ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚುನಾವಣಾ ರಾಜಕಾರಣಕ್ಕೆ ರಜನಿಕಾಂತ್ ಹೆಸರು ಬಳಸದಂತೆ ಕಟ್ಟುನಿಟ್ಟಿನ ಆದೇಶ: ತಲೈವಾ ಅಭಿಮಾನಿಗಳ ಸಂಘದಿಂದ ಪ್ರಕಟಣೆ

ರಾಜಕೀಯ ವಿದ್ಯಮಾನಗಳಲ್ಲಿ ‘ಸೂಪರ್‌ಸ್ಟಾರ್’ ರಜನಿಕಾಂತ್ ಅವರ ಹೆಸರು ಮತ್ತು ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಸಂಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಕಲ್ಯಾಣ ಸಂಘವು ಅಧಿಕೃತ ಪ್ರಕಟಣೆ ಹೊರಡಿಸಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ರಾಜಕೀಯ ವಿದ್ಯಮಾನಗಳಲ್ಲಿ ‘ಸೂಪರ್‌ಸ್ಟಾರ್’ ರಜನಿಕಾಂತ್ ಅವರ ಹೆಸರು ಮತ್ತು ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಸಂಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಕಲ್ಯಾಣ ಸಂಘವು ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ. ಚುನಾವಣಾ ರಾಜಕೀಯದಿಂದ ಸಂಪೂರ್ಣವಾಗಿ ದೂರ ಉಳಿದಿರುವ ರಜನಿಕಾಂತ್ ಅವರ ವೈಯಕ್ತಿಕ ನಿರ್ಧಾರವನ್ನು ಗೌರವಿಸುವುದು ಮತ್ತು ಅಭಿಮಾನಿಗಳಲ್ಲಿ ಮೂಡುತ್ತಿರುವ ಗೊಂದಲವನ್ನು ನಿವಾರಿಸುವುದು ಈ ಪ್ರಕಟಣೆಯ ಮುಖ್ಯ ಉದ್ದೇಶವಾಗಿದೆ.

ಫ್ಯಾನ್ಸ್ ಅಸೋಸಿಯೇಷನ್ ಖಡಕ್ ಆದೇಶ

ಸದ್ಯ ಕೇಳಿಬರುತ್ತಿರುವ ಗೊಂದಲಗಳಿಗೆ ಫುಲ್‌ಸ್ಟಾಪ್ ಇಡಲು ರಜನಿ ಫ್ಯಾನ್ಸ್ ಅಸೋಸಿಯೇಷನ್ ಈ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. "ರಜನಿಕಾಂತ್ ಅವರ ಹೆಸರನ್ನಾಗಲಿ ಅಥವಾ ಭಾವಚಿತ್ರವನ್ನಾಗಲಿ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗಳು ಬಳಸಬಾರದು. ನಮ್ಮ ನಾಯಕರ ಕಟ್ಟುನಿಟ್ಟಿನ ಆದೇಶದ ಮೇರೆಗೆ, ಅಭಿಮಾನಿ ಬಳಗದ ಪದಾಧಿಕಾರಿಗಳು ಹಾಗೂ ಎಲ್ಲಾ ಅಭಿಮಾನಿಗಳಿಗೆ ಇದನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಲಾಗಿದೆ" ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ರಾಜಕೀಯ ಪಡಸಾಲೆಯಲ್ಲಿ ರಜನಿ ಹೆಸರು

ಕೆಲವು ವರ್ಷಗಳ ಹಿಂದೆ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿ, ನಂತರ ಆರೋಗ್ಯದ ಕಾರಣಗಳಿಂದಾಗಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆದಾಗ್ಯೂ, ತಮಿಳುನಾಡು ರಾಜಕೀಯ ವಲಯದಲ್ಲಿ ಅವರ ಹೆಸರು ನಿರಂತರವಾಗಿ ಮುನ್ನೆಲೆಗೆ ಬರುತ್ತಲೇ ಇದೆ. ಇತ್ತೀಚೆಗೆ ಕೆ. ಅಣ್ಣಾಮಲೈ ಅವರು ಹೊಸ ಸಂಘಟನೆಯೊಂದನ್ನು ಪ್ರಾರಂಭಿಸಿದಾಗ, ಅವರ ಬೆಂಬಲಿಗರು ರಜನಿಕಾಂತ್ ಜೊತೆಗಿರುವ ಪೋಸ್ಟರ್‌ಗಳನ್ನು ವ್ಯಾಪಕವಾಗಿ ಬಳಸಿದ್ದರು. ಅಲ್ಲದೆ, ತಾವು ಪಕ್ಷ ಆರಂಭಿಸುವ ಸಮಯದಲ್ಲಿ ರಜನಿ ತಮ್ಮನ್ನು ಆಹ್ವಾನಿಸಿದ್ದರು ಎಂದು ಸ್ವತಃ ಅಣ್ಣಾಮಲೈ ಹೇಳಿಕೆ ನೀಡಿದ್ದರು.

ರಾಘವ ಲಾರೆನ್ಸ್‌ ಬಾಯಲ್ಲೂ ತಲೈವಾ ನಾಮಸ್ಮರಣೆ

ಮತ್ತೊಂದೆಡೆ, ನಟ ರಾಘವ ಲಾರೆನ್ಸ್ ಅವರು ತಿರುಚಿರಾಪಳ್ಳಿ (ತಿರುಚಿ) ಪೂರ್ವ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ರಜನಿಕಾಂತ್ ರಾಜಕೀಯ ನಿರ್ಧಾರ ಕೈಬಿಟ್ಟ ಬಳಿಕ ತಮ್ಮ ಬಳಿ, ಸುಶಿಕ್ಷಿತ ವ್ಯಕ್ತಿಯೊಬ್ಬರನ್ನು ಮುನ್ನಲೆಗೆ ತಂದು ರಾಜಕೀಯ ನಡೆಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಲಾರೆನ್ಸ್ ಬಹಿರಂಗಪಡಿಸಿದ್ದರು.

ಇದೇ ಅವಧಿಯಲ್ಲಿ ರಜನಿಕಾಂತ್ ಅವರ ಪತ್ನಿ ಲತಾ ಅವರು ‘ಮಕ್ಕಳ್ ಮಂದಿರಂ’ ಎಂಬ ಸಂಘಟನೆ ಆರಂಭಿಸಿದಾಗಲೂ ಅದರಲ್ಲಿ ರಜನಿಕಾಂತ್ ಕೈಜೋಡಿಸಲಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಇದೀಗ ಅಭಿಮಾನಿ ಸಂಘದ ಘೋಷಣೆಯಿಂದ ಎಲ್ಲಾ ಗೊಂದಲಗಳಿಗೂ ಫುಲ್‌ ಸ್ಟಾಪ್‌ ಬಿದ್ದಿದೆ.