ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Toxic Movie: ಯಶ್ 'ಟಾಕ್ಸಿಕ್' ಸಿನಿಮಾಗೆ ಬಾಲಿವುಡ್ ಬ್ಯೂಟಿ ಎಂಟ್ರಿ: ರೆಬೆಕಾ ಆಗಿ ತಾರಾ ಸುತಾರಿಯಾ ಫಸ್ಟ್ ಲುಕ್ ವೈರಲ್!

Rocking Star Yash: ಇದೀಗ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲು ಮೂರು ತಿಂಗಳು ಬಾಕಿ ಇರುವಾಗಲೇ ಈ ಸಿನಿಮಾದಲ್ಲಿ ನಟ ಯಶ್ ಜೊತೆಗೆ ನಟಿ ತಾರಾ ಸುತಾರಿಯಾ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿ‌ಸುತ್ತಿದ್ದು ಅವರ ಫಸ್ಟ್ ಲುಕ್ ಫೋಟೊ ಆನ್ಲೈನ್ ನಲ್ಲಿ ಹರಿದಾಡುತ್ತಿದೆ.

ಟಾಕ್ಸಿಕ್ ಚಿತ್ರದಲ್ಲಿ ತಾರಾ ಸುತಾರಿಯಾ ಹವಾ: ರೆಬೆಕಾ ಫಸ್ಟ್ ಲುಕ್ ಇಲ್ಲಿದೆ

ತಾರಾ ಸುತಾರಿಯಾ -

Profile
Pushpa Kumari Jan 3, 2026 3:27 PM

ಬೆಂಗಳೂರು, ಜ. 3: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ (Toxic Movie) ದಿನಕ್ಕೊಂದು ಹೊಸ ಹೊಸ ಅಪ್ಡೇಟ್ ಪಡೆಯುತ್ತಲೇ ಇದೆ. ಕೆಜಿಎಫ್ ಸಿನಿಮಾ ರಿಲೀಸ್ ಆಗಿ ಕೋಟಿ ಕೋಟಿ ದಾಖಲೆ ಮಾಡಿದ್ದ ಬಳಿಕ ಯಶ್ ಅಭಿನಯದ ಸಿನಿಮಾ ತೆರೆ ಮೇಲೆ ಬಂದಿರಲಿಲ್ಲ. ಸದ್ಯ ಅವರು ಟಾಕ್ಸಿಕ್ ಮತ್ತು ರಾಮಾಯಣಂ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಇವೆರಡು ಸಿನಿಮಾ ಈ ವರ್ಷದಲ್ಲಿ ತೆರೆ ಮೇಲೆ ಬಂದು ಹೊಸ ದಾಖಲೆ ನಿರ್ಮಿಸಲು ಈಗಲೇ ಸಜ್ಜಾಗುತ್ತಿದೆ. ಟಾಕ್ಸಿಕ್ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಅನ್ನು ಕಂಪ್ಲೀಟ್ ಮಾಡಿದ್ದು ಸಿನಿಮಾ ಬಗ್ಗೆ , ವಿವಿಧ ಪಾತ್ರವರ್ಗದ ಬಗ್ಗೆ ಆಗಾಗ ಹೊಸ ಹೊಸ ಅಪ್ಡೇಟಿಂಗ್ ಮಾಹಿತಿ ವೈರಲ್ ಆಗುತ್ತಲೆ ಇದೆ‌. ಅಂತೆಯೇ ಇದೀಗ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲು ಮೂರು ತಿಂಗಳು ಬಾಕಿ ಇರುವಾಗಲೇ ಈ ಸಿನಿಮಾದಲ್ಲಿ ನಟ ಯಶ್ ಜೊತೆಗೆ ನಟಿ ತಾರಾ ಸುತಾರಿಯಾ (Tara Sutaria) ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿ‌ ಸುತ್ತಿದ್ದು ಅವರ ಫಸ್ಟ್ ಲುಕ್ ಫೋಟೊ ಆನ್ಲೈನ್ ನಲ್ಲಿ ಹರಿದಾಡುತ್ತಿದೆ.

ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ - ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದಲ್ಲಿ ಬಹುದೊಡ್ಡ ತಾರಾಗಣ ಇರುವ ವಿಚಾರ ನಮಗೆಲ್ಲ ತಿಳಿದೆ ಇದೆ. ಲೆಡಿ ಸೂಪರ್ ಸ್ಟಾರ್ ನಯನ ತಾರಾ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಅವರ ಜೊತೆಗೆ ನಟಿ ಹುಮಾ ಖುರೇಷಿ ಸಹ ಟಾಕ್ಸಿಕ್ ನಲ್ಲಿ ಮಿಂಚಲಿದ್ದಾರೆ ಎಂಬ ಮಾಹಿತಿ ಕಳೆದ ಕೆಲ ತಿಂಗಳ ಹಿಂದೆ ವೈರಲ್ ಆಗಿತ್ತು. ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಪಾತ್ರದ ಪರಿಚಯ ಕೂಡ ಮಾಡಲಾಗಿದ್ದು ಇದೀಗ ಬಾಲಿ ವುಡ್ ನಟಿ ತಾರಾ ಸುತಾರಿಯಾ ಕೂಡ ಇದೇ ಸಿನಿಮಾದಲ್ಲಿ ಮಿಂಚಲಿದ್ದಾರೆ ಎಂಬ ಮಾಹಿತಿ ಸದ್ಯ ಸಂಚಲನ ಉಂಟು ಮಾಡುತ್ತಿದೆ.

