Actor Darshan: ಧನ್ವೀರ್‌ಗೆ ಸಾಥ್ ಕೊಟ್ಟ ದರ್ಶನ್; `ಡಿ ಬಾಸ್' ಪೋಸ್ಟ್‌ನಲ್ಲಿ ಏನಿದೆ?
Darshan Dhaneerh: ಕೆವಿಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ, ರಘು ಕುಮಾರ್ ಓಆರ್ ನಿರ್ದೇಶನದ, ಧನ್ವೀರ್ ನಾಯಕರಾಗಿ ನಟಿಸಿರುವ ʻಹಯಗ್ರೀವʼ. ಇದೇ ಫೆ.27ರಂದು ʻಹಯಗ್ರೀವʼ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಮಂಡ್ಯದಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ದರ್ಶನ್ ಅಭಿಮಾನಿಗಳು ಈ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ.
ನಟ ದರ್ಶನ್ -
ಕೆವಿಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ, ರಘು ಕುಮಾರ್ ಓಆರ್ ನಿರ್ದೇಶನದ, ಧನ್ವೀರ್ (dhanveerah) ನಾಯಕರಾಗಿ ನಟಿಸಿರುವ ʻಹಯಗ್ರೀವʼ. ಇದೇ ಫೆ.27ರಂದು ʻಹಯಗ್ರೀವʼ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಮಂಡ್ಯದಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ದರ್ಶನ್ (Darshan Fans) ಅಭಿಮಾನಿಗಳು ಈ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೊನೆಗೆ ಬಿಡುಗಡೆ ಆಗ್ತಿದೆ. ಇದೀಗ ದರ್ಶನ್ ಪೋಸ್ಟ್ ಮುಖಾಂತರ ಧನ್ವೀರ್ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ.
ದರ್ಶನ್ ಪೋಸ್ಟ್ ಏನು?
ದರ್ಶನ್ ಪೋಸ್ಟ್‌ನಲ್ಲಿ, ʻನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ. ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ, ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ. ಜೈ ಕನ್ನಡ! ಜೈ ಕರ್ನಾಟಕ!ʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bengaluru central Jail: ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ, ಸಿಸಿಬಿಯಿಂದ ದರ್ಶನ್ ಆಪ್ತ ಧನ್ವೀರ್ ವಿಚಾರಣೆ
ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನ್ವೀರ್
ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನ್ವೀರ್ ಮಿಂಚಿದ್ದಾರೆ. ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ಕೂಡ ಚಿತ್ರದ ಸಣ್ಣ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಮೃದ್ಧಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ತಾರಾ, ಸಾಧುಕೋಕಿಲ, ರವಿಶಂಕರ್ ಚಿತ್ರದ ತಾರಾಗಣದಲ್ಲಿದ್ದಾರೆ.
ದರ್ಶನ್‌ಗೆ ಧನ್ವೀರ್, ಧನ್ವೀರ್‌ಗೆ ದರ್ಶನ್ ಸದಾ ಒಂದಲ್ಲ ಒಂದು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತ ಇರುತ್ತಾರೆ. ದರ್ಶನ್ ಸಂಕಷ್ಟಕ್ಕೆ ಸಿಲುಕಿದ ಸಮಯದಿಂದ ಧನ್ವೀರ್ ಬೆಂಬಲಕ್ಕೆ ನಿಂತಿದ್ದರು. ಬಳ್ಳಾರಿ ಜೈಲಿನಿಂದ ಬಿಡುಗಡೆಯಾದಾಗ ಸ್ವತಃ ದರ್ಶನ್ ಕಾರ್ ಚಲಾಯಿಸಿಕೊಂಡು ಕರೆದುಕೊಂಡು ಬಂದಿದ್ದರು. ಆ ಬಳಿಕ ವಿಜಯಲಕ್ಷ್ಮಿ ದರ್ಶನ್ ಜೊತೆ ನಿಂತಿದ್ದರು. ಇದೆಲ್ಲ ಪ್ರಚಾರಕ್ಕಾಗಿ ಎಂದು ಕೆಲವರು ಕುಹಕವಾಡಿದರೂ ಧನ್ವೀರ್ ತಲೆ ಕೆಡಿಸಿಕೊಳ್ಳಲಿಲ್ಲ. ಏನೇ ಆದ್ರೂ ದರ್ಶನ್ ಜೊತೆ ನಿಲ್ತೀನಿ ಎಂದಿದ್ದರು.
ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಸಿನಿಮಾರಂಗಕ್ಕೆ ಬಂದರೂ ಕೂಡ ದೊಡ್ಡ ದೊಡ್ಡ ನಟ ನಟಿಯರ ಒಡನಾಟ ಅವರಿಗೆ ಮೊದಲಿನಿಂದಲೂ ಇದೆ. ಧನ್ವೀರ್ ಅವರು 2019ರಲ್ಲಿ ತೆರೆಕಂಡ ಸಿಂಪಲ್ ಸಿನಿ ನಿರ್ದೇಶನದ `ಬಜಾರ್' ಚಿತ್ರದ ಮೂಲಕ ಸ್ವಲ್ಪ ಮಟ್ಟಿಗೆ ಜನ ಮಾನ್ಯತೆ ಪಡೆದು ಬಳಿಕ ಬೈಟು ಲವ್, ಕೈವ, ವಾಮನ ಸಿನಿಮಾಗಳಲ್ಲಿ ಕೂಡ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಾಯಕ ನಟನೆನಿಸಿದ್ದಾರೆ.
ಇದನ್ನೂ ಓದಿ: Hayagrriva Teaser: ‘ಹಯಗ್ರೀವ‘ ಟೀಸರ್ ಔಟ್; ಅಬ್ಬರಿಸಿದ ಧನ್ವೀರ್, ಪಾತ್ರ ಏನು?
ಇನ್ನು ಧನ್ವಿರ್ ಅವ ವಾಮನ ಸಿನಿಮಾ ಕೂಡ ಸಖತ್ ಸದ್ದು ಮಾಡಿತ್ತು. ಧನ್ವೀರ್ ಗೌಡ ಹಾಗೂ ರೀಷ್ಮಾ ನಾಣಯ್ಯ ನಟನೆಯ 'ವಾಮನ' ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿತ್ತು.