ಕನ್ನಡ ಕಿರುತೆರೆಯಲ್ಲಿ (Kannada Serial) ಹೊಸ ಸಂಚಲನ ಸೃಷ್ಟಿಸಿದ ಧಾರಾವಾಹಿ ‘ಜೊತೆ ಜೊತೆಯಲಿ’. ಈ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿ ಅನಿರುದ್ಧ್ ಜತ್ಕರ್ (Anirudh Jatkar) ಮಿಂಚಿದ್ದರು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ‘ಸೂರ್ಯವಂಶ’ (Suryavamsha Serial). ಈ ಸಿನಿಮಾ 1999 ರಲ್ಲಿ ತೆರೆಗೆ ಬಂದಿತ್ತು. ಇದೇ ಹೆಸರಿನ ‘ಸೂರ್ಯವಂಶ’ಧಾರಾವಾಹಿ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದರು ಅನಿರುದ್ಧ್. ‘ಉದಯ ಟಿವಿ’ಯ (Udaya TV) ‘ಸೂರ್ಯವಂಶ’ ಶೀಘ್ರದಲ್ಲೇ ತನ್ನ ಪಯಣವನ್ನ ಮುಕ್ತಾಯಗೊಳಿಸಲಿದೆ. ಈ ಬಗ್ಗೆ ಸ್ವತಃ ಅನಿರುದ್ಧ್ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Kannada Serial TRP: ಈ ಧಾರಾವಾಹಿಗೆ ಮೊದಲ ಸ್ಥಾನ! ಲಿಸ್ಟ್ ಇಲ್ಲಿದೆ
ಕಥೆಗೆ ಸಂಪೂರ್ಣ ಅಂತ್ಯ ದೊರಕದಿರಬಹುದು!
ಎಸ್ ನಾರಾಯಣ್ ಹಾಗೂ ಅನಿರುದ್ಧ್ ಜತ್ಕರ್ ಕಾಂಬಿನೇಶನ್‌ನಲ್ಲಿ ‘ಸೂರ್ಯವಂಶ’ ಸೀರಿಯಲ್ ತಯಾರಾಗಿತ್ತು. ಈ ತಿಂಗಳ 21ರಂದು ಕೊನೆಯ ಭಾಗ ಟೆಲಿಕಾಸ್ಟ್ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ,
‘ಸೂರ್ಯವಂಶ’ ಧಾರಾವಾಹಿಯನ್ನು ನಾವು ಮುಕ್ತಾಯಗೊಳಿಸುತ್ತಿದ್ದೇವೆ. ಈ ತಿಂಗಳ 21ರಂದು ಕೊನೆಯ ಭಾಗ ಪ್ರಸಾರವಾಗಲಿದೆ. ಕಥೆಗೆ ಸಂಪೂರ್ಣ ಅಂತ್ಯ ದೊರಕದಿರಬಹುದು. ಆದರೆ ಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ ನಡೆಯುತ್ತಾ ಸುಮಾರು 650 ಕಂತುಗಳನ್ನು ಪೂರ್ಣಗೊಳಿಸಿದ ನಂತರ, ಹೊಸ ಧಾರಾವಾಹಿಗೆ ಅವಕಾಶ ನೀಡುವ ಉದ್ದೇಶದಿಂದ ಚಾನೆಲ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಹೊಸ ಪಾತ್ರದೊಂದಿಗೆ ನಿಮ್ಮನ್ನು ಮತ್ತೆ ಭೇಟಿ ಮಾಡುವೆ
ಈ ಅದ್ಭುತ ತಂಡದ ಜೊತೆ ಹಾಗೂ ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನೋಡಿಕೊಂಡ ಚಾನೆಲ್‌ನ ಎಲ್ಲರ ಜೊತೆ ಕೆಲಸ ಮಾಡುವುದು ನನಗೆ ತುಂಬಾ ಸಂತೋಷ ಮತ್ತು ಗೌರವದ ವಿಷಯವಾಗಿತ್ತು.
ಈ ಧಾರಾವಾಹಿಯನ್ನು ಪ್ರೀತಿಯಿಂದ ನೋಡುತ್ತಾ ನಿರಂತರವಾಗಿ ಬೆಂಬಲ ನೀಡಿದ ನನ್ನ ಎಲ್ಲ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ತುಂಬಾ ಬೇಗನೇ ಹೊಸ ಪ್ರಾಜೆಕ್ಟ್ ಮತ್ತು ಹೊಸ ಪಾತ್ರದೊಂದಿಗೆ ನಿಮ್ಮನ್ನು ಮತ್ತೆ ಭೇಟಿ ಮಾಡುತ್ತೇನೆ. ಎಲ್ಲರಿಗೂ ಅಪಾರ ಪ್ರೀತಿ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ ಶವವಾಗಿ ಪತ್ತೆ
ಸೂರ್ಯವಂಶ ಸರಿಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗುವ ಮೂಲಕ ಕಿರುತೆರೆ ವೀಕ್ಷಕರ ಮನೆಮಾತಾಗಿತ್ತು. ಸುಮಾರು 650 ಎಪಿಸೋಡ್‌ಗಳನ್ನ ಪೂರೈಸಿದೆ ಈ ಧಾರಾವಾಹಿ. ‘ಸೂರ್ಯವಂಶ’ ಸೀರಿಯಲ್‌ಗೆ ಎಸ್ ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನವಿತ್ತು. ‘ಸೂರ್ಯವಂಶ’ ಧಾರಾವಾಹಿಯಲ್ಲಿ ಕಲಾವಿದರ ದಂಡೇ ಇತ್ತು.