KAR vs SAU: ಕರ್ನಾಟಕ 372 ರನ್‌ಗಳಿಗೆ ಆಲ್‌ಔಟ್, ಸೌರಾಷ್ಟ್ರದಿಂದ ಕಠಿಣ ಹೋರಾಟ!
ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025-26ರ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಬಿ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳು ಸಮಬಲ ಹೋರಾಟವನ್ನು ಮುಂದುವರಿಸಿವೆ. ಕರ್ನಾಟಕ ಪ್ರಥಮ ಇನಿಂಗ್ಸ್‌ನಲ್ಲಿ 372 ರನ್‌ಗಳಿಗೆ ಆಲ್‌ಔಟ್ ಆಗಿದ್ದರೆ, ಸೌರಾಷ್ಟ್ರ ಎರಡನೇ ದಿನದಾಟ ಮುಗಿಯುವ ಹೊತ್ತಿಗೆ 4 ವಿಕೆಟ್ ನಷ್ಟಕ್ಕೆ 200 ರನ್‌ಗಳನ್ನು ಕಲೆ ಹಾಕಿದೆ.

ಸೌರಾಷ್ಟ್ರ ಎದುರು 372 ರನ್‌ಗಳಿಗೆ ಕರ್ನಾಟಕ ಆಲ್‌ಔಟ್. -

ರಾಜ್‌ಕೋಟ್: ಇಲ್ಲಿನ ನಿರಂಜನ್ ಶಾ ಮೈದಾನದಲ್ಲಿ ನಡಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ (KAR vs SAU) ತಂಡಗಳು ಕದಾಟ ನಡೆಸುತ್ತಿವೆ. ಶ್ರೇಯಸ್ ಗೋಪಾಲ್ (Shreyas Iyer) ಅವರ ಸ್ಪಿನ್ ಮೋಡಿಯ ಬಲದಿಂದ ಕರ್ನಾಟಕ ತಂಡ ಪಂದ್ಯದ ಎರಡನೇ ದಿನವೂ ಮೇಲುಗೈ ಸಾಧಿಸಿದೆ. ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 117.3 ಓವರ್‌ಗಳಿಗೆ 372 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಆತಿಥೇಯ ಸೌರಾಷ್ಟ್ರ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 60 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 200 ರನ್‌ಗಳನ್ನು ಗಳಿಸಿದೆ. ಆ ಮೂಲಕ ಇನ್ನೂ 172 ರನ್‌ಗಳ ಹಿನ್ನಡೆಯಲ್ಲಿದೆ.
ಗುರುವಾರ ಬೆಳಿಗ್ಗೆ 5 ವಿಕೆಟ್ ಕಳೆದುಕೊಂಡು 295 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಕರ್ನಾಟಕ ತಂಡದ ಪರ ಕ್ರೀಸ್‌ಗೆ ಬಂದ ಆರ್ ಸ್ಮರಣ್ ಹಾಗೂ ಶ್ರೇಯಸ್ ಗೋಪಾಲ್ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಸಮಯವನ್ನು ಕಳೆಯಲಿಲ್ಲ. ಮೊದಲನೇ ದಿನ 66 ರನ್ ಗಳಿಸಿದ್ದ ಸ್ಮರಣ್, ಎರಡನೇ ದಿನ ಕೇವಲ 10 ರನ್ ಗಳಿಸಿ ಧರ್ಮೇಂದ್ರ ಸಿನ್ಹ್ ಜಡೇಜಾಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದಿದ್ದ ಎಂ ವೆಂಕಟೇಶ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ 95 ಎಸೆತಗಳಲ್ಲಿ 56 ರನ್‌ಗಳಿಸಿ ಆಡುತ್ತಿದ್ದ ಶ್ರೇಯಸ್ ಗೋಪಾಲ್ ಕೂಡ ಔಟ್ ಆದರು. ಕರ್ನಾಟಕ ತಂಡದ ಮೊತ್ತ 324 ರನ್‌ಗಳು ಇರುವಾಗಲೇ ಈ ಮೂರೂ ವಿಕೆಟ್‌ಗಳನ್ನು ಕಳೆದುಕೊಂಡಿತು.
