಾರಿಕೊಳ್ಳಲಾರೆ ಎಂದು ಹೇಳಿರುವ ಸುನಿಲ್ ಶೆಟ್ಟಿ ಆ ಆಫರ್‌ನ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ತಮ್ಮ ನಿರ್ಧಾರದ ಬಗ್ಗೆ ವಿವರಿಸುತ್ತಾ, ಸುನೀಲ್ ತಮ್ಮ ವೈಯಕ್ತಿಕ ನಂಬಿಕೆಗಳು ಮತ್ತು ಮೂಲ ಮೌಲ್ಯಗಳು ಜೀವನ ಮತ್ತು ವೃತ್ತಿಜೀವನದ ಬಗ್ಗೆ ಅವರ ದೃಷ್ಟಿಕೋನವನ್ನು ಹೇಗೆ ಪ್ರಭಾವಿಸಿವೆ ಎಂಬುದನ್ನು ಹಂಚಿಕೊಂಡರು.
ಹಣದ ಅವಶ್ಯಕತೆ ಇತ್ತು!
ಪೀಪಿಂಗ್ ಮೂನ್‌ಗೆ ನೀಡಿದ ಸಂದರ್ಶನದಲ್ಲಿ, "ನನಗೆ ತಂಬಾಕು ಜಾಹೀರಾತಿಗಾಗಿ 40 ಕೋಟಿ ರೂ.ಗಳನ್ನು ಆಫರ್ ಮಾಡಲಾಗಿತ್ತು. ನಾನು ಅವರನ್ನು ನೋಡಿ, 'ನಾನು ಹಣಕ್ಕೆ ಮರುಳಾಗುತ್ತೇನೆ ಎಂದು ನೀವು ಭಾವಿಸುತ್ತೀರಾ? ಎಂದು ಕೇಳಿದ್ದೆ. ಆ ಸಮಯದಲ್ಲಿ ಹಣದ ಅವಶ್ಯಕತೆ ಇತ್ತು.
ಅಹಾನ್ ಮತ್ತು ಅಥಿಯಾ ಮೇಲೆ ಕಳಂಕ ತರುವ ಯಾವ ಕೆಲಸವನ್ನು ನಾನು ಮಾಡುವುದಿಲ್ಲ ಎಂದಿದ್ದೆ. ಈಗ ಯಾರೂ ಅಂತಹ ಕೊಡುಗೆಗಳೊಂದಿಗೆ ನನ್ನ ಬಳಿಗೆ ಬರಲು ಧೈರ್ಯ ಮಾಡುವುದಿಲ್ಲ" ಎಂದು ಅವರು ಹೇಳಿದರು. ನನ್ನ ಮಕ್ಕಳಿಗೆ ಮಾದರಿ ವ್ಯಕ್ತಿಯಾಗುವುದೇ ನನ್ನ ಉದ್ದೇಶ ಮತ್ತು ಗುರಿ ಎಂದು ಹೇಳಿದ್ದಾರೆ. ಅದೇ ಕೊನೆ ಆ ನಂತರ ಮತ್ತೆ ಯಾರು ಪಾನ್ ಮಸಾಲಾ, ಗುಟ್ಕಾ ಜಾಹೀರಾತಿನ ಆಫರ್ ತೆಗೆದುಕೊಂಡು ನನ್ನ ಬಳಿ ಬರಲಿಲ್ಲ, ಅವರಿಗೆ ಆ ಧೈರ್ಯ ಇಲ್ಲ ಎಂದು ಕೂಡ ಹೇಳಿದ್ದಾರೆ.
ಸಂಪೂರ್ಣವಾಗಿ ಕೆಲಸ ಬಿಟ್ಟಿದ್ದೆ
2017 ರಲ್ಲಿ ತಮ್ಮ ತಂದೆ ವೀರಪ್ಪ ಶೆಟ್ಟಿಯವರ ನಿಧನದ ಬಗ್ಗೆ ಸುನಿಲ್ ಶೆಟ್ಟಿ ಮತ್ತಷ್ಟು ಮಾತನಾಡಿದರು, ನಂತರ ಅವರು ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡರು. ಅವರು ಹೇಳಿದರು, "2017 ರಲ್ಲಿ ನಿಧನರಾಗುವ ಮೊದಲು, ತಂದೆ 2004 ರಿಂದ ಅಸ್ವಸ್ಥರಾಗಿದ್ದರು, ಮತ್ತು ನಾನು ಅವರನ್ನು ನೋಡಿಕೊಳ್ಳುತ್ತಿದ್ದೆ. ನಾನು ಮನಸ್ಥಿತಿಯಲ್ಲಿ ಇರಲಿಲ್ಲ. ನಾನು ಸಂಪೂರ್ಣವಾಗಿ ಕೆಲಸ ಬಿಟ್ಟಿದ್ದೆ. ಮತ್ತು ನಂತರ ಅವರು ನಿಧನರಾದರು.
6-7 ವರ್ಷಗಳ ನಂತರ ನಟ ಮತ್ತೆ ಚಿತ್ರರಂಗಕ್ಕೆ ಮರಳಿದರು "ನನ್ನ ತಂದೆಯ ಮರಣದ ಬೆಳಗ್ಗೆ, ನನಗೆ ಆರೋಗ್ಯ ಕಾರ್ಯಕ್ರಮವನ್ನು ಮಾಡುವ ಆಫರ್ ಬಂದಿತು. ನಾನು ಅದನ್ನು ಒಂದು ಕರೆ ಎಂದು ನೋಡಿದೆ, ಮತ್ತು ನಂತರ ನಾನು ಮತ್ತೆ ನಟನೆಗೆ ಹೋದೆ ಮತ್ತು ಕೆಲವು ದಕ್ಷಿಣ ಚಲನಚಿತ್ರಗಳನ್ನು ಕೈಗೆತ್ತಿಕೊಂಡೆ ಎಂದು ಅವರು ಹೇಳಿದರು.
ಕಷ್ಟದ ಸಮಯದಲ್ಲಿ ಕೂಡ ಅಭಿಮಾನಿಗಳು ಮತ್ತು ನನ್ನ ಹಿತೈಷಿಗಳು ನನ್ನ ಕೈ ಬಿಡಲಿಲ್ಲ ಎಂದು ಭಾವುಕರಾಗಿದ್ದಾರೆ. ಜನರು ತಮಗೆ ನೀಡುವ ಗೌರವ ಮತ್ತು ಪ್ರೀತಿ ಹಣಕ್ಕಿಂತ ಮೀಗಿಲಾದದ್ದು ಎಂದು ಕೂಡ ಹೇಳಿದ್ದಾರೆ. 'ಮೊಹರಾ''.. ''ದಿಲ್‌ವಾಲೆ''.. ''ಗೋಪಿ ಕಿಶನ್''.. ''ದಢ್ಕನ್''.. ''ಕೃಷ್ಣಾ.. ''ಹೇರಾ ಪೇರಿ''.. ''ಬಾರ್ಡರ್'' ಹೀಗೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ.