ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಡಲು ಮೊದಲ ಬ್ಯಾಚ್ ರೆಡಿ: ಇವರೇ ನೋಡಿ

ದೊಡ್ಮನೆ ಅರ್ಧಕರ್ಧ ಖಾಲಿ ಆಗುವ ಜೊತೆ ಜೊತೆಗೇ ವೈಲ್ಡ್-ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಪ್ರವೇಶಿಸಲು ಮೊದಲ ಬ್ಯಾಚ್ ರೆಡಿ ಆಗಿದೆಯಂತೆ. ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.

ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಡಲು ಮೊದಲ ಬ್ಯಾಚ್ ರೆಡಿ

BBK 12 Wild Card Entry -

Profile Vinay Bhat Oct 16, 2025 4:47 PM

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಈ ವಾರ ಅನೇಕ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ ಹಾಗೂ ಮುಂದೆ ನಡೆಯಲಿವೆ. ಈಗಾಗಲೇ ಇಂದು ಮಿಡ್ ವೀಕ್ ಎಲಿಮಿನೇಷನ್ ಇರಲಿದೆ ಎಂದು ಪ್ರೋಮೋ ಬಿಡಲಾಗಿದೆ. ಪ್ರೋಮೋದಲ್ಲಿ ಓರ್ವ ಸದಸ್ಯ ಮನೆಯಿಂದ ಹೊರಹೋಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಒಬ್ಬರಲ್ಲಿ ಇಬ್ಬರು ದೊಡ್ಮನೆಯಿಂದ ಇಂದು ಔಟ್ ಆಗಲಿದ್ದಾರೆ. ಆ ಬಳಿಕ ವೀಕೆಂಡ್​ನಲ್ಲಿ ಈ ಸೀಸನ್​ನ ಮೊದಲ ಫಿನಾಲೆಯಲ್ಲಿ ನಾಲ್ಕರಿಂದ ಐದು ಸದಸ್ಯರು ಹೊರಹೋಗಲಿದ್ದಾರೆ.

ದೊಡ್ಮನೆ ಅರ್ಧಕರ್ಧ ಖಾಲಿ ಆಗುವ ಜೊತೆ ಜೊತೆಗೇ ವೈಲ್ಡ್-ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಪ್ರವೇಶಿಸಲು ಮೊದಲ ಬ್ಯಾಚ್ ರೆಡಿ ಆಗಿದೆಯಂತೆ. ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಗಾದರೆ, ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಪ್ರವೇಶಿಸುವ ಸದಸ್ಯರು ಯಾರೆಲ್ಲ ಇರಬಹುದು ಎಂಬುದನ್ನು ನೋಡೋಣ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ರಾಮಾಚಾರಿ ಸೀರಿಯಲ್‌ನಲ್ಲಿ ರುಕ್ಮಿಣಿ ಪಾತ್ರದಲ್ಲಿ ನಟಿಸಿದ್ದ ದೇವಿಕಾ ಭಟ್‌ ಅವರು ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಮೂಲಕ ಹೋಗಿದ್ದಾರಂತೆ. ಕಳೆದ ವರ್ಷಾಂತ್ಯದಲ್ಲಿ ಇವರು ರಾಮಾಚಾರಿ ಧಾರಾವಾಹಿಯನ್ನು ತೊರೆದಿದ್ದರು. ಸೀರಿಯಲ್ ಬಿಟ್ಮೇಲೆ ದೇವಿಕಾ ಭಟ್ ವಿದ್ಯಾಭ್ಯಾಸ ಮುಂದುವರೆಸಿದರು. ಇತ್ತೀಚೆಗಷ್ಟೇ ತಮ್ಮ ಗ್ರ್ಯಾಜುಯೇಷನ್‌ ನಡೆದಿದ್ದು, ಅದರ ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು.

BBK 12: ಫಿನಾಲೆ ಲಿಸ್ಟ್​ನಿಂದ ಸ್ಪಂದನಾ ಔಟ್: ರಾಶಿಕಾಗೆ ಬಂಪರ್ ಚಾನ್ಸ್

ಇನ್ನು ಬಿಗ್ ಬಾಸ್ ಶುರುವಾಗುವ ಸಂದರ್ಭ ವಿಜಯ್‌ ಸೂರ್ಯ ಅವರು ಶೋಗೆ ಹೋಗ್ತಾರೆ ಎನ್ನಲಾಗಿತ್ತು, ಆದರೆ ಅವರು ಹೋಗಿರಲಿಲ್ಲ. ಈ ಬಾರಿ ಅವರು ವೈಲ್ಡ್- ಕಾರ್ಡ್ ಮೂಲಕ ದೊಡ್ಮನೆ ಒಳಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೆ ರಾಮಾಚಾರಿ ಸೀರಿಯಲ್‌ ಖ್ಯಾತಿಯ ಮೌನಾ ಗುಡ್ಡೇಮನೆ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.

ಇನ್ನು ರಾಧಾ ರಮಣ ಸೀರಿಯಲ್ ಖ್ಯಾತಿಯ ಶ್ವೇತಾ ಪ್ರಸಾದ್‌ ಸಹ ಬಿಗ್ ಬಾಸ್‌ ಮನೆಯೊಳಗೆ ವೈಲ್ಡ್ ಕಾರ್ಡ್ ಮೂಲಕ ಕಾಲಿಟ್ಟಿದ್ದಾರಂತೆ. ಮಾಂಗಲ್ಯಂ ತಂತುನಾನೇನ ಧಾರಾವಾಹಿ ನಟ ಆರ್‌ ಕೆ ಚಂದನ್‌ ಅವರು ಕ್ವಾಟ್ಲೆ ಕಿಚನ್‌ ಶೋನಲ್ಲಿ ಭಾಗವಹಿಸಿದ್ದರು. ಈಗ ಅವರು ಸಿನಿಮಾವನ್ನು ಕೂಡ ಮಾಡುತ್ತಿದ್ದಾರೆ. ಚಂದನ್‌ ಅವರು ಕೂಡ ಈ ವೀಕೆಂಡ್ ಮನೆಯೊಳಗೆ ತೆರಳಲಿದ್ದಾರಂತೆ.