KAR vs SAU: ಕರ್ನಾಟಕ ತಂಡಕ್ಕೆ ಕರುಣ್, ಪಡಿಕ್ಕಲ್ ಅರ್ಧಶತಕಗಳ ಬಲ!
ಆದರೆ, ಶಿಖರ್ ಶೆಟ್ಟಿ ಅವರು ಕೆಲಕಾಲ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 57 ಎಸೆತಗಳಲ್ಲಿ 41 ರನ್‌ಗಳನ್ನು ಬಾರಿಸಿದರು. ಆ ಮೂಲಕ ಕರ್ನಾಟಕ ತಂಡದ ಮೊತ್ತ 3೭0ರ ಗಡಿ ದಾಟಲು ಸಾಧ್ಯವಾಯಿತು. ಸೌರಾಷ್ಟ್ರ ತಂಡದ ಪರ ಧರ್ಮೇಂದ್ರ ಸಿನ್ಹ್ ಜಡೇಜಾ 7 ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
ಸೌರಾಷ್ಟ್ರ: 200ಕ್ಕೆ 4
ಬಳಿಕ ಪ್ರಥಮ ಇನಿಂಗ್ಸ್ ಆರಭಿಸಿದ್ದ ಸೌರಾಷ್ಟ್ರ ತಂಡಕ್ಕೆ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾದ ಹಾರ್ವಿಕ್ ದೇಸಾಯಿ ಹಾಗೂ ಚಿರಾಗ್ ಜಾನಿ ಭರ್ಜರಿ ಆರಂಭವನ್ನು ತಂದುಕೊಟ್ಟರು. ಈ ಜೋಡಿ ಮೊದಲನೇ ವಿಕೆಟ್‌ಗೆ 140 ರನ್‌ಗಳನ್ನು ಕಲೆ ಹಾಕಿತು. ಹೊಸ ಚೆಂಡಿನಲ್ಲಿ ಕರ್ನಾಟಕ ಬೌಲರ್‌ಗಳನ್ನು ಎದುರಿಸಿದ ಹಾರ್ವಿಕ್ ದೇಸಾಯಿ ಅವರು 104 ಎಸೆತಗಳಲ್ಲಿ 41 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ದೊಡ್ಡ ಮೊತ್ತವನ್ನು ಕಲೆ ಹಾಕುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಇವರನ್ನು ಮೊಹ್ಸಿನ್ ಖಾನ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಇದರ ಬೆನ್ನಲ್ಲೆ ಜೇ ಗೊಯಿಲ್ ಕೂಟ ಔಟ್ ಆದರು. ಇವರನ್ನು ಶ್ರೇಯಸ್ ಗೋಪಾಲ್ ಔಟ್ ಮಾಡಿದರು.
IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಚಿರಾಗ್ ಜಾನಿ ಅದ್ಭುತ ಬ್ಯಾಟಿಂಗ್
ಇದಕ್ಕೂ ಮುನ್ನ ಒಂದು ತುದಿಯಲ್ಲಿ ನಿಂತು ಕರ್ನಾಟಕ ಬೌಲರ್‌ಗಳನ್ನು ದೀರ್ಘಾವಧಿ ಕಾಡಿದ್ದ ಚಿರಾಗ್ ಜಾನಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು ಶ್ರೇಯಸ್ ಗೋಪಾಲ್‌ಗೆ ಕ್ಲೀನ್ ಬೌಲ್ಡ್ ಆಗುವುದಕ್ಕೂ ಮುನ್ನ 148 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 90 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, 45ನೇ ಓವರ್‌ನಲ್ಲಿ ಶ್ರೇಯಸ್ ಗೋಪಾಲ್ ಎಸೆತವನ್ನು ಅರಿಯುವಲ್ಲಿ ವಿಫಲವಾದ ಜಾನಿ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ಕೇವಲ 10 ರನ್ ಅಂತರದಲ್ಲಿ ಶತಕ ವಂಚಿತರಾದರು. ಮೂರನೇ ದಿನದಾಟಕ್ಕೆ ಅರ್ಪಿತ್ ವಸವಡ (12 *) ಹಾಗೂ ಪ್ರೇರಕ್ ಮಂಕಡ್ ( 20*) ಅವರು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 3 ವಿಕೆಟ್ ಕಬಳಿಸಿದ್ದಾರೆ.