Bigg Boss Kannada 12: ಅಶ್ವಿನಿಗೆ ಸಖತ್ ಕ್ವಾಟ್ಲೆ ಕೊಟ್ಟ ಗಿಲ್ಲಿ; ಕೆಲಸ ಮುಗಿಸದೇ ಹೇಗೆ ಮಲಗ್ತೀರಾ ನೋಡೇ ಬಿಡ್ತಿನಿ ಅಂತ ಸವಾಲ್!
Gilli Nata: ಬಿಗ್ ಬಾಸ್ ಮನೆಯಲ್ಲಿ ಈಗ ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದಾರೆ. ಗಿಲ್ಲಿ ಈಗ ತಮ್ಮ ರೂಲ್ ಶುರು ಮಾಡಿದ್ದಾರೆ. ಆದ್ರೆ ಗಿಲ್ಲಿ ಹೇಳಿದ ಮಾತನ್ನು ಅಶ್ವಿನಿ ಕೇಳುತ್ತಿಲ್ಲ. ಇದರಿಂದಾಗಿ ಇಬ್ಬರ ಮಧ್ಯೆ ವಾದ ವಿವಾದ ನಡೆದಿದೆ. ಅಶ್ವಿನಿ ಅವರಿಗೆ ಮಲಗಲು ಕೂಡ ಬಿಡ್ತಾ ಇಲ್ಲ ಗಿಲ್ಲಿ. ಅಶ್ವಿನಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ ಗಿಲ್ಲಿ ನಟ. ಇದೀಗ ಹೊಸ ಪ್ರೋಮೋ ಔಟ್ ಆಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಈಗ ಗಿಲ್ಲಿ ನಟ (Gilli Nata) ಕ್ಯಾಪ್ಟನ್ ಆಗಿದ್ದಾರೆ. ಗಿಲ್ಲಿ ಈಗ ತಮ್ಮ ರೂಲ್ ಶುರು ಮಾಡಿದ್ದಾರೆ. ಆದ್ರೆ ಗಿಲ್ಲಿ ಹೇಳಿದ ಮಾತನ್ನು ಅಶ್ವಿನಿ ಕೇಳುತ್ತಿಲ್ಲ. ಇದರಿಂದಾಗಿ ಇಬ್ಬರ ಮಧ್ಯೆ ವಾದ ವಿವಾದ ನಡೆದಿದೆ. ಅಶ್ವಿನಿ (Ashwini Gowda) ಅವರಿಗೆ ಮಲಗಲು ಕೂಡ ಬಿಡ್ತಾ ಇಲ್ಲ ಗಿಲ್ಲಿ. ಅಶ್ವಿನಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ ಗಿಲ್ಲಿ ನಟ. ಇದೀಗ ಹೊಸ ಪ್ರೋಮೋ (Promo) ಔಟ್ ಆಗಿದೆ.
ಕೆಲಸ ಮುಗಿಸದೇ ಹೇಗೆ ಮಲಗ್ತೀರಾ ನೋಡೇ ಬಿಡ್ತೀನಿ!
ಕಿಚನ್ ಕ್ಲೀನ್ ಮಾಡಿ ಮುಗಿಸಿ ಬಿಡಿ ಎಂದಿದ್ದಾರೆ ಗಿಲ್ಲಿ. ಅದಕ್ಕೆ ಅಶ್ವಿನಿ ಇದ್ದವರು, ಸುಸ್ತಾಗಿದೆ ಬೆಳಗ್ಗೆ ಮಾಡ್ತೀನಿ ಎಂದಿದ್ದಾರೆ. ಅದಕ್ಕೆ ಗಿಲ್ಲಿ ಇದ್ದವರು, ಹಾರೆ ತೆಗೆದುಕೊಂಡು ಅಗೆಯಕ್ಕೇನು ಹೋಗಿದ್ರಾ? ಕೆಲಸ ಮಾಡಲೇ ಬೇಕು ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಸ್ಪಂದನಾ VS ಮಾಳು; ಬಿಗ್‌ಬಾಸ್ ಮನೆಯಿಂದ ಆಚೆ ಹೋಗೋದು ಯಾರು?