ತಾರಾ ಸುತಾರಿಯಾ ಅವರ ಫಸ್ಟ್ ಲುಕ್ ಫೋಟೊ ಜನವರಿ 3ರಂದು ರಿವಿಲ್ ಆಗಿದ್ದು ಅವರ ಪಾತ್ರ ಯಾವುದು ಎಂದು ತಿಳಿದುಬಂದಿಲ್ಲ. ಅವರ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಅವರ ನೋಟವು ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ನೋಟವು ಚಿತ್ರದ ರೆಟ್ರೊ ಥೀಮ್‌ಗೆ ಅನುಗುಣವಾಗಿದೆ. ಈ ಪೋಸ್ಟ್ ಅನ್ನು ಸ್ವತಃ ರಾಕಿಂಗ್ ಸ್ಟಾರ್ ಯಶ್ ಅವರೆ ಹಂಚಿಕೊಂಡಿದ್ದು ಟಾಕ್ಸಿಕ್ ಚಿತ್ರದಲ್ಲಿ ತಾರಾ ಸುತಾರಿಯಾ ಅವರನ್ನು ರೆಬೆಕ್ಕಾ ಆಗಿ ಪರಿಚಯಿಸಲಾಗುತ್ತಿದೆ ಎಂದು ಚಿತ್ರದ ಪೋಸ್ಟರ್ ಮೇಲೆ ಬರೆದದ್ದನ್ನು ಕಾಣಬಹುದು.

Mysaa Movie: ಮೊದಲ ಬಾರಿಗೆ ರಗಡ್‌ ರೋಲ್‌ನಲ್ಲಿ ʻನ್ಯಾಷನಲ್‌ ಕ್ರಶ್‌ʼ; ʻಈ ಹೆಸರನ್ನು ನೆನಪಿಟ್ಟುಕೊಳ್ಳಿʼ ಎಂದ ರಶ್ಮಿಕಾ ಮಂದಣ್ಣ!

ಟಾಕ್ಸಿಕ್ ಸಿನಿಮಾದಲ್ಲಿ ಮಹಿಳಾ ಪ್ರಧಾನ ಪಾತ್ರಗಳೇ ಹೆಚ್ಚಾಗಿದ್ದು ಹಾಲಿವುಡ್ ಸ್ಪೆಷಲ್ ಎಫೆಕ್ಟ್ ಅನ್ನು ಕಾಣಬಹುದು. ತಾರಾ ಸುತಾರಿಯಾ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಗೌನ್, ಲೇಸ್ ಗ್ಲೌಸ್ ಮತ್ತು ಫ್ರೀ ಹೇರ್ ಸ್ಟೈಲ್ ಮಾಡಿದ್ದನ್ನು ಕಾಣಬಹುದು. ಬಂದೂಕು, ಪಿಸ್ತೂಲ್ ,ರೈಫಲ್ ಹಿಡಿದು ಹೋರಾಟ ಮಾಡುವ ಖತರ್ ನಾಕ್ ಲೇಡಿ ಪಾತ್ರದಲ್ಲಿ ಇವರು ತೆರೆ ಮೇಲೆ ಮಿಂಚಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಕಿಯಾರಾ ಅಡ್ವಾಣಿಯನ್ನು ನಾಡಿಯಾ ಆಗಿ, ಹುಮಾ ಖುರೇಷಿಯನ್ನು ಎಲಿಜಬೆತ್ ಆಗಿ ಮತ್ತು ನಯನತಾರಾಳನ್ನು ಚಿತ್ರದ ಗಂಗಾ ಆಗಿ ಪರಿಚಯಿಸಿದ್ದು ಇದೀಗ ಅವರ ಬೆನ್ನಲ್ಲೆ ಬಾಲಿವುಡ್ ನಟಿ ತಾರಾ ಸುತಾರಿಯಾ ಅವರನ್ನು ರೆಬೆಕ್ಕಾ ಆಗಿ ಪರಿಚಯಿಸಲಾಗಿದ್ದು ಈ ಎಲ್ಲ ಮಹಿಳಾ ತಾರೆಯರು ರೆಟ್ರೋ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವಂತಿದೆ.

ಟಾಕ್ಸಿಕ್ ಸಿನಿಮಾವು ಗ್ಯಾಂಗ್‌ಸ್ಟರ್ ಕಥೆಯಾದರಿತ ಚಿತ್ರವಾಗಿದ್ದು ಇದನ್ನು ಗೀತು ನಿರ್ದೇಶಿಸಿದ್ದಾರೆ. ವೆಂಕಟ್ ಕೆ. ನಾರಾಯಣ ಮತ್ತು ಯಶ್ ಅವರು ತಮ್ಮ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್, ಲೇಡಿ ಸೂಪರ್ ಸ್ಟಾರ್ ನಯನತಾರಾ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ , ತಾರಾ ಸುತಾರಿಯಾ, ಹುಮಾ ಖುರೇಷಿ, ಕಾಂತಾರಾ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್, ಅಕ್ಷಯ್ ಒಬೆರಾಯ್ ಮತ್ತು ಸುದೇವ್ ನಾಯರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು ಮಾರ್ಚ್ 19 ರಂದು ಈ ಸಿನಿಮಾ ರಿಲೀಸ್ ಆಗಲಿದೆ.