ಬರೀ ಟೀಸರ್‌ನಿಂದಲೇ ಸದ್ದು ಮಾಡುತ್ತಿರುವ ಸಿನಿಮಾ ʻಬಾಸ್ʼ. ಈ ಚಿತ್ರದ ಕಥೆಯು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುತ್ತದೆ ಎಂಬ ಮಾತುಗಳು ಆರಂಭದಿಂದಲೂ ಕೇಳಿಬಂದಿವೆ. ನಟ ದರ್ಶನ್ ಅವರ ಕಡೆಯಿಂದ ವಕೀಲರೊಬ್ಬರು ಬಾಸ್ ಚಿತ್ರದ ಸಂಬಂಧ, ಸೆನ್ಸಾರ್‌ಗೂ ನೋಟಿಸ್ ಕಳುಹಿಸಿದ್ದಾರೆ ಎಂಬ ಮಾಹಿತಿ ಇದೆ. ಇದರ ಮಧ್ಯೆಯೇ ಬಾಸ್ ಚಿತ್ರತಂಡವು ಹೊಸದೊಂದು ಹಾಡನ್ನು ರಿಲೀಸ್ ಮಾಡಿದೆ.
ಪ್ರಮೋದ್ ಮರವಂತೆ ಬರೆದ ಹಾಡು
ವಿ. ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ʻಬಾಸ್ʼ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿದಿರುವ "ಏನಿದೆಯೊ ನಿನ್ನ ಮಾಯೆ..." ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಸಿರಿ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.
Actor Darshan: ಧನ್ವೀರ್‌ಗೆ ಸಾಥ್ ಕೊಟ್ಟ ದರ್ಶನ್; `ಡಿ ಬಾಸ್' ಪೋಸ್ಟ್‌ನಲ್ಲಿ ಏನಿದೆ?
ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ʻಬಾಸ್ʼ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಡೆವಿ ಸುರೇಶ್ ಸಂಗೀತ ನೀಡಿದ್ದಾರೆ ಮತ್ತು ನವೀನ್ ಸಜ್ಜು ಹಾಡಿದ್ದಾರೆ. "ಹಾಡು ಬಿಡುಗಡೆಯಾದ ಕ್ಷಣದಿಂದಲೇ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇನ್ನೂ ಇತ್ತೀಚೆಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿದ್ದು, ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ" ಎಂದು ನಿರ್ದೇಶಕ ವಿ. ಲವ ಹೇಳಿದ್ದಾರೆ.
ʻಬಾಸ್ʼ ಚಿತ್ರದಲ್ಲಿ ತನುಷ್ ಶಿವಣ್ಣ ಅವರಿಗೆ ನಾಯಕಿಯಾಗಿ ಪಾಯಲ್ ಚಂಗಪ್ಪ ಕಾಣಿಸಿಕೊಂಡಿದ್ದಾರೆ. "ಪ್ರತಿಯೊಬ್ಬರಿಗೂ ಒಳ್ಳೆದನ್ನೇ ಬಯಸುವ ವ್ಯಕ್ತಿಯೊಬ್ಬನ ಜೀವನದಲ್ಲಿ ಕಷ್ಟ ಬಂದಾಗ ಆತ ಅನುಭವಿಸುವ ನೋವು ಹಾಗೂ ಪರದಾಟಗಳನ್ನು ಈ ಹಾಡಿನಲ್ಲಿ ಬರೆದಿದ್ದೇನೆ" ಎಂದು ಗೀತರಚನೆಕಾರ ಪ್ರಮೋದ್ ಮರವಂತೆ ಹೇಳಿದ್ದಾರೆ. ಈ ಚಿತ್ರದಲ್ಲಿ ವೀರೇನ್ ಕೇಶವ್, ಭೀಷ್ಮ ರಾಮಯ್ಯ, ಲಕ್ಷ್ಮಣ್ ಪೂಜಾರಿ, ಡಾ. ಪ್ರಮೋದ್ ಹಿರೇಮಠ, ಅಕ್ಷಯ್ ಮುಂತಾದವರು ನಟಿಸಿದ್ದು, ಶರತ್ ಎನ್ ಆರ್ ಪುರ ಅವರು ಛಾಯಾಗ್ರಹಣ ಮಾಡಿದ್ದಾರೆ.
Kannada New Movie: ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ತನುಷ್ ಶಿವಣ್ಣ ಅಭಿನಯದ ʼಬಾಸ್ʼ ಚಿತ್ರದ ಮುಹೂರ್ತ
ಸೆನ್ಸಾರ್ ಪ್ರಕ್ರಿಯ ಮುಗಿಸಿದ ಬಾಸ್
ಅಂದಹಾಗೆ, ಈ ಸಿನಿಮಾಕ್ಕೆ ಸಂಬಂಧಿಸಿದಂತೆ, ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ಮತ್ತು ಚಿತ್ರತಂಡಕ್ಕೆ ನೋಟಿಸ್ ನೀಡಿದ್ದರು. ಅಷ್ಟೇ ಅಲ್ಲದೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ತೂಗುದೀಪ ಅವರು ಖುದ್ದಾಗಿ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡದಂತೆ ಮನವಿ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೆಲ್ಲದರ ಮಧ್ಯೆ ಸದ್ದಿಲ್ಲದೇ ಬಾಸ್ ಸಿನಿಮಾವು ಸೆನ್ಸಾರ್ ಪ್ರಕ್ರಿಯೆ ಮುಗಿಸಿದ್ದು, ‘ಯು/ಎ’ ಪ್ರಮಾಣಪತ್ರ ಪಡೆದುಕೊಂಡಿದೆ.