ಗಿಲ್ಲಿ ಹೇಳಿದ ಮಾತು ಅಶ್ವಿನಿ ಕೋಪ ನೆತ್ತಿಗೇರಿದೆ. ನಿಧಾನಕ್ಕೆ ಮಾತನಾಡು, ಕ್ಯಾಪ್ಟನ್ ಅಂತ ಎರಡು ಕೊಂಬು ಬಂದಿದ್ಯಾ ಅಂತ ಕೇಳಿದ್ದಾರೆ. ಕೇಳುತ್ತಲೇ ಗಿಲ್ಲಿಗೆ ಕೋಪ ಬಂದಿದೆ. ಅಷ್ಟೇ ಅಲ್ಲ ನೀನು ಕ್ಯಾಪ್ಟನ್ ಆಗಿ ತೋರಿಸು ಅಂತ ಏಕ ವಚನದಲ್ಲಿಯೇ ಹೇಳಿದ್ದಾರೆ ಗಿಲ್ಲಿ. ಅಷ್ಟೇ ಅಲ್ಲ ಕೆಲಸ ಮುಗಿಸದೇ ಹೇಗೆ ಮಲಗ್ತೀರಾ ನೋಡೇ ಬಿಡ್ತೀನಿ ಅಂತ ಸವಾಲ್ ಹಾಕಿದ್ದಾರೆ. ಅಶ್ವಿನಿ ಅವರು ಮಲಗಿರುವಾಗ ಸಖತ್ ಸೌಂಡ್ ಮಾಡಿ ತೊಂದರೆ ಕೊಟ್ಟಿದ್ದಾರೆ.
Up coming 1st promo 🔴#BBKSeason12 #BBK12 https://t.co/VVl0OfemVh
— Shiva Kannadiga (@shiva_kann31596) December 29, 2025
ಮಾಳು ನಿಪನಾಳ ಮನೆಯಿಂದ ಔಟ್
ಬಿಗ್ ಬಾಸ್ ಮನೆಯಿಂದ ಸೂರಜ್ ಬೆನ್ನಲ್ಲೇ ಮಾಳು ನಿಪನಾಳ ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿಈ ವಾರ ಡಬಲ್ ಎಲಿಮಿನೇಶನ್ ಇದೆ ಎಂದು ಬಿಗ್ ಬಾಸ್ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಅದರಂತೆ ಶನಿವಾರದ ಸಂಚಿಕೆಯಲ್ಲಿ ಸೂರಜ್ ಅವರು ಮನೆಯಿಂದ ಹೊರ ನಡೆದಿದ್ದಾರೆ. ಭಾನುವಾರ ಸ್ಪಂದನಾಹಾಗೂ ಮಾಳು ಅವರು ಡೇಂಜರ್ ಝೋನ್‌ನಲ್ಲಿ ಇದ್ದಿದ್ದರು. ಅದರಂತೆ ಮಾಳು ಔಟ್ ಆಗಿದ್ದಾರೆ.
ಮೊದಲಿಗೆ ಬಿಗ್ ಬಾಸ್ ಸ್ಪಂದನಾ ಹಾಗೂ ಮಾಳು ಅವರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗುತ್ತಾರೆ ಎಂದು ಅನೌನ್ಸ್ ಮಾಡಿದ್ದಾರೆ. ಗಿಲ್ಲಿ ಕೂಡ, ಸ್ಪಂದನಾ ಯಾರೂ ಎಂಬುದು ಇದುವರೆಗೂ ಕ್ಲಾರಿಟಿ ಸಿಕ್ಕಿಲ್ಲ ಅಂತ ಗಿಲ್ಲಿ ನಟ ಹೇಳಿದ್ದಾರೆ. ಇನ್ನು ಧನುಷ್ ಕೂಡ ಮಾಳು ಅವರು ಸ್ಟ್ಯಾಂಡ್ ತೆಗೆದುಕೊಂಡಿಲ್ಲ ಎಂದಿದ್ದಾರೆ. ಅಂತೂ ಮಾಳು ಏಲಿಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಸಂಗೀತಾ ಶೃಂಗೇರಿ-ಕಾರ್ತಿಕ್ ಮಹೇಶ್ ನಡುವೆ ಮನಸ್ತಾಪವಿತ್ತಾ? ಕೊನೆಗೂ ಕ್ಲಾರಿಟಿ ಕೊಟ್ಟ ನಟಿ
ಗಿಲ್ಲಿ ನಟನ ಕಾಮಿಡಿಗೆ ಪ್ರೇಕ್ಷಕರು ಮಾತ್ರ ಅಲ್ಲ ಅಲ್ಲ ಮನೆಮಂದಿಯ ಮನಯವರೂ ಫಿದಾ ಆಗಿದ್ದಾರೆ. ಬಂದವರೆಲ್ಲರೂ ಗಿಲ್ಲಿಯೇ (Gilli Nata) ನಮ್ಮ ಫೇವರೆಟ್ ಎಂದು ಕ್ಯಾಪ್ಟನ್ (Captain) ಆಗಬೇಕು ಎಂದು ವೋಟ್ ಕೂಡ ಹಾಕಿದ್ದಾರೆ. ಅದರಂತೆ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದಾರೆ.